Facebook ಬಂದ ನಂತರ orkut.comನ ನಾವೆಲ್ಲರೂ ಮರೆತೇ
ಬಿಟ್ಟಿದ್ದೇವೆ.....!!! ನಿನ್ನೆ ಆರ್ಕುಟ್ ನ ನನ್ನ profile ನೋಡುವ
ಮನಸ್ಸಾಯಿತು....! ಅದ ನೋಡುತ್ತಾ ಹಳೆಯ ಸಿಹಿ ನೆನಪುಗಳು ಒಂದರ ನಂತರ ಮತ್ತೊಂದು ಮನಸೆಳೆಯಲು
ಆರಂಭಿಸಿದವು. ನನ್ನ ಮಗಳ profile ವೀಕ್ಷಿಸುವಾಗ ಅವಳು ಬರೆದ ಕವನಗಳು ಮತ್ತು ನಾನು ಮತ್ತು ಗಿರೀಶ್
ಅವಳಿಗೆ ಬರೆದ Testimonial ಗಳು ನನ್ನನ್ನು ಆಕರ್ಷಿಸಿದವು....!ಅವುಗಳನ್ನು ನನ್ನ
ಬ್ಲಾಗಿನಲ್ಲಿ ಹಂಚಿಕೊಳ್ಳುವ ಹಂಬಲವಾಯಿತು.
I LOVE YOU .......I LOVE YOU .......I LOVE YOU .......ಪುಟ್ಟು!!!!!!!
ನಾನು ಮತ್ತು ಗಿರೀಶ್ ಅವಳಿಗೆ ಬರೆದ Testimonial ಗಳು
Dec 17,
2009
"ನನ್ನ ಮಗಳು- ನಾ ಕಂಡಂತೆ"
ಈಗಲೂ ಮನೆಮಂದಿಗೆಲ್ಲ ’ಪುಟ್ಟು’ ಇವಳು.ಒಬ್ಬಳೇ ಮಗಳೆಂಬ ಅಹಂಭಾವ ನನ್ನ
ಮಗಳಿಗಿಲ್ಲ. ಮಮತೆ, ಮುದ್ದಿನಲ್ಲೇ
ಬೆಳೆದರೂ ಶಿಸ್ತನ್ನು ಮರೆತವಳಲ್ಲ. ಆಕಾಶಕ್ಕೆ ಏಣಿ ಹಾಕುವ ಸ್ವಭಾವವಲ್ಲ. ವಾಸ್ತವಿಕತೆಯ ಅರಿವಿದೆ. ಆದರೆ ತನ್ನ
ಯೋಗ್ಯತೆಗೆ ನಿಲುಕುವ ಪ್ರತಿಯೊಂದಕ್ಕೂ ಕೈ ಚಾಚುವ ಮತ್ತು ಅದನ್ನು ತನ್ನದಾಗಿಸಿಕೊಳ್ಳಲು
ಮುಂದಾಗುವ ಆತ್ಮವಿಶ್ವಾಸವಿದೆ. ಬೇರೆಯವರ ನೋವಿಗೆ ಸ್ಪಂದಿಸುವ ಮನಸ್ಸಿದೆ. ದೇವರು, ಹಿರಿಯರೆಂದರೆ ಗೌರವವಿದೆ. ಆದರೆ ಯಾವುದೇ ತೋರ್ಪಡಿಕೆಯನ್ನು
ಇಷ್ಟಪಡುವುದಿಲ್ಲ. ಆಭರಣಗಳ ಮೇಲಿನ ಮೋಹಕ್ಕಿಂತ ತರಾವರಿ ಡ್ರೆಸ್ ಗಳನ್ನು ಹಾಕಿಕೊಳ್ಳುವುದೇ
ಅಚ್ಚುಮೆಚ್ಚು. ದೇಶ-ವಿದೇಶ ಸುತ್ತುವ ಹಂಬಲ.ಚಿತ್ರಕಲೆ, ನಾಣ್ಯ ಸಂಗ್ರಹಣೆಯ ಅಚ್ಚುಮೆಚ್ಚಿನ ಹವ್ಯಾಸವಿದೆ. ಯಾವುದೇ ಕೆಲಸವನ್ನು ತನ್ನ ಸ್ವಂತ ಆಲೋಚನೆಯ
ಮೂಲಕ ಬೇರೆಯವರಿಗಿಂತ ಭಿನ್ನವಾಗಿ ಮಾಡುವ ತಾಕತ್ತಿದೆ. ಚಿಕ್ಕವಳಿದ್ದಾಗಿಂದ ನನ್ನ ಮಗಳು
ಬೇರೆಯವರಿಗೆ ಮಾದರಿಯಾಗಿದ್ದಾಳೆ ಎಂಬುದು ನಮಗೆ ಹೆಮ್ಮೆಯ ಸಂಗತಿ. ಗಿರೀಶ್ ಹೇಳಿದಂತೆ ಪಾನಿಪೂರಿ ಪ್ರಿಯೆ, ಷಾಪಿಂಗ್ ಅಂದ್ರೆ ರೆಡಿ.
ಬೆಳಗ್ಗೆ ಬೇಗ ಏಳುವುದೆಂದರೆ ಆಗದು.
ಆದರೆ ಎದ್ದ ನಂತರ ಎಲ್ಲಾಕೆಲಸವೂ ಚಕಾಚಕ್ ಎಂದು ಮುಗಿಸಿಬಿಡಬೇಕು.ಸ್ವಲ್ಪ ಮುಂಗೋಪಿ. ಕೋಪ ಹೆಚ್ಚು ಹೊತ್ತಿರುವುದಿಲ್ಲ ಎಂಬುದು
ಸಮಾಧಾನದ ವಿಷಯ.
ಸ್ಮಿತಾ - ನಮ್ಮ ಮನ-ಮನೆಯ
ಸಿಂಗಾರ.ನಮ್ಮ ಬಾಳ ಬಂಗಾರ.
ನಿಮ್ಮ ಬದುಕಾಗಿರಲಿ ಮಧುರ....
ಮಧುರ....ಮಧುರ....
- Nov 18, 2009
Here is my testi for my dearest Smitha urf
smi, simi, smith, smiz, grishmi...... is my cutest wife. Good things about her
are she is very understanding,patient,adjusting and always cheerfull, but bad
thing is she gets very cranky atleast once a day like every women on this
earth:). Hogs for shopping, cant stay a day without thinking of shopping, next
moment my mind calculates how many extra teeth I have to pull to fulfill her
requirements☺.She wants Pani Puri in Townsville, I don’t know from where to
get???. Smi and I have been married for four months. It's been a good, arranged
marriage. We are getting to know each other well, everyday is a new day for us.
But I have noticed all good qualities, a woman should have to handle a happy
married life. Before I made up my mind to marry smi,many people told me she is
the only daughter in her family so will be over pampered,demanding,dominating
etc etc etc. I did not see 0.1% of such attitude in her. I must say that I am
proud to be part of her family.LOVE U SMI..