ಪುಟ್ಟಕರು


ಅಂಬಾ... ಎಂದು
ಕರೆಯುತಲಿಹುದು
ಕೊಟ್ಟಿಯಲ್ಲಿಹ
ಪುಟ್ಟ ಕರು

ಹತ್ತಿರ ಸೆಳೆದು
ಮೈಯನು ನೆಕ್ಕಿ
ಮಮತೆಯ ತೋರಿತು
ತಾಯಿ ಹಸು

ಹಾಲನು ಕುಡಿದು
ಹೊಟ್ಟೆಯು ತುಂಬಿರೆ
ಕೊಟ್ಟಿಗೆ ತುಂಬ
ನೆಗೆವ ಕರು

ಬಾಲವನೆತ್ತಿ
ಕಿವಿಗಳ ಅರಳಿಸಿ
ಜೊತೆಯವರೊಂದಿಗೆ
ನಲಿವ ಕರು

8 ಕಾಮೆಂಟ್‌ಗಳು:

  1. ಪ್ರತ್ಯುತ್ತರಗಳು
    1. ಮನಮುಕ್ತಾ ರವರೇ,ಬಹಳ ದಿನಗಳ ನಂತರ ನನ್ನ ಬ್ಲಾಗಿಗೆ ಭೇಟಿ ಕೊಟ್ಟಿದ್ದೀರಿ.ಸಂತೋಷವಾಯ್ತು.ಧನ್ಯವಾದಗಳು.

      ಅಳಿಸಿ
  2. ಮಂಜುಳಾದೇವಿಯವ್ರೇ....ತಾಯಿಯ ಮನಮಾತ್ರ ಇಂತಹ ಸುಂದರತೆಯನ್ನು ನಿತ್ಯದಲ್ಲಿ ಕಾಣಲು ಸಾಧ್ಯ..ಸುಂದರ ಸರಳ ಮನೋಜ್ಞ,..

    ಪ್ರತ್ಯುತ್ತರಅಳಿಸಿ

ನಿಮ್ಮ ಅಮೂಲ್ಯವಾದ ಸಲಹೆ ಮತ್ತು ಅಭಿಪ್ರಾಯಗಳಿಗೆ ಸದಾ ಸ್ವಾಗತವಿದೆ.