"ಗಣೇಶ ನಮಸ್ಕಾರ ಸ್ತೋತ್ರಂ"

ನಾನು ಚಿಕ್ಕವಳಿದ್ದಾಗ ಈ ಗಣಪತಿ ನಮಸ್ಕಾರ ಸ್ತೋತ್ರ ವನ್ನು ತುಂಬಾ ಹೇಳುತ್ತಿದ್ದೆ. ನನಗೆ ನಮ್ಮ ಅಮ್ಮ ಇದನ್ನು ಹೇಳಿಕೊಟ್ಟಿದ್ರು...!!! ನಾನು ಇತ್ತೀಚೆಗೆ ಇದನ್ನು ಸ್ವಲ್ಪ ಮರೆತುಬಿಟ್ಟಿದ್ದೆ. ..!!  ಆದರೆ ಇವತ್ತು ನನ್ನ ಹಳೆ ಪುಸ್ತಕದಲ್ಲಿ ಇದರ ಪೂರ್ಣ ಸಾಹಿತ್ಯ ಸಿಕ್ಕಾಗ ನನಗೆ ಅತೀವ ಸಂತಸವಾಯಿತು....!!!! ತಕ್ಷಣ ಇದನ್ನು Type ಮಾಡಿ ನನ್ನ Bolgಗೆ post ಮಾಡಿದ್ದೇನೆ....!!!!! ಇದನ್ನು ಇವತ್ತು ಲೆಕ್ಕವಿಲ್ಲದಷ್ಟು ಬಾರಿ ಹೇಳಿಕೊಂಡು ಆನಂದಿಸಿದ್ದೇನೆ....!!!! ಕಳೆದ ಬಾಲ್ಯದ ನೆನಪುಗಳಲ್ಲಿ ನಾನು ತೇಲಿಹೋಗಿದ್ದೇನೆ...!!! ಗೌರಿ-ಗಣಪತಿ ಹಬ್ಬದಲ್ಲಂತೂ ಈ ಸ್ತೋತ್ರವನ್ನು ಎಷ್ಟು ಹೇಳುತ್ತಿದ್ದೆವೋ ...!ಲೆಕ್ಕವಿಲ್ಲ....!! ಗಣಪತಿ ನೋಡಲು ಹೋಗುತ್ತಿದ್ದ ಮನೆಮನೆಯಲ್ಲಿಯೂ ಇದನ್ನು ಹಾಡುತ್ತಿದ್ದೆವು...!!! ನನ್ನ ಪ್ರಿಯ ಗಣಪ... ನಿನಗೆ ಕೋಟಿ ನಮಸ್ಕಾರಗಳು......!!!!!!
"ಗಣೇಶ ನಮಸ್ಕಾರ ಸ್ತೋತ್ರಂ"

ಜಯ ಜಯ ಗಣಪತಿ |
ಜಯ ಜಯ ಭೂಪತಿ |
ಜಯ ಜಯ ಪಾರ್ವತಿ ಪುತ್ರನಿಗೆ |
ಜಯ ಜಯವೆಂದು ಜನಗಳು ಪೊಗಳಲು
ಭವಭಯಗಳ ಪರಿಹರಿಸುವನು ||

ಒಂದು ನಮಸ್ಕಾರವ ಮಾಡಲು ಕುಂದದೆ ಮುಕ್ತಿಯ ಕೊಡುವವನು |
ಎರಡು ನಮಸ್ಕಾರವ ಮಾಡಲು ಎಲ್ಲರ ಕರುಣದಿ ಕಾಯುವನು |

ಮೂರು ನಮಸ್ಕಾರವ ಮಾಡಲು ಮುಕ್ತಿಗೆ ಮಾರ್ಗವ ತೋರುವನು |
ನಾಲ್ಕು ನಮಸ್ಕಾರವ ಮಾಡಲು  ಮನುಜಗೆ ನರಕದ ಭಯವಿಲ್ಲ |

ಐದು ನಮಸ್ಕಾರವ ಮಾಡಲು ಮುತ್ತೈದೆತನ ಕೊಡುವವನು |
ಆರು ನಮಸ್ಕಾರವ ಮಾಡಲು ಹಾರಿಸುವನು ಪರಿಪಾಪಗಳ |

ಏಳು ನಮಸ್ಕಾರವ ಮಾಡಲು ಏಳು ಜನ್ಮದ ಶನಿ ತೊಲಗುವುದು |
ಎಂಟು ನಮಸ್ಕಾರವ ಮಾಡಲು ಕಂಟಕವನು ಪರಿಹರಿಸುವನು |

ನವ ನಮಸ್ಕಾರವ ಮಾಡಲು ನವ ವಿಧ ಪಾಪವು ಪರಿಹಾರ |
ಹತ್ತು ನಮಸ್ಕಾರವ ಮಾಡಲು  ಪುತ್ರರ ಕರುಣದಿ ಕಾಯುವನು |

ನೂರು ನಮಸ್ಕಾರವ ಮಾಡಲು ಘೋರ ನರಕದ ಭಯವಿಲ್ಲ |
ಸಾವಿರ ನಮಸ್ಕಾರವ ಮಾಡಲು ಶಿವಸಾಯುಜ್ಯವು ದೊರಕುವುದು |

ಲಕ್ಷ ನಮಸ್ಕಾರವ ಮಾಡಲು ಲಕ್ಷ್ಮೀ ಪದವಿಯ ಕೊಡುವವನು|
ಕೋಟಿ ನಮಸ್ಕಾರವ ಮಾಡಲು ಕೊಡುವನು ಬಹು ಧನ ಸಿರಿಗಳನು|| 

6 ಕಾಮೆಂಟ್‌ಗಳು:

  1. ತುಂಬ ಸುಂದರವಾದ ಸ್ತೋತ್ರ. ಇಲ್ಲಿ ಪ್ರಕಟಿಸಿದ್ದಕ್ಕೆ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  2. ಮುದ್ದಾದ ಗಣಪತಿಗೆ ಮುದ್ದಾದ ಸ್ತೋತ್ರ. ಪ್ರಿಂಟ್ ಔಟ್ ತೆಗೆದು ಎತ್ತಿಟ್ಟುಕೊಂಡು ಓದಿಕೊಳ್ಳುತ್ತೇನೆ. ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ

ನಿಮ್ಮ ಅಮೂಲ್ಯವಾದ ಸಲಹೆ ಮತ್ತು ಅಭಿಪ್ರಾಯಗಳಿಗೆ ಸದಾ ಸ್ವಾಗತವಿದೆ.