ಈ ದಿನ ಹಾಗೇ ಸುಮ್ಮನೆ ಅಂತ್ಯಾಕ್ಷರಿ ಮಾಡೋಣ ಅನ್ನಿಸಿತು....!!!ಎಲ್ಲವೂ ಸರಳ ಪ್ರಶ್ನೆಗಳು... ಎಲ್ಲಾ ಸುತ್ತುಗಳಿಗೂ ಸೇರಿ ನಿಮಗಿರುವ ಸಮಯ ಹತ್ತು ನಿಮಿಷಗಳು.ಉತ್ತರ ತಿಳಿಸುತ್ತೀರಲ್ವ..???
2................. ವೀರರಮಣಿಯ
ಸನ್ನಿವೇಶ ಸುತ್ತು:-
ಈ ಸುತ್ತಿನಲ್ಲಿ ಚಿತ್ರದ ಸನ್ನಿವೇಶದ ಬಗ್ಗೆ ಒಂದು ಚಿಕ್ಕ ಮಾಹಿತಿ ನೀಡಿದ್ದೇನೆ. ಆ ಸುಳಿವಿನ ಮೂಲಕ ಚಿತ್ರದ ಹೆಸರು ಮತ್ತು ಹಾಡು ಯಾವುದೆಂದು ಕಂಡು ಹಿಡಿಯಬೇಕು
1.ಮೊದಲ ಕನ್ನಡ ಸಾಮ್ರಾಜ್ಯವೆಂಬ ಹೆಗ್ಗಳಿಕೆಗೆ ಪಾತ್ರವಾದ ಕದಂಬರ ಪ್ರಸಿದ್ಧ ರಾಜನ ಕತೆಯ ಚಲನಚಿತ್ರವಿದು.ದುಷ್ಟ ರಾಜನ ಆಡಳಿತದಿಂದ ನೊಂದ ಬಡಜನರ ಕಣ್ಣೀರು ಒರೆಸಿ,ನಿಮ್ಮೊಂದಿಗೆ ನಾನಿದ್ದೇನೆ,ವೈರಿಗಳನ್ನು ಬಡಿದೋಡಿಸುವೆ ಎಂದು ಈ ಹಾಡಿನ ಮೂಲಕ ನಾಯಕ ನಾಡಿನ ಜನರಿಗೆ ಅಭಯ ನೀಡುವ ಹಾಡು.ಈ ಚಿತ್ರದಲ್ಲಿ ರಾಜ್ ಕುಮಾರ್ ಮತ್ತು ಮಂಜುಳ ಪ್ರಧಾನ ಪಾತ್ರದಲ್ಲಿದ್ದಾರೆ.
2.ತ್ರಿವೇಣಿ ಕಾದಂಬರಿ ಆಧಾರಿತ ,ಪುಟ್ಟಣ್ಣ ಕಣಗಾಲ್ ನಿರ್ದೇಶನದ ಮೊದಲ ಚಿತ್ರ.ಈ ಚಿತ್ರದ ನಾಯಕಿ ಕಾಫಿ ಎಸ್ಟೇಟ್ ಮಾಲೀಕರ ಒಬ್ಬಳೇ ಮಗಳು.ಬೆಳಗ್ಗೆ ತನ್ನ ತೋಟವನ್ನೆಲ್ಲ ಸುತ್ತಾಡುತ್ತಾ ಪೂಜೆಗಾಗಿ ಹೂಗಳನ್ನು ಕೀಳುತ್ತಾ, ದ ರಾ ಬೇಂದ್ರೆಯವರು ಬರೆದ ಈ ಗೀತೆಯನ್ನು ಹಾಡುತ್ತಾಳೆ.ಕಲ್ಪನಾ ಚಿತ್ರದ ನಾಯಕಿ.
3.ಶಾಪಕ್ಕೆ ಗುರಿಯಾದ ಏಳು ಜನ ಗಂಧರ್ವರು ಪೆದ್ದ ಶಿಷ್ಯರಾಗಿ ಭೂಮಿಗೆ ಬರುತ್ತಾರೆ. ಈ ಪೆದ್ದ ಶಿಷ್ಯರು ಹಾಡುವ ಜಾಣರ ಹಾಡಿದು.ಈ ಚಿತ್ರದ ಪ್ರಧಾನ ಭೂಮಿಕೆಯಲ್ಲಿ ವಿಷ್ಣುವರ್ಧನ್, ಮಂಜುಳ ಇದ್ದಾರೆ.
4.ವಿಶ್ವ ವಿಖ್ಯಾತ ಜೋಗವನ್ನು ಕುರಿತಾದ ಈ ಹಾಡನ್ನು ರಾಜ್ ಕುಮಾರ್ ಹಾಡಿದ್ದಾರೆ.
5.ವಿಷ್ಣುವರ್ಧನ್ ಮತ್ತು ಸುಹಾಸಿನಿ ಓಕುಳಿಯಾಡುತ್ತಾ ಹಾಡಿದ ಈ ಹಾಡು ನಾಯಕ ಕಂಡ ಕನಸು ಮಾತ್ರ.
6.ತನಗೊಂದು ಮಗು ಹುಟ್ಟುವುದರೊಂದಿಗೆ ಅಪ್ಪನೂ ಹುಟ್ಟುತ್ತಾನೆ.ಅದು ಬೆಳೆದಂತೆ ತಾನೂ ಬೆಳೆಯುತ್ತಾನೆ ಎನ್ನುವ ಈ ಚಿತ್ರದ ತಂದೆ ತನ್ನ ಮಗಳು ಹುಟ್ಟಿದಾಗ ಹಾಡುವ ಕನಸಿನ ಹಾಡು.
ಅಂತ್ಯ ಪದ ಸುತ್ತು:-
ಚಿತ್ರಗೀತೆಯ ಪಲ್ಲವಿಯ ಸಾಲಿನ ಕೊನೆಯ ಪದವನ್ನು ಕೊಟ್ಟಿದ್ದೇನೆ.ಹಾಡು ಯಾವುದೆಂದು ಗುರುತಿಸಿ.
1............ ಕಡಲಲ್ಲಿ
........... ದೋಣಿಯಲಿ
........... ನಾನಮ್ಮ
2................. ವೀರರಮಣಿಯ
................. ವೀರನಾರಿಯ
................. ಹಾಡುವೆ
3........... ಸಾಕ್ಷಾತ್ಕಾರ
........... ಮಮಕಾರ
........... ಮಮಕಾರ
4............ ನೀರಹಾಡು
............ ಪ್ರೀತಿಹಾಡು
............ ಇರುಳಿರಲಿ
............ ಹೇಗಿರಲಿ
............ ನೀ ತುಂಬಿದೆ
5..................... ಬದುಕಿರಲಾರೆ
..................... ನಾನಿರಲಾರೆ
..................... ತಾಳಲಾರೆ
..................... ಸಹಿಸಲಾರೆ
6.............. ಎಲ್ಲಿದೆ
.............. ಕೊನೆಯಿದೆ
.............. ಕಾಣುವೆ
...............ನಿಧಾನಿಸು
ಚಿತ್ರಗೀತೆಯಾಗಿರುವ ಕವಿಗಳ ಕವನ ಸುತ್ತು:-
1.ಕುವೆಂಪು ರವರು ಬರೆದ "ಹೊಸಬೆಳಕು" ಚಿತ್ರದ ಗೀತೆಯನ್ನು ಹೇಳಿ.
2."ಶರಪಂಜರ" ಚಿತ್ರದ ದ ರಾ ಬೇಂದ್ರೆ ವಿರಚಿತ ಗೀತೆ ಹೇಳಿ.
3.ಕುವೆಂಪು ವಿರಚಿತ ನಮ್ಮ ನಾಡಗೀತೆಯೂ ಚಲನಚಿತ್ರ ಗೀತೆಯಾಗಿದೆ. ಅದನ್ನು ಹೇಳಿ.
4.ದ ರಾ ಬೇಂದ್ರೆಯವರ ಜನಪ್ರಿಯ ಯುಗಾದಿಯ ಹಾಡನ್ನು ಹೇಳಿ.
5.ಗೌರಿ ಚಿತ್ರದಲ್ಲಿ ಕೆ ಎಸ್ ನರಸಿಂಹಸ್ವಾಮಿಯವರು ಬರೆದ ಕವನವನ್ನು ಹೇಳಿ.
6.ಕುವೆಂಪು ರವರು ಬರೆದ ಮನ್ನಾಡೆ ಹಾಡಿದ ಚಲನಚಿತ್ರ ಗೀತೆಯನ್ನು ಹೇಳಿ.
ಚರಣ - ಪಲ್ಲವಿ ಸುತ್ತು:-
ಚಿತ್ರಗೀತೆಯ ಚರಣದ ಸಾಹಿತ್ಯವನ್ನು ನೋಡಿ ಪಲ್ಲವಿಯನ್ನು ಹೇಳಿ
1.ಆಭರಣದ ಅಂಗಡಿಗೆ ಹೋಗೋಣ ಗಿಳಿಮರಿಯೆ
ಮುದ್ದಾದ ಮೂಗಿಗೆ ಮೂಗುತಿ ಹಾಕುವೆ
ಸೀರೆಗಳ ಅಂಗಡಿಗೆ ಹೋಗೋಣ ಬಾ ನವಿಲೆ
ಸಿಂಗಾರ ಮಾಡಲು ನಿನ್ನಂತೆ ನನ್ನನು
ಮುಗಿಲೆ ಓ ಮುಗಿಲೆ ಕೆನ್ನೆ ಕೆಂಪು ಏಕೆ
ನಿನ್ನಾ ನೋಡೋಕೆ ನಲ್ಲ ಬರುವನೇನೆ
ಗಾಳಿಯೇ ಕಂಪನು ಕದ್ದೊಯ್ವೆ ಎಲ್ಲಿಗೆ
2.ಕಾಶಿಲೀ ಸ್ನಾನ ಮಾಡು
ಕಾಶ್ಮೀರ ಸುತ್ತಿ ನೋಡು
ಜೋಗಾದ ಗುಂಡಿ ಒಡೆಯ ನಾನೆಂದು ಕೂಗಿ ಹಾಡು
ಅಜಂತಾ ಎಲ್ಲೋರನ ಬಾಳಲಿ ಒಮ್ಮೆ ನೋಡು
ಬಾದಾಮಿ ಐಹೊಳೆಯ ಚಂದಾನ ತೂಕ ಮಾಡು
ಕಲಿಯೋಕೆ ಕೋಟಿ ಭಾಷೆ
ಹಾಡೋಕೆ ಒಂದೇ ಭಾಷೆ ಕನ್ನಡ... ಕನ್ನಡ..ಕಸ್ತೂರಿ ಕನ್ನಡ
3.ಇರುಳಲ್ಲಿ ಜ್ವರದಂತೆ ಕಾಡಿ ಈಗ
ಹಾಯಾಗಿ ನಿಂತಿರುವೆ ಸರಿಯೇನು
ಬೇಕಂತಲೇ ಮಾಡಿ ಏನೋ ಮೋಡಿ
ಇನ್ನೆಲ್ಲೊ ನೋಡುವ ಪರಿಯೇನು
ಈ ಮಾಯೆಗೆ ಈ ಮರುಳಿಗೆ
ನಿನ್ನಿಂದ ಕರೆ ಬಂದಿದೆ.
4.ನಿನ್ನ ಈ ಮಕ್ಕಳನು ಪ್ರೇಮದಲಿ ನೀ ನೋಡು
ಈ ಮನೆಯು ಎಂದೆಂದು ನಗುವಂತೆ ನೀ ಮಾಡು
ನಂಬಿದರೆ ಭಯವಿಲ್ಲ ನಂಬದಿರೆ ಬಾಳಿಲ್ಲ
ಅಂಬಿಗನೆ ನೀ ನಡೆಸು ಈ ಬಾಳ ನೌಕೆ
ಯಾವ ನೋವೇ ಬರಲಿ ಎದೆಗುಂದದಿರಲಿ
ಸತ್ಯ ಮಾರ್ಗದೆ ನಡೆವ ಶಕ್ತಿ ಕೊಡು ತಂದೆ