ಕೈರ್ನ್ಸ್ ನಿಂದ ಹದಿನೈದು ನಿಮಿಷಗಳ ಡ್ರೈವ್ ಮಾಡಿದರೆ "ಕುರಾಂಡ" ತಲುಪಬಹುದು.
ಸಾಮಾನ್ಯವಾಗಿ ಹಳಿಗಳ ಮೇಲೆ ಚಲಿಸುವ ರೈಲಿನಲ್ಲಿ ನಾವೆಲ್ಲರೂ ಕುಳಿತು ಆನಂದಿಸಿರುತ್ತೇವೆ. ಕುರಾಂಡದಲ್ಲಿ ಇರುವುದು ಸ್ಕೈರೈಲು.....!!! ಕೇವಲ ಒಂದು ಕೇಬಲ್ಲಿನ ಆಧಾರ ದಿಂದ ಚಲಿಸುವ ಸ್ಕೈರೈಲಿನ ಗೊಂಡಾಲದಲ್ಲಿ ಕುಳಿತು, ಸಾವಿರಾರು ಅಡಿಗಳ ಮೇಲೆ ಪಯಣಿಸುವ ವಿಭಿನ್ನ ಅನುಭವವನ್ನು ನಾವಿಲ್ಲಿ ಪಡೆಯಬಹುದು.
|
ಸ್ಕೈರೈಲಿನಲ್ಲಿ ಬಾರೋನ ಫಾಲ್ಸಿನತ್ತ ನಮ್ಮ ಪಯಣ... |
|
ಆಕಾಶರೈಲಿನಲ್ಲಿ ನಾವು...ಕೆಳಗೆ ಮಾಮೂಲಿ ರೈಲು...!!!! |
ಇಲ್ಲಿನ ಸಂರಕ್ಷಿತ ಮಳೆ ಕಾಡನ್ನು ಗೊಂಡಾಲ(ಕ್ಯಾಬಿನ್)ದಲ್ಲಿ ಕುಳಿತು ಕೇಬಲ್ ವೇನಲ್ಲಿ ಹೋಗುತ್ತಾ ವೀಕ್ಷಿಸುವುದು ಒಂದು ವಿನೂತನ ಅನುಭವ.ಇದಕ್ಕೆ ಸ್ಕೈರೈಲ್ ಎಂದು ಕರೆಯುವರು. ಈ ಅರಣ್ಯದಲ್ಲಿ ಅನೇಕ ಜಾತಿಯ ಸಸ್ಯ ಪ್ರಭೇದಗಳು ಮತ್ತು ಆರ್ಕಿಡ್,ಚಿಟ್ಟೆಗಳ ಮತ್ತು ಪಕ್ಷಿಗಳ ಪ್ರಭೇದಗಳಿವೆ. ಗೊಂಡಾಲದಲ್ಲಿ ಕುಳಿತು ಕೆಳಗೆ ಕಾಣುವ ವನಸಿರಿಯ ಸೊಬಗನ್ನು ಸವಿಯಬಹುದು.
|
ಬಾರೋನ ಜಲಪಾತದ ರಮ್ಯ ನೋಟ |
ಕುರಾಂಡ ಟರ್ಮಿನಲ್ ನಿಂದ ಕೇಬಲ್ ಕಾರಿನಲ್ಲಿ ಹೊರಟರೆ ನಡುವೆ ಎರಡು ನಿಲ್ದಾಣಗಳಿವೆ. ಬಾರೋನ ಫಾಲ್ಸ್ ಸ್ಟೇಷನ್ ಮತ್ತು ರೆಡ್ ಪೀಕ್ ಸ್ಟೇಷನ್.ಇಲ್ಲಿ ಇಳಿದು ಕಾಡಿನಲ್ಲಿ ನಡೆದುಕೊಂಡು ಹೋಗಿ(ಇದಕ್ಕಾಗಿ ದಾರಿಯನ್ನು ಮಾಡಿದ್ದಾರೆ) ಫಾಲ್ಸ್ ಮತ್ತು ಪ್ರಕೃತಿಯ ಸೊಬಗನ್ನು ಹತ್ತಿರದಿಂದ ನೋಡಿ ಮತ್ತೆ ಗೊಂಡಾಲ ಹತ್ತಬೇಕು.
|
ಅಟ್ಟಣೆಗೆಯಲ್ಲಿ ನಿಂತು ಸಮೀಪದಿಂದ ಜಲಪಾತ ದರ್ಶನ |
|
Red Peak Station |
ಇಲ್ಲಿನ ಎರಡೂ ನಿಲ್ದಾಣಗಳಲ್ಲಿ ಇರುವ ಕಂಪ್ಯೂಟರ್ ಮತ್ತು ಭಿತ್ತಿಚಿತ್ರಗಳ ಮೂಲಕ ಈ ಅರಣ್ಯದಲ್ಲಿ ವಾಸಿಸುವ ಜೀವಿಗಳು,ವೃಕ್ಷ ಸಂಪತ್ತು ಮತ್ತು ಅವುಗಳ ಸಂರಕ್ಷಣೆಗಾಗಿ ತೆಗೆದುಕೊಂಡಿರುವ ಕ್ರಮಗಳ ಸಮಗ್ರ ಪರಿಚಯ ಮಾಡಿಕೊಡಲಾಗುತ್ತದೆ.ನಮ್ಮ ಈ ಆಕಾಶರೈಲಿನ ಪಯಣ ಕಾರ್ನವೋನಿಕಾ ಟರ್ಮಿನಲ್ಲಿನಲ್ಲಿ ಮುಕ್ತಾಯಗೊಂಡಿತು.
ಮೇಲಕ್ಕೆ ಏರುವಾಗ ನಿಧಾನವಾಗಿ ಚಲಿಸುವ ಗೊಂಡಾಲಗಳು ಇಳಿಯುವಾಗ ಸರಸರನೆ ಇಳಿದಂತೆ ಭಾಸವಾಗುತ್ತದೆ.ಇದು ಒಂದು ಅದ್ಭುತವಾದ ಅನುಭವ ನೀಡುವುದರೊಂದಿಗೆ ಮನಸ್ಸಿಗೆ ಉಲ್ಲಾಸವನ್ನು ತಂದುಕೊಟ್ಟಿತು.
|
ಹಿಂದಿಯಲ್ಲಿ ಬರೆದಿರುವ ಅನಿಸಿಕೆಯನ್ನು ಗಮನಿಸಿ..! |
ಕುರಾಂಡದಲ್ಲಿನ ಬಟರ್ ಫ್ಲೈ ಸ್ಯಾನ್ಚುರಿ ಯಲ್ಲಿ ಚಿಟ್ಟೆಗಳ ವೈವಿಧ್ಯಮಯ ಲೋಕ ಮನಸೆಳೆಯುತ್ತದೆ. ವಿವಿಧ ಜಾತಿಯ,ರಂಗು ರಂಗಿನ ಚಿಟ್ಟೆಗಳ ಜೀವನ ಶೈಲಿ, ಅವುಗಳ ಸ್ವಚ್ಛಂದ ವಿಹಾರ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ. ಇದಲ್ಲದೆ ಕೋಯಲ ಪಾರ್ಕ್,ಆರ್ಟ್ ಗ್ಯಾಲರಿಗಳು ಕುರಾಂಡದಲ್ಲಿ ನೋಡಬಹುದಾದ ಇನ್ನಿತರ ಸ್ಥಳಗಳು.