ಕಾಮನ ಬಿಲ್ಲು



                ಚಿಣ್ಣರಿಗೆಲ್ಲಾ ಮಕ್ಕಳ ದಿನಾಚರಣೆಯ ಶುಭಾಶಯಗಳು




ಭೂಮಿಗೂ ಬಾನಿಗೂ ಸೇತುವೆಯಾಗಿ
ನಯನ ಮನೋಹರ ಚಿತ್ರವದಾಗಿ
ಬಾನಂಚಲಿ ಮೂಡಿದೆ ಮಳೆಬಿಲ್ಲು
ಗೆಳೆಯರ ಕರೆಯುವೆ ನೀ ನಿಲ್ಲು....

ಬರಿ ಬಿಸಿಲಾದರೆ ನೀ ಇರಲಾರೆ
ಬರಿ ಮಳೆ ಸುರಿಯೇ ನೀ ಬರಲಾರೆ
ಮೂಡಿದ ಕೆಲವೇ ಕ್ಷಣದಲಿ ಮುಳುಗುವೆ
ಸೃಷ್ಠಿಯ ವಿಸ್ಮಯ ನೀನಾಗಿರುವೆ

ಊದಾ ಕೆಂಪು ಬಣ್ಣದ ನಡುವೆ
ಹರಡಿದೆ ಬಗೆಬಗೆ ರಂಗುಗಳು
ಸೂರ್ಯನ ರಶ್ಮಿ ಮಳೆ ಹನಿ ಮೈತ್ರಿಗೆ
ದೇವರು ನೀಡಿದ ಬಳುವಳಿಯು

ಬಣ್ಣಗಳೇಳು ಒಡಲೊಳಗಿದ್ದರೂ
ಕಿರಣದೆ ಕಾಣುವುದೊಂದೆ ಬಿಳಿ
ಬಾಗುವುದರಲ್ಲೂ ಬದುಕಿದೆ ಸೊಗಸು
ಎನ್ನುವ ತತ್ವವ ಇನ್ನು ಕಲಿ

ಜೀವನವೆಂಬೀ ಬಾಂದಳದಲ್ಲಿ
ಜ್ಞಾನದ ಕಿರಣವು ಬೆಳಗಿಹುದು
ಅದರಾ ಸೊಬಗಿನ ಕಾಣ್ಕೆಗೆ ಬೇಕು
ಪರಿಶ್ರಮವೆಂಬ ಸಿಂಚನವು.

(ಚಿತ್ರಕೃಪೆ - ಅಂತರ್ಜಾಲ)

9 ಕಾಮೆಂಟ್‌ಗಳು:

  1. ಸು೦ದರ ಕಾಮನಬಿಲ್ಲಿನ ಬಗ್ಗೆ ಅಷ್ಟೆ ಸು೦ದರ ಕವನ..!

    ಸು೦ದರ ಚಿತ್ರಗಳು..

    ಸೂರ್ಯನ ರಶ್ಮಿ ಮಳೆಹನಿ ಮೈತ್ರಿಗೆ ದೇವರು ನೀಡಿದ ಬಳುವಳಿಯು.....

    ಬಾಗುವುದರಲ್ಲೂ ಬದುಕಿಗಿದೆ ಸೊಗಸು.. ಸಾಲುಗಳು ತು೦ಬಾ ಹಿಡಿಸಿದವು.

    ಶುಭಾಶಯಗಳು.

    ಪ್ರತ್ಯುತ್ತರಅಳಿಸಿ
  2. ಚಿತ್ರ, ಚಿತ್ರಣ.. ಸೊಗಸಾದ ನಿರೂಪಣೆಯಿ೦ದ ಕಳೆಕಟ್ಟಿದೆ. ಮಕ್ಕಳ ದಿನಾಚರಣೆಯದ೦ದು ಸ೦ದರ್ಭೋಚಿತವಾಗಿ ಪ್ರಸ್ತುತಿಸಿದ ಕವನಕ್ಕೆ ಅಭಿನ೦ದನೆಗಳು.

    ಅನ೦ತ್

    ಪ್ರತ್ಯುತ್ತರಅಳಿಸಿ
  3. ಮನಮುಕ್ತಾರವರೆ,
    ನನ್ನ ಈ ಪುಟ್ಟ ಕವನವನ್ನು ಮೆಚ್ಚಿ ಅಭಿನಂದಿಸಿದ್ದಕ್ಕೆ ಧನ್ಯವಾದಗಳು.
    ಸ್ನೇಹವೆನ್ನುವುದು ಆ ದೇವರ ವರ.ಆತನ ಆಶೀರ್ವಾದವಿರುವುದರಿಂದ ಅದು ಸುಂದರ ಕೂಡ...
    ತಗ್ಗಿ-ಬಗ್ಗಿ ನಡೆಯಬೇಕು ಎಂಬುದು ನಮ್ಮ ಹಿರಿಯರ ಅನುಭವದ ಮಾತು.....
    ನಿಮಗೆ ಮತ್ತೊಮ್ಮೆ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  4. ಅನಂತರಾಜ್ ರವರೆ,
    ನನ್ನ ಪ್ರತಿಯೊಂದು ಬರಹಕ್ಕೂ ನಿಮ್ಮ ಅಮುಲ್ಯವಾದ ಪ್ರತಿಕ್ರಿಯೆ ನೀಡಿ ಪ್ರೋತ್ಸಾಹಿಸುತ್ತಿರುವ ನಿಮಗೆ ಅನಂತ ಧನ್ಯವಾದಗಳು.ನಿಮ್ಮ ಸಹಕಾರ ಹೀಗೆ ಮುಂದುವರೆಯಲಿ ಎಂದು ಆಶಿಸುತ್ತೇನೆ.

    ಪ್ರತ್ಯುತ್ತರಅಳಿಸಿ
  5. ಮಕ್ಕಳ ದಿನಾಚರಣೆಗೆ ಉತ್ತಮ ಕೊಡುಗೆ. ಸು೦ದರ ಕವನಕ್ಕಾಗಿ ಅಭಿನ೦ದನೆಗಳು.

    ಪ್ರತ್ಯುತ್ತರಅಳಿಸಿ
  6. ಪ್ರಭಾಮಣಿ ಯವರೆ,
    ನನ್ನ ತಾಣಲೋಕಕ್ಕೆ ನಿಮಗೆ ಆತ್ಮೀಯವಾದ ಸ್ವಾಗತ.ನಿಮ್ಮ ಮೆಚ್ಚುಗೆಯ ಮಾತುಗಳಿಗೆ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ

ನಿಮ್ಮ ಅಮೂಲ್ಯವಾದ ಸಲಹೆ ಮತ್ತು ಅಭಿಪ್ರಾಯಗಳಿಗೆ ಸದಾ ಸ್ವಾಗತವಿದೆ.