ಹೀಗೂ ವಾಕ್ಯ ರಚನೆ ಸಾಧ್ಯವೇ....?!

"ನೀ ನನ್ನನೇನನ್ನು ನಾ ನಿನ್ನನೇನನ್ನೆ"


ಈ ವಾಕ್ಯವನ್ನು ಮತ್ತೊಮ್ಮೆ ಮಗದೊಮ್ಮೆ ಓದಿನೋಡಿದಿರಾ - ಇದನ್ನು ಓದಿದಾಗ ವಾಹ್...ಎನ್ನಿಸುತ್ತದೆ. ಹೀಗೂ ವಾಕ್ಯ ರಚನೆ ಸಾಧ್ಯವೇ ಎಂಬ ಕುತೂಹಲ ಮೂಡುತ್ತದೆ.  ಎಷ್ಟು ಚೆನ್ನಾಗಿದೆ ನೋಡಿ. ನನ್ನ ಸಹೋದ್ಯೋಗಿಯೊಬ್ಬರು ತಾವು ಎಲ್ಲೋ ಓದಿದ ಈ ಸಾಲುಗಳನ್ನ ನನಗೆ ಹೇಳಿದರು. ನಾನೂ ಇದೇ ರ‍ೀತಿಯ ಒಂದಾದರೂ ಸಾಲನ್ನು ರಚಿಸಿ ನನ್ನ ಬೆನ್ನನ್ನು ನಾನೇ ತಟ್ಟಿಕೊಳ್ಳೋಣ ಎಂದು ಪ್ರಯತ್ನಿಸಿದೆ. ಸಾಧ್ಯವಾಗಲಿಲ್ಲ.

ಇದೇ ರೀತಿಯ ವಾಕ್ಯಗಳನ್ನು ರಚಿಸಲು ನಿಮ್ಮಿಂದ ಆಗುವುದೇ.... ಪ್ರಯತ್ನಿಸಬಾರದೇಕೆ?ಒಂದೇ ಅಕ್ಷರದ ಗುಣಿತಾಕ್ಷರಗಳನ್ನು ಮತ್ತು ಅದರ ಒತ್ತಕ್ಷರವನ್ನು ಮಾತ್ರ ಬಳಸಬೇಕು. ಅಲ್ಲದೆ ವಾಕ್ಯ ಅರ್ಥವತ್ತಾಗಿರಬೇಕು.

ಸಂಪದದಲ್ಲಿ ಇದೇ ರೀತಿಯ ವಾಕ್ಯ ರಚನೆಗೆ ಸಂಪದಿಗರು ಪ್ರಯತ್ನಿಸಿದ್ದು ನೋಡಲು ಇಲ್ಲಿ ಕ್ಲಿಕ್ಕಿಸಿ .

6 ಕಾಮೆಂಟ್‌ಗಳು:

 1. ರಂಗಶಂಕರದಲ್ಲಿ ನಡೆದ ಒಂದು ನಾಟಕದ ಹೆಸರು "ನೀ ನಾನಾದ್ರೆ ನಾ ನೀನೇನಾ". ಇದರಲ್ಲಿ 'ದ್' ಮತ್ತು 'ರ್' ಒತ್ತಕ್ಷರ ಇವೆ.

  ಪ್ರತ್ಯುತ್ತರಅಳಿಸಿ
 2. ಪ್ರಯತ್ನಿಸಿದ್ದಕ್ಕೆ ಧನ್ಯವಾದಗಳು.
  ಆದರೆ ’ದ’ ’ರ’ ಇರಬಾರದು ಅಲ್ವಾ?

  ಪ್ರತ್ಯುತ್ತರಅಳಿಸಿ
 3. ಕುಮಾರ ಸುಬ್ರಹ್ಮಣ್ಯರವರಿಗೆ ಧನ್ಯವಾದಗಳು

  ಪ್ರತ್ಯುತ್ತರಅಳಿಸಿ

ನಿಮ್ಮ ಅಮೂಲ್ಯವಾದ ಸಲಹೆ ಮತ್ತು ಅಭಿಪ್ರಾಯಗಳಿಗೆ ಸದಾ ಸ್ವಾಗತವಿದೆ.