ಚಲನಚಿತ್ರ ಅಂತ್ಯಾಕ್ಷರಿ - ಉತ್ತರಗಳು

ಸನ್ನಿವೇಶ ಸುತ್ತು:-

೧.ಚಿತ್ರ - ಮಯೂರ
  ನಾನಿರುವುದೆ ನಿಮಗಾಗಿ ನಾಡಿರುವುದೆ ನಮಗಾಗಿ
  ಕಣ್ಣೀರೇಕೆ ಬಿಸಿಯುಸಿರೇಕೆ ಬಾಳುವಿರೆಲ್ಲಾ ಹಾಯಾಗಿ)

೨.ಚಿತ್ರ -  ಬೆಳ್ಳಿಮೋಡ
ಮೂಡಲಮನೆಯ ಮುತ್ತಿನ ನೀರಿನ ಎರಕಾವ ಹೊಯ್ದ
 ನುಣ್ಣನೆ ಎರಕಾವಾ ಹೊಯ್ದ
 ಬಾಗಿಲು ತೆರೆದು ಬೆಳಕು ಹರಿದು ಜಗವೆಲ್ಲಾ ತೋಯ್ದ

೩.ಚಿತ್ರ - ಗುರುಶಿಷ್ಯರು
ದೊಡ್ಡವರೆಲ್ಲ ಜಾಣರಲ್ಲ ಚಿಕ್ಕವರೆಲ್ಲ ಕೋಣರಲ್ಲ
ಗುರುಗಳು ಹೇಳಿದ ಮಾತುಗಳೆಲ್ಲ ಎಂದೂ ನಿಜವಲ್ಲ.

೪.ಚಿತ್ರ - ಜೀವನ ಚೈತ್ರ 
ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ
 ಸಾಯೊತನಕ ಸಂಸಾರದೊಳಗೆ ಗಂಡಾಗುಂಡಿ
 ಹೇರಿಕೊಂಡು ಹೋಗೋದಿಲ್ಲ ಸತ್ತಾಗ್ ಬಂಡಿ
ಇರೋದ್ರೊಳಗೆ ಒಮ್ಮೆ ನೋಡು ಜೋಗಾದ್ ಗುಂಡಿ

೫.ಚಿತ್ರ - ಬಂಧನ
ಬಣ್ಣ ನನ್ನ ಒಲವಿನ ಬಣ್ಣ
ನನ್ನ ....... ಬಣ್ಣ
ನೀ ನಕ್ಕರೆ ಹಸಿರು ಉಲ್ಲಾಸದ ಉಸಿರು
ನೂರಾಸೆಯ ಕನಸಿನ ಬಣ್ಣ

೬.ಚಿತ್ರ - ನಾನೂ ನನ್ನ ಕನಸು
ಪುಟ್ಟ ಪುಟ್ಟ ಕೈ ಪುಟ್ಟ ಪುಟ್ಟ ಕಾಲ್
 ನಿನ್ನ ಪುಟ್ಟ ಕೈ ನಿನ್ನ ಪುಟ್ಟ ಕಾಲ್

ಅಂತ್ಯ ಪದ ಸುತ್ತು:-

೧.ಸ್ನೇಹದ ಕಡಲಲ್ಲಿ
ನೆನಪಿನ ದೋಣಿಯಲಿ
ಪಯಣಿಗ ನಾನಮ್ಮ
ಪಯಣಿಗ ನಾನಮ್ಮ

೨.ಕನ್ನಡ ನಾಡಿನ ವೀರರಮಣಿಯ
ಗಂಡುಭೂಮಿಯ ವೀರನಾರಿಯ
ಚರಿತೆಯ ನಾನು ಹಾಡುವೆ

೩.ಒಲವೆ ಜೀವನ ಸಾಕ್ಷಾತ್ಕಾರ
ಒಲವೇ ಮರೆಯದ ಮಮಕಾರ
ಒಲವೇ ಮರೆಯದ ಮಮಕಾರ

೪.ತುಂತುರು ಅಲ್ಲಿ ನೀರಹಾಡು
ಕಂಪನ ಇಲ್ಲಿ ಪ್ರೀತಿಹಾಡು
ಹಗಲಿರಲಿ ಇರುಳಿರಲಿ ನೀನಿರದೆ ಹೇಗಿರಲಿ
ನನ್ನ ತುಂಬು ಹೃದಯ ನೀ ತುಂಬಿದೆ

೫.ಎಂದೆಂದೂ ನಿನ್ನನು ಮರೆತು ಬದುಕಿರಲಾರೆ
ಇನ್ನೆಂದೂ ನಿನ್ನನು ಅಗಲಿ ನಾನಿರಲಾರೆ
ಒಂದು ಕ್ಷಣ ನೊಂದರು ನೀ ನಾ ತಾಳಲಾರೆ
ಒಂದು ಕ್ಷಣ ವಿರಹವನು ನಾ ಸಹಿಸಲಾರೆ

೬.ಬಾನಿಗೊಂದು ಎಲ್ಲೆ ಎಲ್ಲಿದೆ
ನಿನ್ನಾಸೆಗೆಲ್ಲಿ ಕೊನೆಯಿದೆ
ಏಕೆ ಕನಸು ಕಾಣುವೆ
ನಿಧಾನಿಸು ನಿಧಾನಿಸು

ಚಿತ್ರಗೀತೆಯಾಗಿ ಕವಿಗಳ ಕವನ ಸುತ್ತು:-

೧.ತೆರೆದಿದೆ ಮನೆ ಓ.. ಬಾ ಅತಿಥಿ
ಹೊಸಬೆಳಕಿನ ಹೊಸಗಾಳಿಯ
ಹೊಸ ಬಾಳನು ತಾ ಅತಿಥಿ

೨.ಉತ್ತರ ಧ್ರುವದಿಂ ದಕ್ಷಿಣ ಧ್ರುವಕು
ಚುಂಬಕ ಗಾಳಿಯು ಬೀಸುತಿದೆ
ಸೂರ್ಯನ ಬಿಂಬಕೆ ಚಂದ್ರನ ಬಿಂಬವು
ರಂಜಿಸಿ ನಗೆಯಲಿ ಮೀಸುತಿದೆ

೩.ಜಯ ಭಾರತ ಜನನಿಯ ತನುಜಾತೆ
ಜಯಹೇ ಕರ್ನಾಟಕ ಮಾತೆ
ಜಯ ಸುಂದರ ನದಿ ವನಗಳ ನಾಡೆ
ಜಯಹೇ ರಸಋಷಿಗಳ ಬೀಡೆ

೪.ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ.  

೫. ಇವಳು ಯಾರು ಬಲ್ಲೆಯೇನು
ಇವಳ ಹೆಸರ ಹೇಳಲೇನು
ಇವಳ ದನಿಗೆ ತಿರುಗಲೇನು
ಇವಳು ಏತಕೊ ಬಂದು ನನ್ನ ಸೆಳೆದಳು

೬.ಕುಹೂ ಕುಹೂ ಕುಹೂ ಕುಹೂ
 ಎನ್ನುತ ಹಾಡುವ ಕಿನ್ನರ ಕಂಠದ ಕೋಗಿಲೆಯೇ

ಚರಣ - ಪಲ್ಲವಿ ಸುತ್ತು:-

೧.ಹುವ್ವೇ ಹುವ್ವೇ ಹುವ್ವೇ ಹುವ್ವೇ ಹುವ್ವೇ
ನಿನ್ನೀ ನಗುವಿಗೆ ಕಾರಣವೇನೆ
ಸೂರ್ಯನ ನಿಯಮಾನೇ.. ಚಂದ್ರನ ನೆನಪೇನೇ...

೨.ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು
ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು
ಬದುಕಿದು ಜಟಕಾಬಂಡಿ
ಇದು ವಿಧಿಯೋಡಿಸುವ ಬಂಡಿ

೩.ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ
ನಿನ್ನಿಂದಲೇ ನಿನ್ನಿಂದಲೇ ಮನಸಿಂದು ಕುಣಿದಾಡಿದೆ
ಈ ಎದೆಯಲ್ಲಿ ಸಿಹಿಯಾದ ಕೋಲಾಹಲ
ನನ್ನೆದುರಲ್ಲೆ ನೀ ಹೀಗೆ ಬಂದಾಗಲೆ
ನಿನ್ನ ತುಟಿಯಲ್ಲಿ ನಗುವಾಗುವಾ ಹಂಬಲ
ನಾ ನಿಂತಲ್ಲೆ ಹಾಳಾದೆ ನಿನ್ನಿಂದಲೆ

೪.ನಿನ್ನೊಲುಮೆ ನಮಗಿರಲಿ ತಂದೆ
ಕೈ ಹಿಡಿದು ನೀ ನಡೆಸು ಮುಂದೆ6 ಕಾಮೆಂಟ್‌ಗಳು:

 1. ಮಂಜುಳಾದೇವಿಯವರೆ,
  ರಸಪ್ರಶ್ನೆಗಳ ಉತ್ತರಗಳನ್ನು ನೋಡಿ, ಮನಸ್ಸು ಆನಂದರಸದಿಂದ ತುಂಬಿತು. ಈ ಅಂತ್ಯಾಕ್ಷರಿಯನ್ನು ಆಯೋಜಿಸಿದ್ದಕ್ಕೆ ಧನ್ಯವಾದಗಳು. ಇನ್ನಿಷ್ಟು ಇಂತಹ ರಸಪ್ರಶ್ನೆಗಳು ಬರಲಿ ಎಂದು ಕೋರುತ್ತೇನೆ.

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ನಿಮ್ಮ ಸಂತಸಕ್ಕೆ ಧನ್ಯವಾದಗಳು ಸಾರ್....ನಿಮ್ಮ ಕೋರಿಕೆಯನ್ನು ಖಂಡಿತಾ ಮನ್ನಿಸುತ್ತೇನೆ.....!!!

   ಅಳಿಸಿ
 2. ಒಳ್ಳೆಯದಾಯಿತು ಬರೆದಿಟ್ಟುಕೊಳ್ಳುವೆ.

  ಪ್ರತ್ಯುತ್ತರಅಳಿಸಿ
 3. ಪ್ರತ್ಯುತ್ತರಗಳು
  1. ನಾಯಕ್ ರವರೆ, ನನ್ನ ಬ್ಲಾಗಿಗೆ ಸ್ವಾಗತ....ಧನ್ಯವಾದಗಳು...

   ಅಳಿಸಿ

ನಿಮ್ಮ ಅಮೂಲ್ಯವಾದ ಸಲಹೆ ಮತ್ತು ಅಭಿಪ್ರಾಯಗಳಿಗೆ ಸದಾ ಸ್ವಾಗತವಿದೆ.