ಹೊಸ ವರುಷ ಹೊಸ ಹರುಷ......!!

ಸರ್ವರಿಗೂ ಶ್ರೀಜಯ ನಾಮ ಸಂವತ್ಸರದ ಹಾರ್ದಿಕ ಶುಭಾಶಯಗಳು



ಪುಟ್ಟ ಪುಟ್ಟ ಮಕ್ಕಳಿಗೆ ಈ ಚಿಕ್ಕ ಪದ್ಯದೊಂದಿಗೆ ಹಬ್ಬದ ಶುಭ ಹಾರೈಕೆಗಳು

ಕೋಗಿಲೆ

ಮಾವಿನ ಮರದಲಿ
ಚಿಗುರನು ಕಂಡು
ಮಿತ್ರ ವಸಂತ
ಬರುತಿಹನೆಂದು

ಎಲ್ಲೋ ಅಡಗಿದ
ಕೋಗಿಲೆಯೊಂದು
ಕುಹೂ...ಕುಹೂ..
ಗಾನವಗೈದಿಹುದು

ಮಧುರಾಲಾಪನೆ
ಮಾಡಿಹುದು
ಗೆಳೆಯಗೆ ಸ್ವಾಗತ
ಕೋರಿಹುದು
ಬಾ.. ಬಾರೋ...
ವಸಂತ ಎಂದಿಹುದು.



ಮರೆಯಲಾಗದ ಹೊಸ ವರುಷದ ಹಾಡುಗಳು

ಯುಗ ಯುಗಾದಿ ಕಳೆದರೂ.......
ತೆರೆದಿದೆ ಮನೆ ಓ ಬಾ ಅತಿಥಿ......
ಮಾಮರವೆಲ್ಲೊ ಕೋಗಿಲೆ ಎಲ್ಲೋ....
ಪಲ್ಲವಗಳ ಪಲ್ಲವಿಯಲಿ......


9 ಕಾಮೆಂಟ್‌ಗಳು:

  1. ಶಿಶುಗೀತೆಗಳೇ ಅಪರೂಪವಾಗುತ್ತಿರುವ ಈ ದಿನಗಳಲ್ಲಿ ತಮ್ಮ ಈ ಕೊಡುಗೆಗಾಗಿ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  2. ಯುಗಾದಿಯ ಶುಭಾಶಯಗಳು. ಹೊಸ ಸಂವತ್ಸರವು ಸುಖ,ಶಾಂತಿಯನ್ನು ತರಲಿ.

    ಪ್ರತ್ಯುತ್ತರಅಳಿಸಿ
  3. ಶಿವಕುಮಾರ್ ರವರೇ,
    ಮೊದಲಿಗೆ ನನ್ನ ಬ್ಲಾಗಿಗೆ ನಿಮಗೆ ಸ್ವಾಗತ....ನನ್ನ ಲೇಖನಗಳ ಕುರಿತ ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು...... ನಿಮ್ಮ ಬ್ಲಾಗ್ ಸಹ ವಿಶೇಷವಾಗಿ ಇರಬಹುದು... ಖಂಡಿತವಾಗಿಯೂ ಭೇಟಿ ನೀಡುತ್ತೇನೆ......

    ಪ್ರತ್ಯುತ್ತರಅಳಿಸಿ
  4. ಪ್ರೀತಿಯ ಻ ಻
    ಅಮ್ಮನಿಗೆ ಈ ದಿನಾಚರಣೆ (May 11)
    ಅದಕ್ಕೆ ಈ ಪುಟ್ಟ ಸಂದೇಶ.

    ಪ್ರತ್ಯುತ್ತರಅಳಿಸಿ
  5. ಮಂಜುಳಾದೇವಿಯವರೇ,
    ನಿಮ್ಮಲ್ಲಿ ಒಂದು ಸಣ್ಣ ಪ್ರಶ್ನೆ,
    ನಿಮ್ಮ ಬ್ಲಾಗನ್ನು ಪ್ರವೇಶಿಸಿದ ನಂತರ ಅಡ್ರೇಸ್ ಬಾರನಲ್ಲಿ ಬ್ಲಾಗ(B)ನ ಚಿನ್ಹೆ ಬರುವ ಬದಲು ನಿಮ್ಮ ಭಾವಚಿತ್ರ ಬರುತ್ತಿದೆಯಲ್ಲವೇ, ಅದು ನೀವು ಹೇಗೆ ಬದಲಾಯಿಸಿದಿರಿ ? ನನಗೂ ಆ ರೀತಿ ಬದಲಾಯಿಸಬೇಕು,
    ಅದರ ಸೆಟ್ಟಿಂಗ ತಿಳಿಸುವಿರಾ ?

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಶಿವಕುಮಾರ್,
      Design ನಲ್ಲಿ Layout ಗೆ ಹೋಗಿ Fevicon Edit ಮಾಡಿ Photo ಸೇರಿಸಿದರೆ ಆಯಿತು.....!!!

      ಅಳಿಸಿ

ನಿಮ್ಮ ಅಮೂಲ್ಯವಾದ ಸಲಹೆ ಮತ್ತು ಅಭಿಪ್ರಾಯಗಳಿಗೆ ಸದಾ ಸ್ವಾಗತವಿದೆ.