ಗರಿಕೆ


ಹಸಿರು ಹಸಿರಾಗಿ ಬೆಳೆವ
ಪುಟ್ಟ ಹುಲ್ಲೇ....!
ಎಂಥ ಸಾರ್ಥಕ
ಬದುಕು ನಿನದಲ್ಲೆ...!!

ಗಾಳಿಮಳೆಗೆ ಧೃತಿಗೆಡದೆ
ನೀ ತಳೆವೆ ಸ್ಥಿರತೆ.
ಧರೆಯನಪ್ಪಿ ಬೆಳೆದು
ತೋರುತಿಹೆ ಧೃಡತೆ..!!

ಪೋಷಣೆಯ ಬಯಸದೆ
ಬೆಳೆವೆ ನೀ ಎಲ್ಲೆಲ್ಲು...
ಹೆಮ್ಮರಗಳೂ ನಮಿಸಿವೆ
ನಿನ್ನ ಅಚಲತೆಗೆ ಮರೆತು ಸೊಲ್ಲು...!!

ಪಶುಗಳ ಹಸಿವ ನೀಗಿ
ನೀನಾದೆ ಜೀವಾಧಾರ.
ಕೋಮಲ ತೆನೆಯಲ್ಲಿ
ತುಂಬಿಕೊಂಡಿರುವೆ ಮದ್ದಿನ ಸಾರ...!!

ಪ್ರಥಮ ಪೂಜ್ಯನಿಗೆ
ನೀನಾದೆ ಪ್ರಿಯ ಗರಿಕೆ..!
ಗಜಮುಖನು ಸೋತನೆ
ನಿನ್ನ ನಿರಹಂಕಾರಕೆ..!!!

ಮಂಗಳ ಕಾರ್ಯಕೆ
ರಕ್ಷಾಸೂತ್ರ ನೀ ದೂರ್ವೆ.
ಪರೋಪಕಾರವೆ ಜೀವನಸೂತ್ರ
ಎಂದು ನೀ ಸಾರುವೆ...!!!
        


4 ಕಾಮೆಂಟ್‌ಗಳು:

 1. ಹುಲ್ಲಿನ ಸಾರ್ಥಕತೆಯ ಅನಾವಣ ಇಲ್ಲಿದೆ.

  ಪ್ರತ್ಯುತ್ತರಅಳಿಸಿ
 2. ಹಳೆಯ ಕಾಲದ ಹಿರಿಯರು ಪುಟ್ಟ ಮಕ್ಕಳಿಗೆ "ಕರಿಕೆ ಬೇರಾಗು" ಎಂದು ಹರಸುವುದನ್ನು ಕೇಳಿದ್ದೆ. ನಿಮ್ಮ ಕವನವನ್ನು ಓದಿದಾಗ ಯಾಕೆ ಎನ್ನುವುದರ ಅರಿವಾಗುತ್ತದೆ. ಉತ್ತಮ ಕವನ.

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. " ಕರಿಗೆ ಬೇರಾಗು" ಎನ್ನುವ ಆಶೀರ್ವಾದವನ್ನು ನಾನು ಕೇಳಿರಲಿಲ್ಲ.ನಮ್ಮ ಹಿರಿಯರ ಹಾರೈಕೆಯಲ್ಲಿರುವ ಒಳಾರ್ಥವನ್ನು ಕೇಳಿ ನಾನು ಅಚ್ಚರಿಪಟ್ಟೆ. ಇದನ್ನು ತಿಳಿಸಿದ ನಿಮಗೆ ಧನ್ಯವಾದಗಳು ಸಾರ‍್.

   ಅಳಿಸಿ

ನಿಮ್ಮ ಅಮೂಲ್ಯವಾದ ಸಲಹೆ ಮತ್ತು ಅಭಿಪ್ರಾಯಗಳಿಗೆ ಸದಾ ಸ್ವಾಗತವಿದೆ.