ಪದ ವಿನ್ಯಾಸ -೨

ಪದ ವಿನ್ಯಾಸವನ್ನು ವೀಕ್ಷಿಸಲು ಕೆಳಗಿನ ಲಿಂಕ್ ಒತ್ತಿ. ನಂತರ ಓಪನ್ ಬಟನ್ ಕ್ಲಿಕ್ ಮಾಡಿ.
ಪದ ವಿನ್ಯಾಸ -೨

ಹೀಗೂ ವಾಕ್ಯ ರಚನೆ ಸಾಧ್ಯವೇ....?!

"ನೀ ನನ್ನನೇನನ್ನು ನಾ ನಿನ್ನನೇನನ್ನೆ"


ಈ ವಾಕ್ಯವನ್ನು ಮತ್ತೊಮ್ಮೆ ಮಗದೊಮ್ಮೆ ಓದಿನೋಡಿದಿರಾ - ಇದನ್ನು ಓದಿದಾಗ ವಾಹ್...ಎನ್ನಿಸುತ್ತದೆ. ಹೀಗೂ ವಾಕ್ಯ ರಚನೆ ಸಾಧ್ಯವೇ ಎಂಬ ಕುತೂಹಲ ಮೂಡುತ್ತದೆ.  ಎಷ್ಟು ಚೆನ್ನಾಗಿದೆ ನೋಡಿ. ನನ್ನ ಸಹೋದ್ಯೋಗಿಯೊಬ್ಬರು ತಾವು ಎಲ್ಲೋ ಓದಿದ ಈ ಸಾಲುಗಳನ್ನ ನನಗೆ ಹೇಳಿದರು. ನಾನೂ ಇದೇ ರ‍ೀತಿಯ ಒಂದಾದರೂ ಸಾಲನ್ನು ರಚಿಸಿ ನನ್ನ ಬೆನ್ನನ್ನು ನಾನೇ ತಟ್ಟಿಕೊಳ್ಳೋಣ ಎಂದು ಪ್ರಯತ್ನಿಸಿದೆ. ಸಾಧ್ಯವಾಗಲಿಲ್ಲ.

ಇದೇ ರೀತಿಯ ವಾಕ್ಯಗಳನ್ನು ರಚಿಸಲು ನಿಮ್ಮಿಂದ ಆಗುವುದೇ.... ಪ್ರಯತ್ನಿಸಬಾರದೇಕೆ?



ಒಂದೇ ಅಕ್ಷರದ ಗುಣಿತಾಕ್ಷರಗಳನ್ನು ಮತ್ತು ಅದರ ಒತ್ತಕ್ಷರವನ್ನು ಮಾತ್ರ ಬಳಸಬೇಕು. ಅಲ್ಲದೆ ವಾಕ್ಯ ಅರ್ಥವತ್ತಾಗಿರಬೇಕು.

ಸಂಪದದಲ್ಲಿ ಇದೇ ರೀತಿಯ ವಾಕ್ಯ ರಚನೆಗೆ ಸಂಪದಿಗರು ಪ್ರಯತ್ನಿಸಿದ್ದು ನೋಡಲು ಇಲ್ಲಿ ಕ್ಲಿಕ್ಕಿಸಿ .

ಪದವಿನ್ಯಾಸ -೧- ಉತ್ತರಗಳು

ಎಡದಿಂದ ಬಲಕ್ಕೆ:-

೧.ಕನ್ನಡರಾಜ್ಯೋತ್ಸವ
೫.ನವೋದಯ
೬.ಪದಕ
೮.ಶಾಪಸತಿ
೧೦.ಸಹ
೧೨.ರಾಗರಂಗು
೧೫.ನವರಸ
೧೭.ಹಿಮ
೧೯.ಕರವೀರಾ
೨೧.ರಭಸ
೨೨.ಕಹೋದಿಬೀ
೨೪.ಚಿಕವೀರರಾಜೇಂದ್ರ

ಮೇಲಿನಿಂದ ಕೆಳಕ್ಕೆ:-
೧.ಕಲ್ಲಿನಬರಹ
೨.ರಾಷ್ಟ್ರಪತಿ
೩.ವನ
೪.ಪಾಯಸ
೭.ಕಸ
೯.ಸಸಾರ
೧೧.ಹರಾ
೧೩.ಗಮಾರ
೧೪.ಗುರುರಾಘವೇಂದ್ರ
೧೬.ಸಹಿ
೧೮.ಮರ
೧೯.ಕಸವರ
೨೦.ನಕಲಿ
೨೩.ಬೀಚಿ

ನೆನಪುಗಳ ಮಾತು ಮಧುರ...೪

ನೆನಪುಗಳ ಮಾತು ಮಧುರ...೪

 ನನ್ನ ಮಗಳು ಸಾಫ್ಟ್ ವೇರ್ ಇಂಜಿನಿಯರ್. ಅವಳಿಗೆ ಜೀವನ ಸಂಗಾತಿಯಾಗಿ ಸಿಕ್ಕಿದ್ದು ಶಿವಮೊಗ್ಗದವರೇ ಆದ, ಆದರೆ ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಡೆಂಟಿಸ್ಟ್
ಡಾ|| ಗಿರೀಶ್. ಅವರು ಅಲ್ಲಿಗೆ ಹೋಗಿ ಒಂದೆರಡು ವರ್ಷವಾಗಿತ್ತು. ಗಿರೀಶ್ ರವರ ಇಂಡಿಯಾದ ಸ್ನೇಹಿತರೇ ಅಲ್ಲದೇ, ಇಬ್ಬರು ಆಸ್ಟ್ರೇಲಿಯಾದ ಸ್ನೇಹಿತರು  ಕೂಡ ಮದುವೆಗೆಂದು ಆಗಮಿಸಿದ್ದು ವಿಶೇಷವೆನ್ನಿಸಿತ್ತು.ಅವರಿಬ್ಬರೂ ಮದುವೆಯ ನೆಪದಲ್ಲಿ ಹದಿನೈದು ದಿನ ಮೊದಲೇ ಬಂದು, ಭಾರತದ ಕೆಲವು ಪ್ರೇಕ್ಷಣೀಯ  ಸ್ಥಳಗಳನ್ನುಸಂದರ್ಶಿಸಿದರು.

ಮದುವೆಗೆ ಎರಡು ದಿನ ಮುಂಚೆ ಶಿವಮೊಗ್ಗಕ್ಕೆ ಬಂದರು.ಇವರಿಬ್ಬರು ಮದುವೆಗಾಗಿ ನಡೆಯುತ್ತಿದ್ದ ಸಿದ್ಧತೆಗಳನ್ನು ಆಸಕ್ತಿಯಿಂದ ವೀಕ್ಷಿಸುವುದೇ ಅಲ್ಲದೆ ಎಲ್ಲಾ ಕಾರ್ಯಕ್ರಮದಲ್ಲೂ ಭಾಗವಹಿಸುತ್ತಿದ್ದುದು ನಮಗೆ ಅಚ್ಚರಿ ಉಂಟುಮಾಡಿತು.ಚಪ್ಪರ ಹಾಕುವಾಗ ತಾವೂ ತೆಂಗಿನಗರಿ, ಮಾವಿನತೋರಣ ಹಿಡಿದು ಉತ್ಸಾಹದಿಂದ ಭಾಗಿಯಾದರು . ವಿವಾಹದ ಶಾಸ್ತ್ರಗಳನ್ನೆಲ್ಲ ಕುತೂಹಲದಿಂದ ವೀಕ್ಷಿಸಿದರು. ಛತ್ರದಲ್ಲಿ ಒಳ ಹೊರಗೆ ಓಡಾಡಿ, ಬಂದಿದ್ದ ನಮ್ಮ ಬಂಧು-ಮಿತ್ರರನ್ನೆಲ್ಲ ತಮ್ಮದೇ ಶೈಲಿಯಲ್ಲಿ ಸ್ವಾಗತಿಸಿ, ನಗುನಗುತ್ತಾ ಮಾತನಾಡಿಸಿ ಖುಷಿಪಡಿಸಿದರು.


ಸಂಜೆಯ ಆರತಕ್ಷತೆಗೆ ಈ ಆಸ್ಟ್ರೇಲಿಯನ್ಸ್, ಕೋಟು-ಟೈ ಧರಿಸಿದರೆ ಮಹೂರ್ತದ ವೇಳೆಗೆ ನಮ್ಮ ಪರಂಪರೆಯಂತೆ ಶೇರ್ವಾನಿ ಹಾಕಿಕೊಂಡು ನಮ್ಮ ಮೆಚ್ಚುಗೆಗೆ ಪಾತ್ರರಾದರು. ನಮ್ಮ ಊಟ-ತಿಂಡಿಯ ರುಚಿಯನ್ನು ಸವಿದರು.ಖಾರವಾದ ಉಪ್ಪಿನಕಾಯಿಯನ್ನಂತೂ ಚಪ್ಪರಿಸಿ ತಿಂದರು.





ಒಟ್ಟಿನಲ್ಲಿ ನಾವೆಲ್ಲರೂ ಇವರಿಬ್ಬರನ್ನು ಸದಾ ಕಾಲವೂ ನೆನಪಿಟ್ಟುಕೊಳ್ಳುವಂತೆ ನಡೆದುಕೊಂಡರು. ಇವರಿಬ್ಬರಿಗೂ ನಮ್ಮ ಧನ್ಯವಾದಗಳು.