Bye…. Bye…. Telegram…!!!!!!

ನಾನು ಶಾಲೆಗೆ ಹೋಗುತ್ತಿದ್ದ ದಿನಗಳಲ್ಲಿ ,ನಮ್ಮ ಶಾಲೆಯ ಎದುರುಗಡೆಯೇ ಪೋಸ್ಟಾಫೀಸ್ ಇತ್ತು. ಶಾಲೆಗೆ ಹೋಗುವಾಗ ಮತ್ತು ಬರುವಾಗಲೆಲ್ಲಾ  ಪೋಸ್ಟಾಫೀಸಿನಿಂದ ಕಟ್ಟ.. ಕಡ..ಕಡ... ಎಂಬ ಶಬ್ದ ನಿರಂತರವಾಗಿ ಕಿವಿಗೆ ಬೀಳುತ್ತಿತ್ತು. ಇದೇನು ಎಂಬ ಕುತೂಹಲ ನನ್ನದಾಗಿತ್ತು....??!!!.ಸ್ವಲ್ಪ ಬೆಳೆದ ನಂತರ Post card ತರಲು ಪೋಸ್ಟಾಫೀಸಿಗೆ ಹೋದಾಗ ಈ ಶಬ್ದ ಏನು ಅಂತ ಕೇಳಿಯೇ ಬಿಟ್ಟೆ....!! ಆಗ ನನಗೆ ತಿಳಿದು ಬಂತು,  ಇದು ಟೆಲಿಗ್ರಾಂ ಕಳುಹಿಸುವ ಯಂತ್ರದ ಶಬ್ದವೆಂದು...!! ಕೇವಲ ಕಟ್ಟ.. ಕಡ..ಕಡ... ಸದ್ದಿನೊಂದಿಗೆ ಸಂದೇಶಗಳನ್ನು ತಿಳಿಯಲು ಸಾಧ್ಯವೇ ಎಂಬ ಅಚ್ಚರಿ ನನಗಾಯಿತು....!!
ಇಂದು ರಾತ್ರಿ ಹನ್ನೆರಡು ಗಂಟೆಯಿಂದ ದೇಶಾದ್ಯಂತ ಈ ಸದ್ದು ಶಾಶ್ವತವಾಗಿ ನಿಂತುಹೋಗುತ್ತಿದೆ. ಅತಿ ಕಡಿಮೆ ದರದಲ್ಲಿ ದೇಶದ ಮೂಲೆಮೂಲೆಗಳಿಗೂ ಸಿಹಿ-ಕಹಿ ಸಂದೇಶಗಳನ್ನು ಹೊತ್ತು ತರುತ್ತಿದ್ದ ತಂತಿ ಸಂದೇಶ (Telegram), ನಾಳೆಯಿಂದ ಬರೀ ನೆನಪು ಮಾತ್ರ. ಜನಸಾಮಾನ್ಯರೊಂದಿಗೆ ಭಾವನಾತ್ಮಕವಾಗಿ ಬೆರೆತಿದ್ದ ಈ ಸೇವೆಗೊಂದು ನಮನ ಸಲ್ಲಿಸಲೋಸುಗವೇ ಈ ನನ್ನ ಲೇಖನ.

1982 ರಲ್ಲಿ ನನ್ನ ಮದುವೆಯ ಸಂದರ್ಭದಲ್ಲಿ, ಕಾರಣಾಂತರದಿಂದ ವಿವಾಹಕ್ಕೆ ಬರಲಾಗದವರು ತಮ್ಮ ಶುಭಾಶಯಗಳನ್ನು ಹಂಚಿಕೊಂಡಿದ್ದು ಈ Telegram ಮೂಲಕ...!!!
ಇನ್ನು 1996 ರಲ್ಲಿ ನಾನು ಮೈಸೂರಿಗೆ ಟ್ರೈನಿಂಗಿಗೆ ಹೋಗಿದ್ದೆ. ಆಗ ನನ್ನ ಹುಟ್ಟುಹಬ್ಬ ಬಂದಿತ್ತು. ಮದುವೆಯಾದಾಗಿನಿಂದ ನನ್ನವರೊಂದಿಗೆ ಆಚರಿಸಿಕೊಳ್ಳುತ್ತಿದ್ದ ನನ್ನ ಹುಟ್ಟುಹಬ್ಬ ಈ ಸಾರಿ ಅನಿವಾರ್ಯವಾಗಿ ತಪ್ಪಿಹೋಗಿತ್ತು. ಆಗ ನನ್ನವರ ಮತ್ತು ನನ್ನ ಮಗಳ ಶುಭಾಶಯಗಳನ್ನು ಹೊತ್ತು ತಂದಿದ್ದು ಸಹ ಈ ತಂತಿ ಸಂದೇಶವೇ...!!! ಈ ಎಲ್ಲಾ Telegramಗಳು , ನನ್ನ ಜೀವನದ ಸಿಹಿ ಸಂಕೇತಗಳಾಗಿ ಇಂದಿಗೂ ನನ್ನ ಬಳಿ ಜೋಪಾನವಾಗಿವೆ.
ನಾನು ಈಗ ಕೆಲಸ ಮಾಡುತ್ತಿರುವ  B S N L  ಸಂಸ್ಥೆ ,ಮೊದಲಿಗೆ P&T ಎಂದು ಹೆಸರಾಗಿತ್ತು. ಕಾಲಕ್ರಮೇಣ ವಿಶ್ವದಲ್ಲುಂಟಾದ ಸಂಪರ್ಕ ಕ್ರಾಂತಿಯಿಂದಾಗಿ  Telecommunication ಶಾಖೆ Postal ನಿಂದ ಬೇರ್ಪಟ್ಟಿತು. ಜಾಗತೀಕರಣದ ಕಾರಣದಿಂದಾಗಿ Telecommunication Department , Bharath Sanchar Nigam Limited (B S N L) ಆಗಿ ಬದಲಾಯಿತು. ವರ್ಷದಿಂದ ವರ್ಷಕ್ಕೆ ನೂತನ ಆವಿಷ್ಕಾರಗಳಿಗೆ ತನ್ನನ್ನು ತೆರೆದುಕೊಂಡಿತು.ನಮ್ಮ ಕೆಲಸದ ವೈಖರಿಯೂ ಬದಲಾಯಿತು. STD,ISD ಗಳ ಸೇವೆಗಳಿಂದಾಗಿ Trunk call ಸೇವೆ ತನ್ನ ಅಸ್ತಿತ್ವವನ್ನು ಕಳೆದುಕೊಂಡಿತು.  ಜಗತ್ತಿನ ಇತರ ರಾಷ್ಟ್ರಗಳೊಂದಿಗೆ ಪೈಪೋಟಿಯಾಗಿ ನಿಲ್ಲಬೇಕಾದ ಪರಿಸ್ಥಿತಿ...! ಹಾಗಾಗಿ ನಿಧಾನಗತಿಯ ಯಂತ್ರಗಳಿಗೆ ವಿದಾಯ ಹೇಳಲೇಬೇಕಾದ ಅನಿವಾರ್ಯತೆ ನಮ್ಮದಾಯಿತು.
Mobile, Computer, Internet ಸೇವೆಗಳು ವ್ಯಾಪಕವಾಗಿ ಬಳಕೆಗೆ ಬಂದಂತೆ ಸಂಪರ್ಕ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯೇ ಉಂಟಾಯಿತು. ಈಗ ಮನೆಯಲ್ಲಿಯೇ ಕುಳಿತು, ಚಿಟಿಕೆ ಹೊಡೆಯುವುದರಲ್ಲಿ ನಮ್ಮ ಸಂದೇಶಗಳನ್ನು ವಿಶ್ವದಾದ್ಯಂತ ಹಂಚಿಕೊಳ್ಳಬಹುದು. ಇಂತಹ email ಯುಗದಲ್ಲಿ Telegram ಇಷ್ಟು ದಿನ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದ್ದೇ ಹೆಚ್ಚು. ದೇಶದಲ್ಲಿ ದಿನವೊಂದಕ್ಕೆ ಲಕ್ಷಾಂತರದಲ್ಲಿದ್ದ ತಂತಿ ಸೇವೆ ಕೇವಲ ಸಾವಿರಕ್ಕಿಳಿದಾಗ ಸಂಸ್ಥೆಗೆ ನಷ್ಟವೂ ಹೆಚ್ಚು. ಈ ನಿಮಿತ್ತ B S N L  ಸಂಸ್ಥೆ  ಇಂದು ರಾತ್ರಿ ಹನ್ನೆರಡು ಘಂಟೆಯಿಂದ ಟೆಲಿಗ್ರಾಂ ಸೇವೆಯನ್ನು ಸ್ಥಗಿತಗೊಳಿಸುತ್ತಿದೆ. ಹೊಸನೀರು ಬಂದಾಗ ಹಳೆನೀರು ಕೊಚ್ಚಿ ಹೋಗಲೇಬೇಕು. ನಾವೆಲ್ಲರೂ email ಯುಗಕ್ಕೆ ಸಂತಸದಿಂದ ಕಾಲಿರಿಸಬೇಕು. ಸುಮಾರು ನೂರ ಅರವತ್ತು ವರ್ಷಗಳಿಂದಲೂ ನಮ್ಮ ಬದುಕಿನ ಸಿಹಿ-ಕಹಿ ಕ್ಷಣವನ್ನು ಹೊತ್ತು ತರುತ್ತಿದ್ದ ತಂತಿಸಂದೇಶ (Telegram)ಕ್ಕೆ ಸಂತಸದಿಂದಲೇ ವಿದಾಯ ಹೇಳೋಣ.

Bye…. Bye…. Telegram…!!!!!!

ಕೆಳಗಿನ ಲಿಂಕಿಗೂ ದಯವಿಟ್ಟು ಭೇಟಿ ಕೊಡಿ

https://www.facebook.com/photo.php?fbid=600128216698298&set=gm.481868878564334&type=1&theater

"ಗಣೇಶ ನಮಸ್ಕಾರ ಸ್ತೋತ್ರಂ"

ನಾನು ಚಿಕ್ಕವಳಿದ್ದಾಗ ಈ ಗಣಪತಿ ನಮಸ್ಕಾರ ಸ್ತೋತ್ರ ವನ್ನು ತುಂಬಾ ಹೇಳುತ್ತಿದ್ದೆ. ನನಗೆ ನಮ್ಮ ಅಮ್ಮ ಇದನ್ನು ಹೇಳಿಕೊಟ್ಟಿದ್ರು...!!! ನಾನು ಇತ್ತೀಚೆಗೆ ಇದನ್ನು ಸ್ವಲ್ಪ ಮರೆತುಬಿಟ್ಟಿದ್ದೆ. ..!!  ಆದರೆ ಇವತ್ತು ನನ್ನ ಹಳೆ ಪುಸ್ತಕದಲ್ಲಿ ಇದರ ಪೂರ್ಣ ಸಾಹಿತ್ಯ ಸಿಕ್ಕಾಗ ನನಗೆ ಅತೀವ ಸಂತಸವಾಯಿತು....!!!! ತಕ್ಷಣ ಇದನ್ನು Type ಮಾಡಿ ನನ್ನ Bolgಗೆ post ಮಾಡಿದ್ದೇನೆ....!!!!! ಇದನ್ನು ಇವತ್ತು ಲೆಕ್ಕವಿಲ್ಲದಷ್ಟು ಬಾರಿ ಹೇಳಿಕೊಂಡು ಆನಂದಿಸಿದ್ದೇನೆ....!!!! ಕಳೆದ ಬಾಲ್ಯದ ನೆನಪುಗಳಲ್ಲಿ ನಾನು ತೇಲಿಹೋಗಿದ್ದೇನೆ...!!! ಗೌರಿ-ಗಣಪತಿ ಹಬ್ಬದಲ್ಲಂತೂ ಈ ಸ್ತೋತ್ರವನ್ನು ಎಷ್ಟು ಹೇಳುತ್ತಿದ್ದೆವೋ ...!ಲೆಕ್ಕವಿಲ್ಲ....!! ಗಣಪತಿ ನೋಡಲು ಹೋಗುತ್ತಿದ್ದ ಮನೆಮನೆಯಲ್ಲಿಯೂ ಇದನ್ನು ಹಾಡುತ್ತಿದ್ದೆವು...!!! ನನ್ನ ಪ್ರಿಯ ಗಣಪ... ನಿನಗೆ ಕೋಟಿ ನಮಸ್ಕಾರಗಳು......!!!!!!
"ಗಣೇಶ ನಮಸ್ಕಾರ ಸ್ತೋತ್ರಂ"

ಜಯ ಜಯ ಗಣಪತಿ |
ಜಯ ಜಯ ಭೂಪತಿ |
ಜಯ ಜಯ ಪಾರ್ವತಿ ಪುತ್ರನಿಗೆ |
ಜಯ ಜಯವೆಂದು ಜನಗಳು ಪೊಗಳಲು
ಭವಭಯಗಳ ಪರಿಹರಿಸುವನು ||

ಒಂದು ನಮಸ್ಕಾರವ ಮಾಡಲು ಕುಂದದೆ ಮುಕ್ತಿಯ ಕೊಡುವವನು |
ಎರಡು ನಮಸ್ಕಾರವ ಮಾಡಲು ಎಲ್ಲರ ಕರುಣದಿ ಕಾಯುವನು |

ಮೂರು ನಮಸ್ಕಾರವ ಮಾಡಲು ಮುಕ್ತಿಗೆ ಮಾರ್ಗವ ತೋರುವನು |
ನಾಲ್ಕು ನಮಸ್ಕಾರವ ಮಾಡಲು  ಮನುಜಗೆ ನರಕದ ಭಯವಿಲ್ಲ |

ಐದು ನಮಸ್ಕಾರವ ಮಾಡಲು ಮುತ್ತೈದೆತನ ಕೊಡುವವನು |
ಆರು ನಮಸ್ಕಾರವ ಮಾಡಲು ಹಾರಿಸುವನು ಪರಿಪಾಪಗಳ |

ಏಳು ನಮಸ್ಕಾರವ ಮಾಡಲು ಏಳು ಜನ್ಮದ ಶನಿ ತೊಲಗುವುದು |
ಎಂಟು ನಮಸ್ಕಾರವ ಮಾಡಲು ಕಂಟಕವನು ಪರಿಹರಿಸುವನು |

ನವ ನಮಸ್ಕಾರವ ಮಾಡಲು ನವ ವಿಧ ಪಾಪವು ಪರಿಹಾರ |
ಹತ್ತು ನಮಸ್ಕಾರವ ಮಾಡಲು  ಪುತ್ರರ ಕರುಣದಿ ಕಾಯುವನು |

ನೂರು ನಮಸ್ಕಾರವ ಮಾಡಲು ಘೋರ ನರಕದ ಭಯವಿಲ್ಲ |
ಸಾವಿರ ನಮಸ್ಕಾರವ ಮಾಡಲು ಶಿವಸಾಯುಜ್ಯವು ದೊರಕುವುದು |

ಲಕ್ಷ ನಮಸ್ಕಾರವ ಮಾಡಲು ಲಕ್ಷ್ಮೀ ಪದವಿಯ ಕೊಡುವವನು|
ಕೋಟಿ ನಮಸ್ಕಾರವ ಮಾಡಲು ಕೊಡುವನು ಬಹು ಧನ ಸಿರಿಗಳನು||