ಬಣ್ಣದ ಬಳೆ... ರವಿಗೆ ಕಳೆ..!!


    ಬಾಹ್ಯಾಕಾಶ ವಿಸ್ಮಯಗಳ ಆಗರ.ವಾತಾವರಣದ ಪರಿಸ್ಥಿತಿಗೆ ಅನುಗುಣವಾಗಿ ಇಲ್ಲಿ ಜರುಗುವ ಅನೇಕ ಕ್ರಿಯೆಗಳು ಅತ್ಯದ್ಭುತ.ಇಂತಹ ಅಚ್ಚರಿಗಳಲ್ಲಿ, ಅಂಬರದಲ್ಲಿ ಮೂಡುವ ಕಾಮನಬಿಲ್ಲು ಸಹ ಒಂದು ಮನೋಹರ ಚಿತ್ರ.ಇದೇ ಕಾಮನಬಿಲ್ಲು ಸೂರ್ಯನ ಸುತ್ತ ಬಣ್ಣದ ಬಳೆಯಾಕಾರದಲ್ಲಿ ಮೂಡಿದರೆ ಆ ದೃಶ್ಯವೆಷ್ಟು ನಯನ ಮನೋಹರವಲ್ಲವೇ........!!!??? 

ಇತ್ತೀಚೆಗೆ ಭದ್ರಾವತಿಯಲ್ಲಿ ನಮ್ಮವರ ಕ್ಯಾಮರದಲ್ಲಿ ಸೆರೆಸಿಕ್ಕ ಈ ಮನಮೋಹಕ ದೃಶ್ಯಾವಳಿಗಳಿವು.ವೃತ್ತಾಕಾರದ ಬಣ್ಣದ ಬಳೆಗಳ ನಡುವೆ ಪ್ರಜ್ವಲಿಸುತ್ತಿದ್ದ ಸೂರ್ಯನನ್ನು ನೋಡುವುದೇ ಒಂದು ಅಪರೂಪದ ದೃಶ್ಯ.


  ನಿಸರ್ಗದಲ್ಲಿ ಉಂಟಾಗುವ ಅದ್ಭುತ ದೃಶ್ಯಕಾವ್ಯಗಳಲ್ಲಿ ಇದೂ ಒಂದು. ಭೂಮಿಯಿಂದ ಐದರಿಂದ ಎಂಟು ಕಿಲೋಮೀಟರ್ ಎತ್ತರದ ವಾತಾವರಣದಲ್ಲಿ ನಿರ್ಮಾಣವಾಗುವ ಹಿಮದ ಹರಳುಗಳ ಮೂಲಕ ಹಾದುಹೋಗುವ ರವಿಕಿರಣಗಳಿಂದುಂಟಾಗುವ ಪ್ರತಿಫಲನ,ವಕ್ರೀಭವನ ಮತ್ತು ಚದುರುವಿಕೆಯ ಕ್ರಿಯೆಗಳು ಈ ಬಣ್ಣದ ಬಳೆಗಳ ರಚನೆಗೆ ಕಾರಣವಂತೆ.ಇಲ್ಲಿ ಸೂರ್ಯನ ಬೆಳಕಿನ ಕಿರಣಗಳ ಎದುರು ಹಿಮದ ಹರಳುಗಳು ಪ್ರಿಸಂನಂತೆ ಮತ್ತು ದರ್ಪಣವಾಗಿ ವರ್ತಿಸಿ ಮನಸೆಳೆಯುವ ಕಾಮನಬಿಲ್ಲಿನ ಬಳೆಯ ಸೃಷ್ಟಿಗೆ ಕಾರಣವಾಗಿದೆ. ಇದನ್ನೇ ನಮ್ಮ ಪೂರ್ವಜರು ಸೂರ್ಯ ಗೂಡು ಕಟ್ಟಿದ್ದಾನೆ, ಮಳೆ ಬರುವ ಸೂಚನೆ ಎಂದು ಹೇಳುತ್ತಿದ್ದರು. 

4 ಕಾಮೆಂಟ್‌ಗಳು:

  1. ಇಂತಹ ಸುಂದರ ದೃಶ್ಯವನ್ನು ಸೆರೆ ಹಿಡಿದು ತೋರಿಸಿದ್ದಕ್ಕಾಗಿ ಹಾಗು ಅಷ್ಟೇ ಸುಂದರವಾದ ವಿವರಣೆಗಾಗಿ ಧನ್ಯವಾದಗಳು

    ಪ್ರತ್ಯುತ್ತರಅಳಿಸಿ
  2. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. • Manjula Devi ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ಸಾರ್ ....ಧನ್ಯವಾದಗಳು.... ನಮ್ಮ ಶಿವಮೊಗ್ಗದಲ್ಲಿ ಸಹಾ ಸೂರ್ಯನ ಸುತ್ತ ಬಳೆಗಳು ಕಂಡಿದ್ದವು.ನನಗದು Solar Halo ಎಂದು ತಿಳಿದಿರಲಿಲ್ಲ.....ಅ ಬಗ್ಗೆ ನಾನು ನನ್ನ ಬ್ಲಾಗ್ನಲ್ಲಿ "ಬಣ್ಣದ ಬಳೆ ರವಿಗೆ ಕಳೆ" ಎಂದು ಬರೆದಿದ್ದೆ. ಲಿಂಕ್ ಕೊಟ್ಟಿದ್ದೇನೆ....http://vinyasa-vinyasa.blogspot.in/2012/10/blog-post.html



      Srivathsa Joshi @Manjula Devi- ತುಂಬ ಚಂದವಾಗಿ, ಚಿಕ್ಕ-ಚೊಕ್ಕ ವಿವರಣೆಯೊಂದಿಗೆ ಸರಿಯಾಗಿಯೇ ಬರೆದಿದ್ದೀರಿ ನಿಮ್ಮ ಬ್ಲಾಗ್‌ನಲ್ಲಿ Solar Halo ಎಂದು ಅದಕ್ಕೆ ಇಂಗ್ಲಿಷ್ ಪದ ಅಷ್ಟೇ, ಮತ್ತೆ ನೀವು ಕೊಟ್ಟ ವಿವರಣೆಯೆಲ್ಲ ಪರ್ಫೆಕ್ಟ್ ಆಗಿಯೇ ಇದೆ.
      17 hours ago • Unlike • 1

      ಅಳಿಸಿ

ನಿಮ್ಮ ಅಮೂಲ್ಯವಾದ ಸಲಹೆ ಮತ್ತು ಅಭಿಪ್ರಾಯಗಳಿಗೆ ಸದಾ ಸ್ವಾಗತವಿದೆ.