ಅಳಿಲೇ... ಅಳಿಲೇ...



ಅಳಿಲೇ... ಅಳಿಲೇ...
ಮುದ್ದಿನ ಅಳಿಲೇ..
ಚೀವ್.. ಚೀವ್.. ಎಂದು 
ಉಲಿಯುವ ಅಳಿಲೇ..

ವೇಗದಿ ಮರವನು
ಏರುವ ಅಳಿಲೇ
ಪಿಳಿ ಪಿಳಿಯೆಂದು 
ನೋಡುವ ಅಳಿಲೇ

ನನ್ನಯ ಕೈಯಿಗೆ 
ಸಿಕ್ಕರೆ ನೀನು
ನಿನ್ನಯ ನೆತ್ತಿಯ 
ಸವರುವೆ ನಾನು

ಮೃದು ಮೈಯ್ಯನ್ನು 
ಮುದ್ದಿಸಲೇನು?
ಬೆನ್ನಿನ ಗೆರೆಗಳ 
ಮುಟ್ಟಲೆ ನಾನು?

ಪುಟು ಪುಟು ಎಂದು
ಓಡುವೆ ಏಕೆ?
ತಿನ್ನಲು ಹಣ್ಣನು 
ಕೊಡುವೆನು ಬೇಕೆ?

ಬಾ..ಬಾ... ಅಳಿಲೇ
ಪುಟಾಣಿ ಅಳಿಲೇ..
ಮುದ್ದಿನ ಅಳಿಲೇ...

(ಚಿತ್ರಕೃಪೆ-ಅಂತರ್ಜಾಲ)

8 ಕಾಮೆಂಟ್‌ಗಳು:

  1. ಮನ ಸೆಳೆಯುವ ಬಾಲಗೀತೆಯನ್ನು ರಚಿಸಿದ್ದೀರಿ. ಓದುತ್ತಿರುವಂತೆ, ನನ್ನ ಬಾಲ್ಯಕ್ಕೆ ಮರಳಿದಂತೆನೆಸಿತು. ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ನನ್ನ ಬಾಲ್ಯದಲ್ಲಿ ಅಳಿಲನ್ನು ನೋಡಿದಾಗ ಮೂಡಿದ್ದ ಭಾವನೆಗಳನ್ನು, ಮುದ್ದು ಮಕ್ಕಳಿಗಾಗಿ ಈಗ ಇಲ್ಲಿ ಪ್ರಕಟಿಸಿದ್ದೇನೆ. ನಿಮ್ಮ ಅಭಿಪ್ರಾಯಕ್ಕೆ ನನ್ನ ಧನ್ಯವಾದಗಳು.

      ಅಳಿಸಿ
  2. ಉತ್ತಮ ಶಿಶುಗೀತೆ. ಸರಳವಾಗಿ ಓದಿಸಿಕೊ೦ಡ ಪದ್ಯ - ಹೃದ್ಯವಾಯಿತು. ಧನ್ಯವಾದಗಳು.

    ಅನ೦ತ್

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಸರಳವಾದ ಪದ್ಯವನ್ನು ಮಕ್ಕಳು ಇಷ್ಟ ಪಡುತ್ತಾರೆ.ಆಗಾಗ ಹಾಡಿಕೊಳ್ಳುತ್ತಾರೆ ಎಂದು ನನ್ನ ಅನಿಸಿಕೆ. ಬಹಳ ದಿನಗಳ ನಂತರ ಬಿಡುವು ಮಾಡಿಕೊಂಡು ನಿಮ್ಮ ಅಭಿಪ್ರಾಯ ತಿಳಿಸಿರುವಿರಿ. ಧನ್ಯವಾದಗಳು.

      ಅಳಿಸಿ
  3. ಸರಳ ಸುಂದರ ಗೀತೆ.... ಬಾಲ್ಯ ನೆನಪಿಸಿ ಕೊಟ್ಟಿರಿ....
    ಧನ್ಯವಾದಗಳು

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಸುಶ್ಮಾ ರವರೆ, ನನ್ನ ಬ್ಲಾಗ್ ಗೆ ನಿಮಗೆ ಸ್ವಾಗತ.ಬಾಲ್ಯದ ದಿನಗಳೇ ಹಾಗೆ...... ಸವಿ... ಸವಿ... ಮಧುರ.....
      ಧನ್ಯವಾದಗಳು.ಆಗಾಗ್ಗೆ ಬ್ಲಾಗ್ ಗೆ ಬರುತ್ತಿರಿ.

      ಅಳಿಸಿ
  4. ಮುದ್ದಾದ ಬಾಲಗೀತೆ.. ಚೆನ್ನಾಗಿದೆ

    ಪ್ರತ್ಯುತ್ತರಅಳಿಸಿ

ನಿಮ್ಮ ಅಮೂಲ್ಯವಾದ ಸಲಹೆ ಮತ್ತು ಅಭಿಪ್ರಾಯಗಳಿಗೆ ಸದಾ ಸ್ವಾಗತವಿದೆ.