ಮಹಿಳಾ ದಿನಾಚರಣೆಯ ಶುಭಾಶಯಗಳು
.jpg)
ಮುಂಜಾನೆ ಬಾಗಿಲಿಗೆ
ಚುಕ್ಕಿ ಗೆರೆಗಳ ಎಳೆದು
ಶುಭದ ರಂಗೋಲಿಯನು ಬಿಡಿಸುವಾಕೆ...
ಅಮೃತದ ಗಳಿಗೆಗಳ
ಮನೆಯೊಳಗೆ ಕರೆಯುತಲಿ
ಹಸಿರು ತೋರಣವನ್ನು ಕಟ್ಟುವಾಕೆ....
ಒಲುಮೆಯನು ಹಂಚುತ್ತಾ
ನಲುಮೆಯನು ತೋರುತ್ತಾ
ಮನೆಮನವನೆಂದೆಂದು ಬೆಳಗುವಾಕೆ...
ನಲಿವುಗಳೆ ಕರಗದಿರಿ
ನೋವುಗಳೆ ಕಾಡದಿರಿ
ಎಂದೆಲ್ಲ ಮನದಲ್ಲಿ ಬಯಸುವಾಕೆ...
ನಿರುತವೂ ದೇವರಿಗೆ
ಬೆಲ್ಲದಾರತಿ ಬೆಳಗಿ
ತನ್ನವರ ಒಳಿತನ್ನು ಬೇಡುವಾಕೆ
ತನಗಾಗಿ ಏನನ್ನು ಬೇಡದಾಕೆ...
ಮೇಡಮ್,
ಪ್ರತ್ಯುತ್ತರಅಳಿಸಿಮಹಿಳಾದಿನಾಚರಣೆಯ ಶುಭಾಶಯಗಳು.
ಧನ್ಯವಾದಗಳು ಸಾರ್
ಅಳಿಸಿಮಹಿಳಾದಿನದ ಶುಭಾಶಯಗಳು. :)
ಪ್ರತ್ಯುತ್ತರಅಳಿಸಿಧನ್ಯವಾದಗಳು. ನಿಮಗೂ ಸಹ ಮಹಿಳಾ ದಿನಾಚರಣೆಯ ಶುಭಾಶಯಗಳು
ಅಳಿಸಿ