ಬನದ ಕಾಮನಬಿಲ್ಲು....!!!!!ಚಿಟ್ಟೆ ಬಣ್ಣದ ಚಿಟ್ಟೆ
ಅಂದದ ಕಸೂತಿ ಬಟ್ಟೆ..!
ನಿನ್ನಯ ಮೈಯನು ಮುಟ್ಟೆ
ಸುಸ್ತಾಗಿ ಕಣ್ ಕಣ್ ಬಿಟ್ಟೆ.....!!

ಹೂವಿಂದುವ್ವಿಗೆ ಹಾರೇ
ಮಕರಂದವ ನೀ ಹೀರೇ..!
ಪರಾಗಸ್ಪರ್ಶವ ತಾರೇ
ಮೊಳಕೆಯೊಡೆಯಲಿ ಹಸಿರೇ..!!

ಅಸ್ಥಿರ ಬದುಕಿನ ಕೋಮಲೆ
ನಿನಗೆನ್ನುವರು ಚಂಚಲೆ...
ಬನದಂಗಳದ ಕಾಮನಬಿಲ್ಲೆ....!!!!
ಮನದಂಗಳದಲಿ ನೀ ನಿಂತೆಯಲ್ಲೆ...!!

(ಚಿತ್ರಕೃಪೆ-ಅಂತರ್ಜಾಲ)

4 ಕಾಮೆಂಟ್‌ಗಳು:

 1. ಚಿಟ್ಟೆಯನ್ನು ಬನದ ಅಂಗಳದ ಕಾಮನ ಬಿಲ್ಲಿಗೆ ಹೋಲಿಸಿರುವುದು ಸುಂದರವಾದ ಕಲ್ಪನೆಯಾಗಿದೆ. ಉತ್ತಮ ಕವನಕ್ಕಾಗಿ ಅಭಿನಂದನೆಗಳು.

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಹಸಿರು ಬನದಲ್ಲಿ ಪಟಪಟನೆ ಹಾರಾಡುವ, ರಂಗುರಂಗಿನ ಚಿಟ್ಟೆಗಳನ್ನು ನೋಡುತ್ತಿದ್ದರೆ ಸುಂದರ ಕಾಮನಬಿಲ್ಲು ನೆನಪಾಗುತ್ತದೆ.ಹಾಗಾಗಿ ಈ ಹೋಲಿಕೆ....
   ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು ಸಾರ್.

   ಅಳಿಸಿ
 2. ಮಂಜುಳಾವ್ರೇ ಸುಂದರವಾಗಿವೆ ಮೂರೂ ಚರಣ, ಮೊದಲನೆಯದು ಸುಂದರತೆ ಎರಡನೆಯದು ನಿಸರ್ಗ ನಿಯಮದ ಲೇಪನ, ಮೂರನೆಯದು ಭಾವಸಿಂಚನ... ಇಷ್ಟ ಆಯ್ತು...

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಜಲನಯನರವರೆ, ನಿಮ್ಮ ಅಭಿಪ್ರಾಯಕ್ಕೆ ನನ್ನ ಧನ್ಯವಾದಗಳು

   ಅಳಿಸಿ

ನಿಮ್ಮ ಅಮೂಲ್ಯವಾದ ಸಲಹೆ ಮತ್ತು ಅಭಿಪ್ರಾಯಗಳಿಗೆ ಸದಾ ಸ್ವಾಗತವಿದೆ.