ಹಚ್ಚೋಣ ಹಣತೆ


ಬೆಲ್ಲದಂತಹ ಬದುಕು | ಬಲ್ಲಿದರ ಒಡನಾಟ |
ಎಲ್ಲ ಭಾಗ್ಯವ ಕೊಟ್ಟ ಗಣಪಗೆ | ನಮಿಸುತ್ತ
ಎಲ್ಲರೂ ಬೆಳಗೋಣ ಹಣತೆಯೊಂದ |

ಪದವಿಡಲು ನೆಲೆಯಿತ್ತು | ವಿಧವಿಧದ ಬೆಳೆ ಕೊಟ್ಟು |
ಬದುಕಿಗಾಸರೆಯಾದ ತಾಯಿ | ಭೂದೇವಿಗೆ
ಮುದದಲಿ  ಬೆಳಗೋಣ ಹಣತೆಯೊಂದ |

ಹೆತ್ತ ತಾಯಿಯ ಸ್ಮರಿಸಿ | ಪಿತನ ಪಾದಕೆ ನಮಿಸಿ|
ಮತ್ತೆ  ತಿದ್ದಿದ ಗುರುವಿಗೆ | ವಂದಿಸುತ
ಕೂತಲ್ಲೇ ಹಚ್ಚೋಣ ಹಣತೆಯೊಂದ |

ಮಕ್ಕಳಿಗೆ ಹಾಲಿತ್ತು | ಒಕ್ಕಲಿಗೆ ಸಗಣಿಯಿಟ್ಟು|
ಮುಕ್ಕೋಟಿ ದೇವತೆಯ ನೆಲೆಯಾದ | ಗೋಮಾತೆಗೆ 
ಅಕ್ಕರೆಯಲಿ ಹಚ್ಚೋಣ ಹಣತೆಯೊಂದ |#ಸರ್ವರಿಗೂ ದೀಪಾವಳಿಯ ಶುಭಾಶಯಗಳು. #

2 ಕಾಮೆಂಟ್‌ಗಳು:

  1. ಮೇಡಮ್,
    ಬಹಳ ದಿನಗಳ ಬಳಿಕ ನಿಮ್ಮ blogpostಅನ್ನು ಮತ್ತೆ ಓದುತ್ತಿದ್ದೇನೆ. ಹಣತೆಯನ್ನು ಹಚ್ಚಿದ್ದೀರಿ. ಸಾಲುದೀಪಗಳನ್ನು ಮುಂದುವರೆಸುವಿರಿ ಎಂದು ಹಾರೈಸುತ್ತೇನೆ.

    ಪ್ರತ್ಯುತ್ತರಅಳಿಸಿ
  2. ಪ್ರಯತ್ನಿಸುತ್ತೇನೆ ಅಂತ ಹೇಳೋದಕ್ಕೆ ಇಷ್ಟ ಪಡ್ತೀನಿ ಸಾರ್....ನಿಮ್ಮ ಹಾಗೆ ಆಳವಾದ ಅಧ್ಯಯನ ಮಾಡಿ ಬರೆಯುವವಳು ನಾನಲ್ಲ ....��ನಿಮ್ಮಸಲಹೆಗೆ ಧನ್ಯವಾದಗಳು ಸಾರ್ ��

    ಪ್ರತ್ಯುತ್ತರಅಳಿಸಿ

ನಿಮ್ಮ ಅಮೂಲ್ಯವಾದ ಸಲಹೆ ಮತ್ತು ಅಭಿಪ್ರಾಯಗಳಿಗೆ ಸದಾ ಸ್ವಾಗತವಿದೆ.