ಪುಟ್ಟಕರು


ಅಂಬಾ... ಎಂದು
ಕರೆಯುತಲಿಹುದು
ಕೊಟ್ಟಿಯಲ್ಲಿಹ
ಪುಟ್ಟ ಕರು

ಹತ್ತಿರ ಸೆಳೆದು
ಮೈಯನು ನೆಕ್ಕಿ
ಮಮತೆಯ ತೋರಿತು
ತಾಯಿ ಹಸು

ಹಾಲನು ಕುಡಿದು
ಹೊಟ್ಟೆಯು ತುಂಬಿರೆ
ಕೊಟ್ಟಿಗೆ ತುಂಬ
ನೆಗೆವ ಕರು

ಬಾಲವನೆತ್ತಿ
ಕಿವಿಗಳ ಅರಳಿಸಿ
ಜೊತೆಯವರೊಂದಿಗೆ
ನಲಿವ ಕರು

8 ಕಾಮೆಂಟ್‌ಗಳು:

  1. ಪ್ರತ್ಯುತ್ತರಗಳು
    1. ಮನಮುಕ್ತಾ ರವರೇ,ಬಹಳ ದಿನಗಳ ನಂತರ ನನ್ನ ಬ್ಲಾಗಿಗೆ ಭೇಟಿ ಕೊಟ್ಟಿದ್ದೀರಿ.ಸಂತೋಷವಾಯ್ತು.ಧನ್ಯವಾದಗಳು.

      ಅಳಿಸಿ
  2. manjularavare muddaada chitranakke chandada kavana.dhanyavaadagalu.

    ಪ್ರತ್ಯುತ್ತರಅಳಿಸಿ
  3. ಮಂಜುಳಾದೇವಿಯವ್ರೇ....ತಾಯಿಯ ಮನಮಾತ್ರ ಇಂತಹ ಸುಂದರತೆಯನ್ನು ನಿತ್ಯದಲ್ಲಿ ಕಾಣಲು ಸಾಧ್ಯ..ಸುಂದರ ಸರಳ ಮನೋಜ್ಞ,..

    ಪ್ರತ್ಯುತ್ತರಅಳಿಸಿ

ನಿಮ್ಮ ಅಮೂಲ್ಯವಾದ ಸಲಹೆ ಮತ್ತು ಅಭಿಪ್ರಾಯಗಳಿಗೆ ಸದಾ ಸ್ವಾಗತವಿದೆ.