ಒಂದು ಭಾನುವಾರ ಕಛೇರಿಗೆ ಹೋಗುವ ಆತುರವಿಲ್ಲದ್ದರಿಂದ ನಿಧಾನವಾಗಿ ಎದ್ದು ಎಲ್ಲಾ ಕೆಲಸಗಳನ್ನು ನಿಧಾನವಾಗಿ ಮಾಡಿಕೊಳ್ಳುತ್ತಿದ್ದೆ. ಪೂಜೆಗಾಗಿ ಹೂ ಕೀಳುತ್ತಿದ್ದ ನನ್ನ ಪತಿರಾಯರು ’ಮಂಜು, ಬೇಗ ಬಾ’ ಎಂದು ಕೂಗಿದಾಗ ಗಾಬರಿಯಿಂದಲೇ ಹೊರಗೆ ಬಂದೆ.
ಆದರೆ ನಾ ಕಂಡ ದೃಶ್ಯ ನನಗೆ ಸಂತಸ ನೀಡಿತು.ಕೂಡಲೇ ಒಳಗೆ ಬಂದು ನನ್ನ ಮೊಬೈಲ್ ಕ್ಯಾಮರದಲ್ಲಿ ಅಪರೂಪದ ಆ ಕ್ಷಣಗಳನ್ನು ಸೆರೆಹಿಡಿದೆ. ಅಂದದ ಅರಗಿಳಿಯೊಂದು ಹಾರಿ ಬಂದು ನಮ್ಮ ಮನೆಯ ಕಾಂಪೌಂಡ್ ಮೇಲೆ ಕುಳಿತಿತ್ತು.
ನಾನು ಹತ್ತಿರದಿಂದ ಒಂದೆರಡು ಫೋಟೋ ತೆಗೆದಾಗಲೂ ಅದು ಹಾರಿಹೋಗದಿದ್ದಾಗ ಆ ಪುಟ್ಟಮರಿಗೆ ಹಾರಲು ಶಕ್ತಿ ಕಡಿಮೆ ಇರಬಹುದು ಎಂದು ಮರುಗುತ್ತಾ,ಹಣ್ಣು ತಿನ್ನಿಸಿ ನೋಡೋಣವೆಂದು ತಿನ್ನಿಸಿದರೆ ಒಂದೇ ನಿಮಿಷದಲ್ಲಿ ಹಣ್ಣನ್ನು ಪೂರ್ತಿಯಾಗಿ ತಿಂದಿತು.
ಈ ಹೊತ್ತಿಗಾಗಲೇ ನಮ್ಮ ಅಕ್ಕಪಕ್ಕದ ಮನೆಯವರು, ಮಕ್ಕಳು ಸೇರಿ ಕುತೂಹಲ, ಸಂತೋಷದಿಂದ ಕಲರವ ಮಾಡಿದ್ದರಿಂದ ಪುಟ್ಟ ಗಿಣಿ ತಬ್ಬಿಬ್ಬುಗೊಂಡಿತು.
ಹಾರಲಾರದೆ ಅಸಹಾಯಕವಾದ ಆ ಮರಿಯನ್ನು ಚಿಕ್ಕ ಪಂಜರದಲ್ಲಿಟ್ಟು ಹಣ್ಣು, ಮೆಣಸಿನಕಾಯಿ,ಕಾಳುಗಳನ್ನು ಹಾಕಿದೆವು.
ಒಂದೆರಡು ಗಂಟೆಯಲ್ಲಿ ಚೇತರಿಸಿಕೊಂಡ ಮರಿಯನ್ನು ಹೊರ ಬಿಡುತ್ತಿದ್ದಂತೆಯೇ ಕ್ಷಣಮಾತ್ರದಲ್ಲಿ ಪುರ್ರನೆ ಹಾರಿ ಎತ್ತರದ ಮರವನ್ನೇರಿ ಕೀ...ಕೀ....ಎನ್ನುತ್ತಾ ತನ್ನ ಬಳಗವನ್ನು ಸೇರಿಕೊಂಡಿತು. ಆ ಗಿಳಿಮರಿ ನಮ್ಮೊಡನೆ ಇದ್ದಷ್ಟು ಸಮಯ ನಮ್ಮ ಮನಸ್ಸಿಗೆ ಮುದ ನೀಡಿ ರಜೆಯ ಸವಿಯನ್ನು ಹೆಚ್ಚಿಸಿತು.ಧನ್ಯವಾದಗಳು ಗಿಣಿರಾಮ!..... ಪಂಚರಂಗಿರಾಮ.... !
ಆದರೆ ನಾ ಕಂಡ ದೃಶ್ಯ ನನಗೆ ಸಂತಸ ನೀಡಿತು.ಕೂಡಲೇ ಒಳಗೆ ಬಂದು ನನ್ನ ಮೊಬೈಲ್ ಕ್ಯಾಮರದಲ್ಲಿ ಅಪರೂಪದ ಆ ಕ್ಷಣಗಳನ್ನು ಸೆರೆಹಿಡಿದೆ. ಅಂದದ ಅರಗಿಳಿಯೊಂದು ಹಾರಿ ಬಂದು ನಮ್ಮ ಮನೆಯ ಕಾಂಪೌಂಡ್ ಮೇಲೆ ಕುಳಿತಿತ್ತು.
ನಾನು ಹತ್ತಿರದಿಂದ ಒಂದೆರಡು ಫೋಟೋ ತೆಗೆದಾಗಲೂ ಅದು ಹಾರಿಹೋಗದಿದ್ದಾಗ ಆ ಪುಟ್ಟಮರಿಗೆ ಹಾರಲು ಶಕ್ತಿ ಕಡಿಮೆ ಇರಬಹುದು ಎಂದು ಮರುಗುತ್ತಾ,ಹಣ್ಣು ತಿನ್ನಿಸಿ ನೋಡೋಣವೆಂದು ತಿನ್ನಿಸಿದರೆ ಒಂದೇ ನಿಮಿಷದಲ್ಲಿ ಹಣ್ಣನ್ನು ಪೂರ್ತಿಯಾಗಿ ತಿಂದಿತು.
ಈ ಹೊತ್ತಿಗಾಗಲೇ ನಮ್ಮ ಅಕ್ಕಪಕ್ಕದ ಮನೆಯವರು, ಮಕ್ಕಳು ಸೇರಿ ಕುತೂಹಲ, ಸಂತೋಷದಿಂದ ಕಲರವ ಮಾಡಿದ್ದರಿಂದ ಪುಟ್ಟ ಗಿಣಿ ತಬ್ಬಿಬ್ಬುಗೊಂಡಿತು.
ಹಾರಲಾರದೆ ಅಸಹಾಯಕವಾದ ಆ ಮರಿಯನ್ನು ಚಿಕ್ಕ ಪಂಜರದಲ್ಲಿಟ್ಟು ಹಣ್ಣು, ಮೆಣಸಿನಕಾಯಿ,ಕಾಳುಗಳನ್ನು ಹಾಕಿದೆವು.
![]() |
ಮಂಜುಳಾದೇವಿಯವರೆ,
ಪ್ರತ್ಯುತ್ತರಅಳಿಸಿಕೇವಲ ಚಲನಚಿತ್ರಗಳಲ್ಲಿ ಮಾತ್ರ ಗಿಳಿಗಳನ್ನು ನೋಡುವದು ಸಾಧ್ಯವಾಗಿರುವ ಈ ಕಾಲದಲ್ಲಿ, ಗಿಳಿರಾಮನು ನಿಮಗೆ ಪ್ರತ್ಯಕ್ಷ್ಯ ದರ್ಶನ ಕೊಟ್ಟಿದ್ದು ನಿಮ್ಮ ಭಾಗ್ಯವೇ ಸರಿ. ಆ ಗಿಳಿಗೆ ನೀವು ಹಣ್ಣು ತಿನ್ನಿಸಿ,ಬಳಿಕ ಹಾರಿಬಿಟ್ಟದ್ದು ನಿಮ್ಮ ಸುಗುಣಕ್ಕೆ ಸಾಕ್ಷಿ. ಲೇಖನಕ್ಕಾಗಿ ಹಾಗು ಚಿತ್ರಗಳಿಗಾಗಿ ಧನ್ಯವಾದಗಳು.
ಚೆ೦ದದ ಅನುಭವ..ಚಿತ್ರಗಳೂ ಚೆನ್ನಾಗಿವೆ.
ಪ್ರತ್ಯುತ್ತರಅಳಿಸಿನಾನು ತು೦ಬಾ ಚಿಕ್ಕವಳಿರುವಾಗ, ನಮ್ಮ ಮನೆಯಲ್ಲಿ ಸ್ವಲ್ಪ ದಿನ ಒ೦ದು ಗಿಳಿಮರಿ ಇತ್ತು. ಅದಕ್ಕೆ ಹಣ್ಣು ಹಾಗೂ ಕಡಲೆ ನೆನೆಸಿ ಕೊಡುತ್ತಿದ್ದೆವು.ಅದರೆದುರು ನಿ೦ತು ರಾಮಾ ರಾಮಾ ಎ೦ದರೆ ಅದೂ ಹೇಳಲು ಪ್ರಯತ್ನಿಸುತ್ತಿತ್ತು.ಅದನ್ನು ನೋಡಲು ತು೦ಬಾ ಖುಶಿಯಾಗುತ್ತಿತ್ತು.ಆ ದಿನಗಳ ನೆನಪಿನ ಸಿಹಿ ಮರುಕಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು. :)
ಸುನಾಥ್ ಸಾರ್,
ಪ್ರತ್ಯುತ್ತರಅಳಿಸಿಗಿಣಿಯನ್ನು ನಮ್ಮ ಮನೆಯಂಗಳದಲ್ಲಿಯೇ ಕಂಡು ನನಗೂ ಸಹ ಅಚ್ಚರಿಯಾಯ್ತು.ನಿಮ್ಮ ಆತ್ಮೀಯವಾದ ಪ್ರತಿಕ್ರಿಯೆಗೆ ನನ್ನ ಧನ್ಯವಾದಗಳು.
ಮನಮುಕ್ತಾ ರವರೆ,
ಪ್ರತ್ಯುತ್ತರಅಳಿಸಿನಿಮ್ಮ ಅನುಭವವೂ ಸುಂದರವಾಗಿದೆ.ಅದನ್ನು ಇಲ್ಲಿ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.
ಅ೦ದದ ಗಿಣಿರಾಮನ ಸನ್ನಿವೇಶವನ್ನು ಸೊಗಸಾಗಿ ನಿರೂಪಿಸಿದ್ದೀರಿ ಮ೦ಜುಳಾ ಅವರೆ. ತಡವಾಗಿ ತಾಣಲೋಕಕ್ಕೆ ಬ೦ದರೂ ಅಪರೂಪದ ದೃಶ್ಯ/ದೃಶ್ಯಾವಳಿಯು ಮನಸೂರೆಗೊ೦ಡಿತು. ಮನೆಯ೦ಗಳದ ಈ ಸು೦ದರ ಸನ್ನೆವೇಶವನ್ನು ನಮ್ಮೊಡನೆ ಹ೦ಚಿಕೊ೦ಡ ತಮಗೂ ಹಾಗೂ ಮಿತ್ರರಾದ ಮಹದೇವಸ್ವಾಮಿ ಅವರಿಗೂ ಅಭಿನ೦ದನೆಗಳು.
ಪ್ರತ್ಯುತ್ತರಅಳಿಸಿಅನ೦ತ್
ಅನಂತರಾಜ್ ರವರೆ,
ಪ್ರತ್ಯುತ್ತರಅಳಿಸಿನನ್ನ ಗಿಣಿರಾಮನನ್ನು ಇಷ್ಟಪಟ್ಟಿರುವಿರಿ,ಸಂತಸವಾಯಿತು.... ನೀವು ಇತ್ತೀಚೆಗೆ ಬ್ಲಾಗುಗಳಲ್ಲಿ ಅಪರೂಪವಾಗುತ್ತಿರುವಂತಿದೆ....
ನಿಮ್ಮ ಲಯಬದ್ಧವಾದ ಕವನಗಳನ್ನು ಓದಲು ಚೆನ್ನಾಗಿರುತ್ತದೆ.....
ನಿಮಗೆ, ನನ್ನ ಮತ್ತು ನನ್ನವರ ಧನ್ಯವಾದಗಳು.