ಅನ್ನದಾನವೆ ಶ್ರೇಷ್ಠ ಎಂಬುದೊಂದು ಉಕ್ತಿ
ವಿದ್ಯಾದಾನಕ್ಕಿದೆ ಜ್ಞಾನದಾ ಬೆಳಕು ನೀಡುವ ಶಕ್ತಿ
ಮರಣದ ನಂತರ ನೀವು ಮಾಡುವ ನೇತ್ರದಾನ
ದಾನಗಳಲ್ಲೆಲ್ಲ ಶ್ರೇಷ್ಠ ಎಂದಿದೆ ವೈದ್ಯಕೀಯ ವಿಜ್ಞಾನ
ದೃಷ್ಠಿ ಹೀನರಿಗೆ ಬೆಳಕಾಗಬಲ್ಲ ನಿಮ್ಮ ನಯನ
ನಿಮ್ಮೊಡನೆ ಮಣ್ಣಾಗಿಸದೆ ನೀಡಿ ದೃಷ್ಠಿದಾನ
ಅಂಧಕಾರವೆಂಬುದು ಮನುಜಕುಲಕೆ ಶಾಪ
ನೀವಾಗಬಾರದೇಕೆ ಕಣ್ಣಿಲ್ಲದವರ ಬಾಳಬೆಳಗುವ ದೀಪ?
ಸುಟ್ಟು ಬೂದಿಯಾಗಬಾರದು ದೇಹ ನಿರರ್ಥಕವಾಗಿ
ಸಾರ್ಥಕವಾಗಲಿ ಬದುಕು ಅಂಧರ ಬಾಳಿನ ಬೆಳಕಾಗಿ
A very motivating beautiful poem. My compliments.
ಪ್ರತ್ಯುತ್ತರಅಳಿಸಿThank you Sir.
ಅಳಿಸಿಇತ್ತೀಚೆಗೆ ನಾನು ಓದಿದ ಅತ್ಯುತ್ತಮ ಪ್ರೇರಕ ಕವಿತೆ. ನನ್ನ ಎರಡೂ ನೇತ್ರಗಳು ಇಬ್ಬರ ಬಾಳನ್ನು ಬೆಳಗುವಂತಾಗಲೀ.
ಪ್ರತ್ಯುತ್ತರಅಳಿಸಿhttp://www.badari-poems.blogspot.in/
ಬದರಿನಾಥ್ ರವರೆ,
ಅಳಿಸಿನಾವೆಲ್ಲರೂ ನೇತ್ರದಾನದ ಜೊತೆಗೆ ಇತರ ಅಂಗಾಂಗದಾನಕ್ಕೂ ಮುಂದಾಗಬೇಕಿದೆ. ಹುಟ್ಟು ಸಾವಿನಲ್ಲಾದರೂ ಸಾರ್ಥಕತೆ ಪಡೆಯಲಿ ಎನ್ನಿಸುತ್ತಿದೆ. ನಿಮ್ಮ ನಿರ್ಧಾರಕ್ಕೆ ಧನ್ಯವಾದಗಳು. ನನ್ನ ಕವನವನ್ನು ಓದಿ ಪ್ರೋತ್ಸಾಹಿಸಿದ್ದಕ್ಕೆ ನನ್ನ ನಮನಗಳು.