ನೆನಪುಗಳ ಮಾತು ಮಧುರ...೪

ನೆನಪುಗಳ ಮಾತು ಮಧುರ...೪

 ನನ್ನ ಮಗಳು ಸಾಫ್ಟ್ ವೇರ್ ಇಂಜಿನಿಯರ್. ಅವಳಿಗೆ ಜೀವನ ಸಂಗಾತಿಯಾಗಿ ಸಿಕ್ಕಿದ್ದು ಶಿವಮೊಗ್ಗದವರೇ ಆದ, ಆದರೆ ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಡೆಂಟಿಸ್ಟ್
ಡಾ|| ಗಿರೀಶ್. ಅವರು ಅಲ್ಲಿಗೆ ಹೋಗಿ ಒಂದೆರಡು ವರ್ಷವಾಗಿತ್ತು. ಗಿರೀಶ್ ರವರ ಇಂಡಿಯಾದ ಸ್ನೇಹಿತರೇ ಅಲ್ಲದೇ, ಇಬ್ಬರು ಆಸ್ಟ್ರೇಲಿಯಾದ ಸ್ನೇಹಿತರು  ಕೂಡ ಮದುವೆಗೆಂದು ಆಗಮಿಸಿದ್ದು ವಿಶೇಷವೆನ್ನಿಸಿತ್ತು.ಅವರಿಬ್ಬರೂ ಮದುವೆಯ ನೆಪದಲ್ಲಿ ಹದಿನೈದು ದಿನ ಮೊದಲೇ ಬಂದು, ಭಾರತದ ಕೆಲವು ಪ್ರೇಕ್ಷಣೀಯ  ಸ್ಥಳಗಳನ್ನುಸಂದರ್ಶಿಸಿದರು.

ಮದುವೆಗೆ ಎರಡು ದಿನ ಮುಂಚೆ ಶಿವಮೊಗ್ಗಕ್ಕೆ ಬಂದರು.ಇವರಿಬ್ಬರು ಮದುವೆಗಾಗಿ ನಡೆಯುತ್ತಿದ್ದ ಸಿದ್ಧತೆಗಳನ್ನು ಆಸಕ್ತಿಯಿಂದ ವೀಕ್ಷಿಸುವುದೇ ಅಲ್ಲದೆ ಎಲ್ಲಾ ಕಾರ್ಯಕ್ರಮದಲ್ಲೂ ಭಾಗವಹಿಸುತ್ತಿದ್ದುದು ನಮಗೆ ಅಚ್ಚರಿ ಉಂಟುಮಾಡಿತು.ಚಪ್ಪರ ಹಾಕುವಾಗ ತಾವೂ ತೆಂಗಿನಗರಿ, ಮಾವಿನತೋರಣ ಹಿಡಿದು ಉತ್ಸಾಹದಿಂದ ಭಾಗಿಯಾದರು . ವಿವಾಹದ ಶಾಸ್ತ್ರಗಳನ್ನೆಲ್ಲ ಕುತೂಹಲದಿಂದ ವೀಕ್ಷಿಸಿದರು. ಛತ್ರದಲ್ಲಿ ಒಳ ಹೊರಗೆ ಓಡಾಡಿ, ಬಂದಿದ್ದ ನಮ್ಮ ಬಂಧು-ಮಿತ್ರರನ್ನೆಲ್ಲ ತಮ್ಮದೇ ಶೈಲಿಯಲ್ಲಿ ಸ್ವಾಗತಿಸಿ, ನಗುನಗುತ್ತಾ ಮಾತನಾಡಿಸಿ ಖುಷಿಪಡಿಸಿದರು.


ಸಂಜೆಯ ಆರತಕ್ಷತೆಗೆ ಈ ಆಸ್ಟ್ರೇಲಿಯನ್ಸ್, ಕೋಟು-ಟೈ ಧರಿಸಿದರೆ ಮಹೂರ್ತದ ವೇಳೆಗೆ ನಮ್ಮ ಪರಂಪರೆಯಂತೆ ಶೇರ್ವಾನಿ ಹಾಕಿಕೊಂಡು ನಮ್ಮ ಮೆಚ್ಚುಗೆಗೆ ಪಾತ್ರರಾದರು. ನಮ್ಮ ಊಟ-ತಿಂಡಿಯ ರುಚಿಯನ್ನು ಸವಿದರು.ಖಾರವಾದ ಉಪ್ಪಿನಕಾಯಿಯನ್ನಂತೂ ಚಪ್ಪರಿಸಿ ತಿಂದರು.





ಒಟ್ಟಿನಲ್ಲಿ ನಾವೆಲ್ಲರೂ ಇವರಿಬ್ಬರನ್ನು ಸದಾ ಕಾಲವೂ ನೆನಪಿಟ್ಟುಕೊಳ್ಳುವಂತೆ ನಡೆದುಕೊಂಡರು. ಇವರಿಬ್ಬರಿಗೂ ನಮ್ಮ ಧನ್ಯವಾದಗಳು.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಮೂಲ್ಯವಾದ ಸಲಹೆ ಮತ್ತು ಅಭಿಪ್ರಾಯಗಳಿಗೆ ಸದಾ ಸ್ವಾಗತವಿದೆ.