ನೆನಪುಗಳ ಮಾತು ಮಧುರ....೧

ಒಂದು ವರ್ಷದ ಹಿಂದೆ ನಡೆದ ಮಗಳ ಮದುವೆಯ ಆಲ್ಬಂನ್ನೊಮ್ಮೆ ತಿರುವಿ ಹಾಕುತ್ತಿದ್ದಾಗ ಮೂಡಿದ ಭಾವ ಈ ಬರಹಕ್ಕೆ ಹಿನ್ನೆಲೆ. ನನ್ನ ಅನುಭವಗಳನ್ನು ದಾಖಲಿಸುವುದರೊಂದಿಗೆ ವಿವಾಹ ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ಕೈ ಜೋಡಿಸಿದವರೆಲ್ಲರನ್ನೂ ಮತ್ತೊಮ್ಮೆ ಕೃತಙ್ಞತೆಯಿಂದ ಸ್ಮರಿಸುವುದು ಈ ಲೇಖನದ ಉದ್ದೇಶ.   



ಶ್ರೀಯುತ ಕುಮಾರ ಸ್ವಾಮಿಯವರು ಶಿವಮೊಗ್ಗದ ಹೆಮ್ಮೆಯ ಕಲಾವಿದರಲ್ಲೊಬ್ಬರು. ಇವರು ರಾಜ್ಯಪ್ರಶಸ್ತಿ ವಿಜೇತ ಸ್ಯಾಕ್ಸೋಫೋನ್ ವಾದಕರು.ಇವರ ಸ್ಯಾಕ್ಸೋಫೋನ್  ವಾದನ ಕರ್ಣಾನಂದಕರವಾದುದು. ಇವರು ಸ್ಯಾಕ್ಸೋಫೋನ್ ನುಡಿಸುತ್ತಿದ್ದರೆ, ನಾವೆಷ್ಟೇ ಮದುವೆ ಮನೆಯ ಗದ್ದಲದಲ್ಲಿದ್ದರೂ ನಮ್ಮ ಕಿವಿ ನಮಗರಿವಿಲ್ಲದೆ ಅತ್ತ ಹೋಗುವುದು ಖಂಡಿತ..... ನನ್ನ ಮಗಳ ಮದುವೆಯ ಆರತಕ್ಷತೆಯಲ್ಲಿ ಇವರ ಸ್ಯಾಕ್ಸೋಫೋನ್ ವಾದನವು ಅಲೆ ಅಲೆಯಾಗಿ ತೇಲಿ ಬರುತ್ತಿತ್ತು.....ಭಕ್ತಿಗೀತೆಗಳು, ವಿವಾಹದ ಸಂದರ್ಭದಲ್ಲಿ
ನುಡಿಸಬಹುದಾದ ಚಲನಚಿತ್ರ ಗೀತೆಗಳನ್ನು ಒಂದಾದ ಮೇಲೆ ಒಂದರಂತೆ ನುಡಿಸಿ, ಆ ಸಂಜೆಯ ಆರತಕ್ಷತೆಗೆ ಮೆರಗನ್ನು ನೀಡಿದರು.... ಮದುವೆಗೆ ವಿಶಿಷ್ಟವಾದ ಕಳೆಯನ್ನು ತಂದುಕೊಟ್ಟರು.....


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಮೂಲ್ಯವಾದ ಸಲಹೆ ಮತ್ತು ಅಭಿಪ್ರಾಯಗಳಿಗೆ ಸದಾ ಸ್ವಾಗತವಿದೆ.