ಮಕ್ಕಳಿಂದ ಅರಳಿದ ಕಲೆ


(ಚಿತ್ರಗಳನ್ನು ದೊಡ್ಡದಾಗಿಸಲು ಅದರ ಮೇಲೆ ಕ್ಲಿಕ್ಕಿಸಿ)


"ವಿಕಾಸ ವಿದ್ಯಾ ಸಂಸ್ಥೆ" ಶಿವಮೊಗ್ಗದ ಪ್ರತಿಷ್ಟಿತ ಶಾಲೆಗಳಲ್ಲಿ ಒಂದು. ಈ ಶಾಲೆಯು ಮಕ್ಕಳನ್ನು ಓದು ಬರಹಕ್ಕೆ ಮಾತ್ರ ಸೀಮಿತಗೊಳಿಸದೆ ಅವರಲ್ಲಿರುವ ಕಲಾಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುತ್ತಿದೆ.ಪ್ರತಿ ವರ್ಷವೂ ವಾರ್ಷಿಕೋತ್ಸವಕ್ಕೆ ಮುನ್ನ ಮೂರು ದಿನಗಳ ಕಾಲ ವಿಜ್ಞಾನ ಮತ್ತು ಕಲಾ ವಸ್ತುಪ್ರದರ್ಶನವನ್ನು ಭರ್ಜರಿಯಾಗಿ ನಡೆಸಿ, ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರಗೆಳೆಯುವ ಮೂಲಕ ನಮ್ಮ ಕಲೆಗಳನ್ನು ಉಳಿಸಿ ಬೆಳಸುವ ನಿಟ್ಟಿನಲ್ಲಿ ಹೆಜ್ಜೆಯಿಡುತ್ತಿದೆ.

ನನಗೆ ಈ ಶಾಲೆಯ ವಸ್ತುಪ್ರದರ್ಶನವನ್ನು ನೋಡುವ ಅವಕಾಶ ಈ ವರ್ಷ ಒದಗಿ ಬಂತು.ಅಲ್ಲಿನ ವಿದ್ಯಾರ್ಥಿಗಳು ವಿಜ್ಞಾನಕ್ಕೆ ಸಂಬಂಧಿಸಿದ ಅನೇಕ ವಿನ್ಯಾಸಗಳನ್ನು,ತಮಗೆ ಲಭ್ಯವಾದ ವಸ್ತುಗಳನ್ನು ಉಪಯೋಗಿಸಿ ಅಚ್ಚುಕಟ್ಟಾಗಿ ತಯಾರು ಮಾಡಿದ್ದರು.
ಬೆಂಡಿನಿಂದ ತಯಾರಿಸಿದ ವಿವಿಧ ಮಾದರಿಗಳ ವಿಭಾಗವು ನನ್ನ ಮನಸೆಳೆಯಿತು.ಬೆಳವಾಡಿಯ ವೀರನಾರಾಯಣ ದೇವಸ್ಥಾನ, ಖುಜುರಾಹೋ ದೇವಸ್ಥಾನ, ತಾಜ್ ಮಹಲ್ಲುಗಳೊಂದಿಗೆ ವಿದೇಶದಲ್ಲಿರುವ ಚರ್ಚುಗಳು ಮತ್ತು ಸ್ಟೇಡಿಯಂ ಹಾಗು ಇನ್ನೂ ಅನೇಕ ಸುಂದರ ವಿನ್ಯಾಸಗಳು ಅಲ್ಲಿದ್ದವು.ಇವುಗಳನ್ನು ಅಲ್ಲಿನ ಮಕ್ಕಳು ನುರಿತ ಕಲಾವಿದರ ಮಾರ್ಗದರ್ಶನದಲ್ಲಿ ತಾವೇ ಸ್ವತಃ ಮಾಡಿದ್ದರು.ಅದರ ಕೆಲವು ಚಿತ್ರಗಳು ಇಲ್ಲಿದೆ.










ಆ ಶಾಲೆಯ ಮಕ್ಕಳು ಮತ್ತು ಶಿಕ್ಷಕ ವೃಂದಕ್ಕೆ ನನ್ನ ಅಭಿನಂದನೆ.    

4 ಕಾಮೆಂಟ್‌ಗಳು:

  1. ಚಿಕ್ಕ ಮಕ್ಕಳ ಈ ಅದ್ಭುತ ಕಲೆಯನ್ನು ನೋಡಿ ಬೆರಗಾದೆ. ನಮ್ಮೊಡನೆ ಹಂಚಿಕೊಂಡ ನಿಮಗೆ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  2. ನನಗೂ ಸಹ ಬೆಂಡಿನಲ್ಲಿ ತಯಾರಿಸಿದ ವಿವಿಧ ವಿನ್ಯಾಸಗಳನ್ನು ಕಂಡು ಅಚ್ಚರಿ ಆಯಿತು.ಮಕ್ಕಳ ಪರಿಶ್ರಮವನ್ನು ನೋಡಿ ಸಂತಸಪಟ್ಟೆ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಸಾರ್.

    ಪ್ರತ್ಯುತ್ತರಅಳಿಸಿ
  3. ಮಕ್ಕಳಿ೦ದ ತಯಾರಿಸಲ್ಪಟ್ಟ ಸು೦ದರ ಕಲೆಗಾರಿಕೆ ನೋಡಿ ತು೦ಬಾ ಖುಶಿಯಾಯಿತು.
    ವ೦ದನೆಗಳು.

    ಪ್ರತ್ಯುತ್ತರಅಳಿಸಿ
  4. ಮನಮುಕ್ತ ರವರೆ,
    ನಿಮ್ಮಂತವರ ಆಸಕ್ತರಿಗಾಗಿಯೇ ಇವುಗಳನ್ನು ಇಲ್ಲಿ ಪ್ರಕಟಿಸಿದೆ.ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ

ನಿಮ್ಮ ಅಮೂಲ್ಯವಾದ ಸಲಹೆ ಮತ್ತು ಅಭಿಪ್ರಾಯಗಳಿಗೆ ಸದಾ ಸ್ವಾಗತವಿದೆ.