ಆಸ್ಟ್ರೇಲಿಯಾದ Queens Land ರಾಜ್ಯದ ಕಡಲತೀರದ ಒಂದು ಸುಂದರ ನಗರ Townsville.ಈ ನಗರದ ಉತ್ತರಕ್ಕೆ Crains ಮತ್ತು ದಕ್ಷಿಣಕ್ಕೆ Brisbane ನಗರಗಳಿವೆ. ಈ ಎರಡು ದೊಡ್ಡ ನಗರಗಳಿಗೆ ಸೇತುವೆಯಂತಿದೆ ಈ ನಗರ. ತನ್ನ ಹೃದಯ ಭಾಗದಲ್ಲಿರುವ ಕ್ಯಾಸಲ್ ಬೆಟ್ಟ( Castal Hill) ದ ಸುತ್ತ ಹರಡಿಕೊಂಡಿರುವ ಸಮತಟ್ಟಾದ ಪ್ರದೇಶದಲ್ಲಿ ಟೌನ್ಸ್ವಿಲ್ಲ್ ನಗರ ಬೆಳೆದು ನಿಂತಿದೆ. ನಗರದ ತುಂಬೆಲ್ಲಾ ತಲೆ ಎತ್ತಿ ನಿಂತಿರುವ ಮರಗಳು ಈ ಊರನ್ನು ಹಸಿರಾಗಿಸಿವೆ ಮತ್ತು ತಂಪಾಗಿಸಿವೆ. ಇದೊಂದು ಅತ್ಯುತ್ತಮ ವಾಣಿಜ್ಯ ಕೇಂದ್ರ, ಕೈಗಾರಿಕ ಪ್ರದೇಶ, ಬಂದರು ಮತ್ತು ಪ್ರವಾಸೀತಾಣ.ಇಲ್ಲಿನ ಬಂದರಿನಿಂದ ಹಡಗಿನಲ್ಲಿ ಲೋಹಯುಕ್ತ ಅದಿರು, ಸಕ್ಕರೆ ಮುಂತಾದುವುಗಳನ್ನು ಬೇರೆಡೆಗೆ ರಫ್ತು ಮಾಡಲಾಗುತ್ತದೆ.
ಇದು ಚಿಕ್ಕ ನಗರವಾದರೂ ಸ್ನೇಹಜೀವಿ ಜನರಿರುವ ಸ್ಥಳ. ಇಲ್ಲಿ ವಾಸಿಸುವ ಬಹುತೇಕ ಜನರು ನಗರಕ್ಕೆ ಹತ್ತಿರವಿರುವ ಮೈನಿಂಗ್ ಇಂಡಸ್ಟ್ರಿಗಳಲ್ಲಿ ದುಡಿಮೆ ಮಾಡುತ್ತಾರೆ.ಇಲ್ಲಿನ ಸಾಲ್ಟ್ ವಾಟರ್ ಆಕ್ವೇರಿಯಮ್ ತುಂಬಾ ಪ್ರಸಿದ್ಧವಾದುದು. ಹಸಿರಾದ ಪಾರ್ಕುಗಳು ಮತ್ತು ತಿಳಿನೀರಿನ ಸರೋವರಗಳು ನಗರದ ಸೊಬಗನ್ನು ಹೆಚ್ಚಿಸಿವೆ. ಇಡೀ ನಗರದ ರಸ್ತೆಯ ಇಕ್ಕೆಲಗಳಲ್ಲಿ ಬೆಳೆಸಿರುವ ಹಸಿರು ಲಾನ್ ಕಣ್ಣಿಗೆ ತಂಪನ್ನೀಯುತ್ತದೆ. ನಗರದಲ್ಲಿ ಎಲ್ಲಿಯೇ ಹೋದರೂ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ತುಂಬಾ ಅಚ್ಚುಕಟ್ಟಾಗಿದೆ.ಇದೊಂದು ನಿರ್ಮಲವಾದ ಸುಂದರ ನಗರ.ಇವು ನಮ್ಮ ದೇಶಕ್ಕೆ ಮಾದರಿಯಾಗಿವೆ.ನಮ್ಮ ಮಗಳು- ಅಳಿಯ, ತಮ್ಮ ಕೆಲಸದೊತ್ತಡದ ಮಧ್ಯೆಯೂ ನಮ್ಮನ್ನು ಎಲ್ಲೆಡೆಯೂ ಸುತ್ತಾಡಿಸಿ,ಅಲ್ಲಿನ ವಿಶೇಷತೆಗಳನ್ನು ನಮಗೆ ವಿವರವಾಗಿ ತಿಳಿಸಿಕೊಟ್ಟರು.ಅದಕ್ಕಾಗಿ ಅವರಿಗೊಂದು ಧನ್ಯವಾದಗಳನ್ನು ನಾನು ಇಲ್ಲಿ ಹೇಳಲೇಬೇಕು. Thanks to Smitha & Girish...
ಈ ನಗರದಲ್ಲಿ ಹರಿಯುವ ರಾಸ್ ನದಿ ನಗರಕ್ಕೊಂದು ಶೋಭೆಯನ್ನು ತಂದಿದೆ.ನಮ್ಮ ಮಗಳಿದ್ದ ’Mint Apartment’ ಈ ನದಿಯ ದಂಡೆಯಲ್ಲಿದೆ.ಮನೆಯ ಹಿಂಭಾಗದ ಟೆರೇಸಿನಲ್ಲಿ ನಿಂತರೆ ನದಿಯ ನೀರಿನ ಏರಿಳಿತಗಳು,ನೀರಿನ ಸಣ್ಣ ಕಲರವ,ಮೀನಿಗಾಗಿ ಗಾಳ ಹಾಕಿ ಕುಳಿತ ಜನ,ಕಾದು ಕುಳಿತು ಸರ್ರನೆ ಹಾರಿ ಬಂದು ಮೀನನ್ನು ಕಚ್ಚಿ ಹಾರುವ ಹಕ್ಕಿಗಳ ದೃಶ್ಯಗಳು ಮನಸೆಳೆಯುತ್ತಿದ್ದವು.
ಇವುಗಳನ್ನು ನೋಡುತ್ತಲೇ ನಮ್ಮ ಊಟೋಪಚಾರಗಳು, ಮನೆಯ ಎಲ್ಲಾ ಕೆಲಸಗಳು ನಡೆಯುತ್ತಿದ್ದವು ಎಂದರೆ ತಪ್ಪಲ್ಲ....!! ಆ ಸುಂದರ ದಿನಗಳನ್ನು ಯಾವತ್ತಿಗೂ ಮರೆಯಲು ಸಾಧ್ಯವಿಲ್ಲ .
ಇವುಗಳನ್ನು ನೋಡುತ್ತಲೇ ನಮ್ಮ ಊಟೋಪಚಾರಗಳು, ಮನೆಯ ಎಲ್ಲಾ ಕೆಲಸಗಳು ನಡೆಯುತ್ತಿದ್ದವು ಎಂದರೆ ತಪ್ಪಲ್ಲ....!! ಆ ಸುಂದರ ದಿನಗಳನ್ನು ಯಾವತ್ತಿಗೂ ಮರೆಯಲು ಸಾಧ್ಯವಿಲ್ಲ .
ಟೌನ್ಸ್ವಿಲ್ಲ್ ನಲ್ಲಿ ಜನರ ಮನರಂಜನೆಗಾಗಿ ಅನೇಕ ಸುಂದರ ಬೀಚ್ ಗಳಿವೆ. ಅವುಗಳಲ್ಲಿ Pallarenda ಮತ್ತು Strand ಬೀಚುಗಳು ಪ್ರಮುಖವಾದುವುಗಳು.
Pallarenda Beach
ಇದು ಮರಳಿನಿಂದ ಕೂಡಿರುವ ಪ್ರಕೃತಿದತ್ತವಾದ ಸಮುದ್ರದಂಡೆ. ಇದನ್ನು ನೋಡಿದರೆ ನಮ್ಮ ಭಾರತದ ಬೀಚುಗಳನ್ನು ನೋಡಿದಂತೆ ಭಾಸವಾಯಿತು. ಆದರೆ ಇಲ್ಲಿರುವ ಸ್ವಚ್ಛತೆಯನ್ನು ಮಾತ್ರ ನಮ್ಮ ಸಮುದ್ರ ತೀರಗಳಲ್ಲಿ ಕಾಣಲು ಎಂದೆಂದಿಗೂ ಸಾಧ್ಯವಿಲ್ಲ ಎಂಬುದು ಮಾತ್ರ ಸತ್ಯ...!!!
ಸ್ಟ್ರಾಂಡ್ ಬೀಚ್ ಅತ್ಯಂತ ಉದ್ದವಾದ ಸಮುದ್ರ ತೀರವನ್ನು ಹೊಂದಿದೆ.ರಸ್ತೆ ಮತ್ತು ಸಮುದ್ರ ದಂಡೆಯ ಮಧ್ಯೆ ಬೆಳೆಸಿರುವ ಹಸಿರು ಲಾನ್ ಮತ್ತು ಮರಗಿಡಗಳು ಈ ಬೀಚಿನ ಸೌಂದರ್ಯವನ್ನು ಹೆಚ್ಚಿಸಿದೆ ಎಂದು ಹೇಳಬಹುದು.
ಇದು ಆಸ್ಟ್ರೇಲಿಯಾದಲ್ಲಿಯೇ ಸುಂದರವಾದ,ನಿರ್ಮಲವಾದ ಮತ್ತು ಅತ್ಯುತ್ತಮವಾದ ಬೀಚ್ ಎಂಬ ಹೆಗ್ಗಳಿಕೆಯನ್ನು ಪಡೆದಿದೆಯಂತೆ....! ಇಲ್ಲಿರುವ ಸ್ಟ್ರಾಂಡ್ ಪಾರ್ಕ್, ಸ್ವಿಮ್ಮಿಂಗ್ ಪೂಲ್, ರೆಸ್ಟೋರೆಂಟ್ ಗಳು, ಕಾಫಿಕೆಫೆಗಳ ಅನುಕೂಲಗಳು ಜನರನ್ನು ಆಕರ್ಷಿಸುವಲ್ಲಿ ಮತ್ತು ಮಕ್ಕಳಿಗೆ ಇಷ್ಟವಾಗುವಲ್ಲಿ ನೆರವಾಗಿವೆ.
ಬೆಳಗಿನ ವೇಳೆಯಲ್ಲಿ ಸುಂದರ ಸೂರ್ಯೋದಯವನ್ನು ಮತ್ತು ಸಂಜೆಯ ವರ್ಣರಂಜಿತ ಸೂರ್ಯಾಸ್ತವನ್ನು ಕಾಣಲು ಜನ ಇಲ್ಲಿಗೆ ಬರುತ್ತಾರೆ. ಬೆಳಗಿನ ಮತ್ತು ಸಂಜೆಯ ಜಾಗಿಂಗಿಗೆ ಹೇಳಿಮಾಡಿಸಿದ ಜಾಗವಿದಾಗಿದೆ.
ಇದು ಆಸ್ಟ್ರೇಲಿಯಾದಲ್ಲಿಯೇ ಸುಂದರವಾದ,ನಿರ್ಮಲವಾದ ಮತ್ತು ಅತ್ಯುತ್ತಮವಾದ ಬೀಚ್ ಎಂಬ ಹೆಗ್ಗಳಿಕೆಯನ್ನು ಪಡೆದಿದೆಯಂತೆ....! ಇಲ್ಲಿರುವ ಸ್ಟ್ರಾಂಡ್ ಪಾರ್ಕ್, ಸ್ವಿಮ್ಮಿಂಗ್ ಪೂಲ್, ರೆಸ್ಟೋರೆಂಟ್ ಗಳು, ಕಾಫಿಕೆಫೆಗಳ ಅನುಕೂಲಗಳು ಜನರನ್ನು ಆಕರ್ಷಿಸುವಲ್ಲಿ ಮತ್ತು ಮಕ್ಕಳಿಗೆ ಇಷ್ಟವಾಗುವಲ್ಲಿ ನೆರವಾಗಿವೆ.
Castle Hill
ಇದು ಟೌನ್ಸ್ವಿಲ್ಲ್ ನಗರದ ಮಧ್ಯಭಾಗದಲ್ಲಿದೆ. ಈ ಬೆಟ್ಟವನ್ನು ಕಾಲ್ನಡಿಗೆಯಲ್ಲಿ ಹತ್ತಬಹುದು. ಸಂಜೆಯ ವೇಳೆ ಈ ಬೆಟ್ಟವನ್ನು ಬಹಳ ಜನ ಹತ್ತಿ- ಇಳಿದು ತಮ್ಮ ದೇಹದ ತೂಕವನ್ನು ಸಮತೋಲನದಲ್ಲಿರಿಸಲು ಪ್ರಯತ್ನಿಸುತ್ತಾರೆ. ಅಂದರೆ ವ್ಯಾಯಮಕ್ಕೆ ಉತ್ತಮ ಜಾಗವಿದೆಂದು ಹೇಳಬಹುದು. ಈ ಬೆಟ್ಟದ ಮೇಲೇರಲು ರಸ್ತೆ ಸಹ ಇದೆ. ಹಾಗಾಗಿ ವಾಹನದಲ್ಲಿ ಕೂಡ ಬೆಟ್ಟದ ತುದಿ ತಲುಪಬಹುದು. ಬೆಟ್ಟದ ಮೇಲಿನಿಂದ ಟೌನ್ಸ್ವಿಲ್ಲ್ ನಗರ ಅತಿ ಸುಂದರವಾಗಿ ಕಾಣುತ್ತದೆ..! ಮ್ಯಾಗ್ನೆಟಿಕ್ ದ್ವೀಪದ ದೃಶ್ಯವನ್ನೂ ಇಲ್ಲಿಂದ ಸವಿಯಬಹುದು.....!! ರಾತ್ರಿ ವೇಳೆಯಲ್ಲಿ ಈ ದೃಶ್ಯಗಳು ಇನ್ನೂ ರಂಜನೀಯವೆನ್ನಿಸುತ್ತವೆ. ಈ ಬೆಟ್ಟವು ಅನೇಕ ಜಾತಿಯ ಸಸ್ಯ ಮತ್ತು ಪಕ್ಷಿಗಳನ್ನು ತನ್ನ ಒಡಲಿನಲ್ಲಿರಿಸಿಕೊಂಡಿದೆ.ಈ ಎಲ್ಲಾ ಕಾರಣದಿಂದಾಗಿ ಈ ಬೆಟ್ಟವು ಪ್ರವಾಸಿಗರನ್ನು ಅಕರ್ಷಿಸುತ್ತಿದೆ.
Shopping Complex
ಜನಮನ ಸೆಳೆಯುವ ಶಾಪಿಂಗ್ ಮಾಲ್ ಗಳಿವೆ. "ಕ್ಯಾಸಲ್ ಟೌನಿಗೆ" ಹೋದರೆ ಪ್ರತಿಯೊಂದು ವಸ್ತುವೂ ಒಂದೆಡೆಯೇ ಸಿಗುತ್ತದೆ.ಸವಿಸ್ತಾರವಾದ ಪಾರ್ಕಿಂಗ್ ಅನುಕೂಲವಿರುವ ಇಲ್ಲಿ BIG W , TARGET, WOOLWORTHS, BEST & LESS ಮುಂತಾದ ಬೃಹತ್ತಾದ ಮಾಲ್ ಗಳು ಇಲ್ಲಿ ಒಂದೆಡೆಯೇ ಇವೆ.....!!! ಹಾಗಾಗಿ ಇಲ್ಲಿ ಪರ್ಸಿನ ತುಂಬಾ ಹಣವಿಟ್ಟುಕೊಂಡು ಒಮ್ಮೆ ಒಳ ಹೋದರೆ, ಹೊರ ಬರಲು ಗಂಟೆಗಳೇ ಬೇಕಾಗುತ್ತದೆ..!!ಆದರೆ ಹಣ ಮಾತ್ರ ನೀರಿನಂತೆ ಹರಿದುಹೋಗುತ್ತದೆ ಅಷ್ಟೆ...!!!!
ಇಂಡಿಯನ್ ಸ್ಟೋರ್ ನಲ್ಲಿ ಭಾರತೀಯರಿಗೆ ಅವಶ್ಯವಾದ ಎಲ್ಲಾ ವಸ್ತುಗಳು ಅಂದರೆ ಅಡುಗೆಗೆ ಬೇಕಾದ ದಿನಸಿ ಸಾಮಾನುಗಳು, ತರಕಾರಿಗಳು ಎಲ್ಲವೂ ದೊರೆಯುತ್ತದೆ.ನಮ್ಮ ದೇಶದಲ್ಲಿ ಸಿಗುವುದಕ್ಕಿಂತಾ ತಾಜಾ ಮತ್ತು ಶುದ್ಧವಾಗಿರುತ್ತವೆ...!!ಇದು ನಿಜಕ್ಕೂ ಭಾರತೀಯರಾದ ನಮಗೆ ಸಮಾಧಾನಕರವಾದ ಸಂಗತಿ.
ನನ್ನ ಮಗಳು ಮತ್ತು ಅಳಿಯ ವಾಸವಾಗಿರುವ ನಗರದ ಬಗ್ಗೆ ನನಗೆ ಅಭಿಮಾನವಿದೆ.ಅಲ್ಲಿ ಓಡಾಡಿದ ಪ್ರತಿ ನಿಮಿಷವೂ, ಅಲ್ಲಿ ನೋಡಿದ ಪ್ರತಿಯೊಂದು ದೃಶ್ಯವೂ ನನಗೆ ಅವಿಸ್ಮರಣೀಯ ಆನಂದವನ್ನು ತಂದಿದೆ...!!!! ಅಲ್ಲಿನ ಶುಚಿತ್ವ, ಮೂಲಭೂತ ಸೌಕರ್ಯಗಳ ಸಮಂಜಸ ನಿರ್ವಹಣೆಯನ್ನು ಮೆಚ್ಚುವುದರೊಂದಿಗೆ ನಮ್ಮ ದೇಶದಲ್ಲಿ ಇದನ್ನು ಕಾಣುವುದು ಎಂದಿಗೆ ಎನ್ನುವ ಪ್ರಶ್ನೆ ಬೃಹದಾಕಾರವಾಗಿ ನನ್ನನ್ನು ಕಾಡುತ್ತಿದೆ......?!!!!