ಮರಿಹಕ್ಕಿಯಾಸೆ


ನಾನೊಂದು ಮರಿಹಕ್ಕಿ
ಗೂಡಿಂದ ಹೊರಬಂದು

ಅಂಗಳದ ಚೆಲುವನೀಂಟುವಾಸೆ

ಗರಿಬಿಚ್ಚಿ ಮರವೇರಿ

ರೆಂಬೆ ಕೊಂಬೆಗೆ ಹಾರಿ

ಕಲರವವ ಮಾಡುವಾಸೆಗುಡ್ಡಬೆಟ್ಟವ ಸೇರಿ

ಎತ್ತರೆತ್ತರಕ್ಕೇರಿ

ಬಾನಿಂದ ಸೊಬಗನ್ನು ಸವಿಯುವಾಸೆ

ಮಿತ್ರರೊಡನೊಂದಾಗಿ

ಚಿಲಿಪಿಲಿಯ ನಾ ಕಲಿತು

ನನ್ನದೇ ಹಾಡನ್ನು ಹಾಡುವಾಸೆನನ್ನೆದೆಯ ಹತ್ತಾರು

ಕನಸ ಕಡ್ಡಿಗಳನಾಯ್ದು

ಚಂದದ ಗೂಡೊಂದ ಕಟ್ಟುವಾಸೆ

ಬೆಚ್ಚನೆಯ ಗೂಡಲ್ಲಿ

ಹೊಚ್ಚ ಹೊಸ ಭಾವನೆಯ

ತತ್ತಿಗೆ ಚೈತನ್ಯ ತುಂಬುವಾಸೆ.

2 ಕಾಮೆಂಟ್‌ಗಳು:

 1. ನನ್ನೆದೆಯ ಹತ್ತಾರು

  ಕನಸ ಕಡ್ಡಿಗಳನಾಯ್ದು

  ಚಂದದ ಗೂಡೊಂದ ಕಟ್ಟುವಾಸೆ

  Very nice...
  ಗೂಡು ಬೆಚ್ಚಗಿರಲಿ...

  ಪ್ರತ್ಯುತ್ತರಅಳಿಸಿ
 2. ಶ್ರೀವತ್ಸ ರವರಿಗೆ ನನ್ನ ಬ್ಲಾಗ್ ಗೆ ಸ್ವಾಗತ.ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.

  ಪ್ರತ್ಯುತ್ತರಅಳಿಸಿ

ನಿಮ್ಮ ಅಮೂಲ್ಯವಾದ ಸಲಹೆ ಮತ್ತು ಅಭಿಪ್ರಾಯಗಳಿಗೆ ಸದಾ ಸ್ವಾಗತವಿದೆ.