ಕಾವ್ಯದಲ್ಲಿ ಪದ ಚಮತ್ಕಾರ


ನನ್ನ ಸಹೋದ್ಯೋಗಿಯೊಬ್ಬರಿಂದ ತಿಳಿದ ಈ ಸಂಸ್ಕೃತ ಪದ್ಯವನ್ನು ನನ್ನ ಬ್ಲಾಗ್ ನಲ್ಲಿ ಉಲ್ಲೇಖಿಸಲು ನನಗೆ ಸಂತಸವೆನಿಸುತ್ತಿದೆ.ಈ ಪದ್ಯದಲ್ಲಿರುವ ಅಕ್ಷರಗಳ ಚಮತ್ಕಾರ ವನ್ನು ಕಂಡು ವಿಸ್ಮಿತಳಾಗಿದ್ದೇನೆ. ನಾಲ್ಕು ಸಾಲಿನ ಈ ಕಾವ್ಯದಲ್ಲಿ ಹರಿಹರರಿಬ್ಬರ ವರ್ಣನೆಯೂ ಇದೆ. ಪ್ರತಿ ಪದದ ಮೊದಲ ಅಕ್ಷರ ಸೇರಿಸಿ ಓದಿದರೆ ಶಿವನ ಸ್ತುತಿಯಾದರೆ, ಮೊದಲ ಅಕ್ಷರವನ್ನು ಬಿಟ್ಟು ಓದಿದರೆ ವಿಷ್ಣುವಿನ ವರ್ಣನೆಯಾಗುತ್ತದೆ. ಇಂಥಹ ಪದ್ಯ ರಚನೆ ಕವಿಯ ಪಾಂಡಿತ್ಯವನ್ನು ಎತ್ತಿ ತೋರುತ್ತದೆ.  ಇದರ ಸೊಬಗನ್ನು ನೀವೂ ಸವಿಲೆಂಬುದೇ ನನ್ನ ಆಶಯ.  ಇದೇ ರೀತಿಯ ಬೆರಗಿನ ಕಾವ್ಯಗಳು ನಿಮಗೆ ತಿಳಿದಿದ್ದರೆ ನನ್ನೊಂದಿಗೆ ಹಂಚಿಕೊಳ್ಳಿ.

"ಪಾಯಾತ್, ಕುಮಾರಜನಕ ಶಶಿಖಂಡಮೌಳಿಃ
 ಶಂಖಪ್ರಭಶ್ಚ ನಿಧನಶ್ಚ ಗವೀಶಯಾನಃ
 ಗಂಗಾಂಚ ಪನ್ನಗಧರಶ್ಚ ಉಮಾವಿಲಾಸಃ
 ಆದ್ಯಕ್ಷರೇಣ ಸಹಿತೋ ರಹಿತೋಪಿ ದೇವಃ"


ಈ ಪದ್ಯದ ಅರ್ಥ ಹೀಗಿದೆ:

ಪಾಯಾತ್ - ಕಾಪಾಡು
ಕುಮಾರಜನಕ - ಶಿವ,  ಮಾರಜನಕ - ವಿಷ್ಣು
ಶಶಿಖಂಡಮೌಳಿಃ - ಚಂದ್ರನನ್ನು ಧರಿಸಿದವನು
ಶಿಖಂಡಮೌಳಿಃ - ನವಿಲುಗರಿ ಧರಿಸಿದವನು
ಶಂಖಪ್ರಭಶ್ಚ - ಬಿಳಿ, ಹಿಮಾಲಯವಾಸಿ,ಕೈಲಾಸವಾಸಿ
ಖಪ್ರಭಶ್ಚ - ನೀಲಿ ಬಣ್ಣದವನು (ಖ-ಆಕಾಶ)
ನಿಧನಶ್ಚ - ಲಯಕಾರಕ, ಧನಶ್ಚ - ಲಕ್ಷ್ಮೀಪತಿ
ಗವೀಶಯಾನಃ - ಬಸವವಾಹನ,  ವೀಶಯಾನಃ - ಪಕ್ಷಿವಾಹನ
ಗಂಗಾಂಚ - ಗಂಗೆಯ ಒಡೆಯ, ಗಾಂಚ -ಗೋವುಗಳನ್ನು ಕಾದವನು
ಪನ್ನಗಧರಶ್ಚ - ಹಾವನ್ನು ಧರಿಸಿದವನು, ನಗಧರಶ್ಚ - ಗಿರಿಧರ
ಉಮಾವಿಲಾಸಃ - ಶಿವ, ಮಾವಿಲಾಸಃ - ವಿಷ್ಣು (ಮಾ-ರಮಾ)
ಆದ್ಯಕ್ಷರೇಣ ಸಹಿತೋ ರಹಿತೋಪಿ ದೇವಃ - ಪ್ರಥಮಾಕ್ಷರ ಸಹಿತವೂ ರಹಿತವೂ ಆದ ದೇವನೇ ಕಾಪಾಡು.

(ಚಿತ್ರಕೃಪೆ - ಅಂತರ್ಜಾಲ)

16 ಕಾಮೆಂಟ್‌ಗಳು:

  1. ಮ೦ಜುಳಾ ದೇವಿಯವರೆ,
    ಈ ಶ್ಲೋಕ ನಿಜಕ್ಕೂ ಪ್ರಶ೦ಸನಿಯವಾಗಿದೆ.ಓದಿ ಖುಶಿಯಾಯಿತು.
    ನಮ್ಮೊ೦ದಿಗೆ ಹ೦ಚಿಕೊ೦ಡಿದ್ದಕ್ಕೆ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  2. ಕವಿಯ ಪಾ೦ಡಿತ್ಯ ನಿಜಕ್ಕೂ ಪ್ರಶ೦ಸನೀಯ...ಅಕ್ಷರಗಳ ಚಮತ್ಕಾರವನ್ನು ನೋಡಿ ಖುಶಿಯಾಯ್ತು.
    ನಮ್ಮೊ೦ದಿಗೆ ಹ೦ಚಿಕೊ೦ಡಿದ್ದಕ್ಕೆ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  3. chamatkaarada padagala jodane sogasaagide. hanchikondakke dhanyavaadagalu.

    ananth

    ಪ್ರತ್ಯುತ್ತರಅಳಿಸಿ
  4. ಚಮತ್ಕಾರಪೂರ್ಣವಾದ ಈ ಪದ್ಯವನ್ನು ಓದಿ ಖುಶಿಯಾಯಿತು. ಧನ್ಯವಾದಗಳು. ಇಂತಹ ಮತ್ತೊಂದು ಪದ್ಯವನ್ನು ಇಲ್ಲಿ ಕೊಡುತ್ತೇನೆ:
    ಕೇಶವಂ ಪತಿತಂ ದೃಷ್ಟ್ವಾ ಪಾಂಡವಾಃ ಹರ್ಷನಿರ್ಭರಾ:
    ರುದಂತಿ ಕೌರವಾ: ಕೇಶವ ಹಾ ಹಾ ಕೇಶವ!

    ತೋರಿಕೆಯ ಅರ್ಥ:
    ಕೃಷ್ಣನು ಬಿದ್ದದ್ದನ್ನು ಕಂಡ ಪಾಂಡವರು ಸಂತೊಷಪಟ್ಟರು.
    ಕೇಶವ, ಕೇಶವ ಎಂದು ಕೌರವರು ಅತ್ತರು.

    ನಿಜವಾದ ಅರ್ಥ:
    ಕೇ(=ನೀರಿನಲ್ಲಿ) ಶವವು ಬಿದ್ದದ್ದನ್ನು ನೋಡಿದ ಮೀನುಗಳು(=ಪಾಂಡವರು) ಸಂತೋಷಪಟ್ಟರು. ಕಾಗೆಗಳು(=ಕೌರವಾಃ) ಹೆಣವು ನೀರಿನಲ್ಲಿ (=ಕೇಶವ) ಬಿದ್ದಿತಲ್ಲಾ ಎಂದು ದುಃಖಿಸಿದವು!

    ಪ್ರತ್ಯುತ್ತರಅಳಿಸಿ
  5. ಮನಮುಕ್ತಾರವರೆ,
    ನಿಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಕ್ಕೆ ಧನ್ಯವಾದಗಳು

    ಪ್ರತ್ಯುತ್ತರಅಳಿಸಿ
  6. ಅನಂತರಾಜ್ ರವರೆ,
    ನನ್ನ ಬ್ಲಾಗ್ ಗೆ ಸ್ವಾಗತ.ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು

    ಪ್ರತ್ಯುತ್ತರಅಳಿಸಿ
  7. ಸುನಾಥ್ ರವರೆ,
    ನೀವು ಹೇಳಿರುವ ಪದ್ಯದಲ್ಲಿರುವ ಚಮತ್ಕಾರವೂ ತುಂಬಾ ಸೊಗಸಾಗಿದೆ. ಇಂಥಹವುಗಳನ್ನು ಬರೆದ ಕವಿಗಳಿಗೆ ಅನಂತ ನಮನಗಳು.
    ನಿಮಗೆ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  8. ಚಮತ್ಕಾರಿಕ ಶ್ಲೋಕ..
    ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  9. ಧನ್ಯವಾದಗಳು ಸುಬ್ರಹ್ಮಣ್ಯರವರೆ.

    ಪ್ರತ್ಯುತ್ತರಅಳಿಸಿ
  10. ವಿಜಯಶ್ರೀಯವರಿಗೆ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  11. ವಿಜಯಶ್ರೀಯವರಿಗೆ ಧನ್ಯವಾದಗಳು ಜೊತೆಗೆ ನನ್ನ ಬ್ಲಾಗಿಗೆ ಸ್ವಾಗತ.

    ಪ್ರತ್ಯುತ್ತರಅಳಿಸಿ
  12. Manjula,
    kAvyada chamatkAra adbhutavagide.
    hamchikodiddakke dhanyavadagalu

    ಪ್ರತ್ಯುತ್ತರಅಳಿಸಿ
  13. ಚಮತ್ಕಾರಪೂರ್ಣವಾದ ಈ ಪದ್ಯವನ್ನು ಓದಿ ಖುಶಿಯಾಯಿತು, ಹೈ ಸ್ಕೂಲಿನಲ್ಲಿದ್ದಾಗ ಶಾಲೆಯ exhibition ಗೆ ಸಂಸ್ಕೃತ ವಿಭಾಗದಲ್ಲಿ ಈ ರೀತಿ ಹಲವು ಪದ್ಯಗಳ್ಲನ್ನು ಮೇಷ್ಟ್ರು ನಮ್ಮ ಕೈಯಲ್ಲಿ ಚಾರ್ಟ್ ಬರೆಸಿ ಹಾಕಿಸ್ತಾಯಿದ್ದದ್ದು ನೆನಪಾಯ್ತು.
    ಧನ್ಯವಾದಗಳು!!

    ಸುನಾಥ್ ಸರ್,
    ಮತ್ತೊಂದು ಪದ್ಯ ಮತ್ತದರ ಅರ್ಥವನ್ನು ಹೇಲಿದಕ್ಕೆ ನಿಮಗೂ ವಂದನೆಗಳು:)

    ಪ್ರತ್ಯುತ್ತರಅಳಿಸಿ
  14. ಪುಟ್ಟಿಯ ಅಮ್ಮನಿಗೆ ನನ್ನ ಬ್ಲಾಗ್ ಗೆ ಸ್ವಾಗತ.
    ನಿಮಗೂ ಈ ರೀತಿಯ ಪದ್ಯಗಳು ಗೊತ್ತಿದ್ದರೆ ನಮ್ಮೊಂದಿಗೆ ಹಂಚಿಕೊಳ್ಳಿ.
    ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ

ನಿಮ್ಮ ಅಮೂಲ್ಯವಾದ ಸಲಹೆ ಮತ್ತು ಅಭಿಪ್ರಾಯಗಳಿಗೆ ಸದಾ ಸ್ವಾಗತವಿದೆ.