ಒಂದು ವರ್ಷದ ಹಿಂದೆ ನಡೆದ ಮಗಳ ಮದುವೆಯ ಆಲ್ಬಂನ್ನೊಮ್ಮೆ ತಿರುವಿ ಹಾಕುತ್ತಿದ್ದಾಗ ಮೂಡಿದ ಭಾವ ಈ ಬರಹಕ್ಕೆ ಹಿನ್ನೆಲೆ. ನನ್ನ ಅನುಭವಗಳನ್ನು ದಾಖಲಿಸುವುದರೊಂದಿಗೆ ವಿವಾಹ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಕೈ ಜೋಡಿಸಿದವರೆಲ್ಲರನ್ನೂ ಮತ್ತೊಮ್ಮೆ ಕೃತಙ್ಞತೆಯಿಂದ ಸ್ಮರಿಸುವುದು ಈ ಲೇಖನದ ಉದ್ದೇಶ.
ನೆನಪುಗಳ ಮಾತು ಮಧುರ...೩
"ಏರ್ ಇಂಡಿಯಾ" ಸಿಂಬಲ್ ನೋಡಿದ್ರೆ ಏನ್ ರಾಯಲ್ಲಾಗಿದೆ ಅನ್ಸುತ್ತೆ ಅಲ್ವಾ? ಇದೇ ರೀತಿಯ ಸ್ವಾಗತಕಾರನೊಬ್ಬ ಮದುವೆ ಛತ್ರದ ಬಾಗಿಲಲ್ಲಿ ಕಾಣುವಂತಾದರೆ ಹೇಗನ್ನಿಸಬಹುದು.....? ಹುಬ್ಬಳ್ಳಿಯವರಾದ ಶ್ರೀ ಚನ್ನಬಸಪ್ಪನವರು ಕುಳ್ಳನಾದರೂ ತನ್ನ ವೇಷಭೂಷಣದಿಂದ, ಹಾವಭಾವಗಳಿಂದ ಮದುವೆ ಮನೆಯಲ್ಲಿ ಎಲ್ಲರ ಗಮನವನ್ನ ತನ್ನೆಡೆಗೆ ಸೆಳೆದುಕೊಳ್ಳುವಲ್ಲಿ ಸಫಲರಾದರು. ಇವರು ವಧೂವರರನ್ನು ವೇದಿಕೆಗೆ ಕರೆದು ತಂದದ್ದು ವಿಶೇಷ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಅಮೂಲ್ಯವಾದ ಸಲಹೆ ಮತ್ತು ಅಭಿಪ್ರಾಯಗಳಿಗೆ ಸದಾ ಸ್ವಾಗತವಿದೆ.