ಕೆಳಗಿನ ಲಿಂಕ್ ನಲ್ಲಿ ಪದಬಂಧವಿದೆ. ಅದನ್ನು ಬಿಡಿಸಲು ಪ್ರಯತ್ನಿಸಿ,ಉತ್ತರಗಳನ್ನು ಪೋಸ್ಟ್ ಮಾಡಿ.
ಸರಿಯುತ್ತರ ಮುಂದಿನವಾರ.
ಪದ ವಿನ್ಯಾಸ - ೧
ಮರಿಹಕ್ಕಿಯಾಸೆ
ನಾನೊಂದು ಮರಿಹಕ್ಕಿ
ಗೂಡಿಂದ ಹೊರಬಂದುಅಂಗಳದ ಚೆಲುವನೀಂಟುವಾಸೆ
ಗರಿಬಿಚ್ಚಿ ಮರವೇರಿ
ರೆಂಬೆ ಕೊಂಬೆಗೆ ಹಾರಿ
ಕಲರವವ ಮಾಡುವಾಸೆ
ಗುಡ್ಡಬೆಟ್ಟವ ಸೇರಿ
ಎತ್ತರೆತ್ತರಕ್ಕೇರಿ
ಬಾನಿಂದ ಸೊಬಗನ್ನು ಸವಿಯುವಾಸೆ
ಮಿತ್ರರೊಡನೊಂದಾಗಿ
ಚಿಲಿಪಿಲಿಯ ನಾ ಕಲಿತು
ನನ್ನದೇ ಹಾಡನ್ನು ಹಾಡುವಾಸೆ
ನನ್ನೆದೆಯ ಹತ್ತಾರು
ಕನಸ ಕಡ್ಡಿಗಳನಾಯ್ದು
ಚಂದದ ಗೂಡೊಂದ ಕಟ್ಟುವಾಸೆ
ಬೆಚ್ಚನೆಯ ಗೂಡಲ್ಲಿ
ಹೊಚ್ಚ ಹೊಸ ಭಾವನೆಯ
ತತ್ತಿಗೆ ಚೈತನ್ಯ ತುಂಬುವಾಸೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)