ಈ ದಿನ ಹಾಗೇ ಸುಮ್ಮನೆ ಅಂತ್ಯಾಕ್ಷರಿ ಮಾಡೋಣ ಅನ್ನಿಸಿತು....!!!ಎಲ್ಲವೂ ಸರಳ ಪ್ರಶ್ನೆಗಳು... ಎಲ್ಲಾ ಸುತ್ತುಗಳಿಗೂ ಸೇರಿ ನಿಮಗಿರುವ ಸಮಯ ಹತ್ತು ನಿಮಿಷಗಳು.ಉತ್ತರ ತಿಳಿಸುತ್ತೀರಲ್ವ..???
2................. ವೀರರಮಣಿಯ
ಸನ್ನಿವೇಶ ಸುತ್ತು:-
ಈ ಸುತ್ತಿನಲ್ಲಿ ಚಿತ್ರದ ಸನ್ನಿವೇಶದ ಬಗ್ಗೆ ಒಂದು ಚಿಕ್ಕ ಮಾಹಿತಿ ನೀಡಿದ್ದೇನೆ. ಆ ಸುಳಿವಿನ ಮೂಲಕ ಚಿತ್ರದ ಹೆಸರು ಮತ್ತು ಹಾಡು ಯಾವುದೆಂದು ಕಂಡು ಹಿಡಿಯಬೇಕು
1.ಮೊದಲ ಕನ್ನಡ ಸಾಮ್ರಾಜ್ಯವೆಂಬ ಹೆಗ್ಗಳಿಕೆಗೆ ಪಾತ್ರವಾದ ಕದಂಬರ ಪ್ರಸಿದ್ಧ ರಾಜನ ಕತೆಯ ಚಲನಚಿತ್ರವಿದು.ದುಷ್ಟ ರಾಜನ ಆಡಳಿತದಿಂದ ನೊಂದ ಬಡಜನರ ಕಣ್ಣೀರು ಒರೆಸಿ,ನಿಮ್ಮೊಂದಿಗೆ ನಾನಿದ್ದೇನೆ,ವೈರಿಗಳನ್ನು ಬಡಿದೋಡಿಸುವೆ ಎಂದು ಈ ಹಾಡಿನ ಮೂಲಕ ನಾಯಕ ನಾಡಿನ ಜನರಿಗೆ ಅಭಯ ನೀಡುವ ಹಾಡು.ಈ ಚಿತ್ರದಲ್ಲಿ ರಾಜ್ ಕುಮಾರ್ ಮತ್ತು ಮಂಜುಳ ಪ್ರಧಾನ ಪಾತ್ರದಲ್ಲಿದ್ದಾರೆ.
2.ತ್ರಿವೇಣಿ ಕಾದಂಬರಿ ಆಧಾರಿತ ,ಪುಟ್ಟಣ್ಣ ಕಣಗಾಲ್ ನಿರ್ದೇಶನದ ಮೊದಲ ಚಿತ್ರ.ಈ ಚಿತ್ರದ ನಾಯಕಿ ಕಾಫಿ ಎಸ್ಟೇಟ್ ಮಾಲೀಕರ ಒಬ್ಬಳೇ ಮಗಳು.ಬೆಳಗ್ಗೆ ತನ್ನ ತೋಟವನ್ನೆಲ್ಲ ಸುತ್ತಾಡುತ್ತಾ ಪೂಜೆಗಾಗಿ ಹೂಗಳನ್ನು ಕೀಳುತ್ತಾ, ದ ರಾ ಬೇಂದ್ರೆಯವರು ಬರೆದ ಈ ಗೀತೆಯನ್ನು ಹಾಡುತ್ತಾಳೆ.ಕಲ್ಪನಾ ಚಿತ್ರದ ನಾಯಕಿ.
3.ಶಾಪಕ್ಕೆ ಗುರಿಯಾದ ಏಳು ಜನ ಗಂಧರ್ವರು ಪೆದ್ದ ಶಿಷ್ಯರಾಗಿ ಭೂಮಿಗೆ ಬರುತ್ತಾರೆ. ಈ ಪೆದ್ದ ಶಿಷ್ಯರು ಹಾಡುವ ಜಾಣರ ಹಾಡಿದು.ಈ ಚಿತ್ರದ ಪ್ರಧಾನ ಭೂಮಿಕೆಯಲ್ಲಿ ವಿಷ್ಣುವರ್ಧನ್, ಮಂಜುಳ ಇದ್ದಾರೆ.
4.ವಿಶ್ವ ವಿಖ್ಯಾತ ಜೋಗವನ್ನು ಕುರಿತಾದ ಈ ಹಾಡನ್ನು ರಾಜ್ ಕುಮಾರ್ ಹಾಡಿದ್ದಾರೆ.
5.ವಿಷ್ಣುವರ್ಧನ್ ಮತ್ತು ಸುಹಾಸಿನಿ ಓಕುಳಿಯಾಡುತ್ತಾ ಹಾಡಿದ ಈ ಹಾಡು ನಾಯಕ ಕಂಡ ಕನಸು ಮಾತ್ರ.
6.ತನಗೊಂದು ಮಗು ಹುಟ್ಟುವುದರೊಂದಿಗೆ ಅಪ್ಪನೂ ಹುಟ್ಟುತ್ತಾನೆ.ಅದು ಬೆಳೆದಂತೆ ತಾನೂ ಬೆಳೆಯುತ್ತಾನೆ ಎನ್ನುವ ಈ ಚಿತ್ರದ ತಂದೆ ತನ್ನ ಮಗಳು ಹುಟ್ಟಿದಾಗ ಹಾಡುವ ಕನಸಿನ ಹಾಡು.
ಅಂತ್ಯ ಪದ ಸುತ್ತು:-
ಚಿತ್ರಗೀತೆಯ ಪಲ್ಲವಿಯ ಸಾಲಿನ ಕೊನೆಯ ಪದವನ್ನು ಕೊಟ್ಟಿದ್ದೇನೆ.ಹಾಡು ಯಾವುದೆಂದು ಗುರುತಿಸಿ.
1............ ಕಡಲಲ್ಲಿ
........... ದೋಣಿಯಲಿ
........... ನಾನಮ್ಮ
2................. ವೀರರಮಣಿಯ
................. ವೀರನಾರಿಯ
................. ಹಾಡುವೆ
3........... ಸಾಕ್ಷಾತ್ಕಾರ
........... ಮಮಕಾರ
........... ಮಮಕಾರ
4............ ನೀರಹಾಡು
............ ಪ್ರೀತಿಹಾಡು
............ ಇರುಳಿರಲಿ
............ ಹೇಗಿರಲಿ
............ ನೀ ತುಂಬಿದೆ
5..................... ಬದುಕಿರಲಾರೆ
..................... ನಾನಿರಲಾರೆ
..................... ತಾಳಲಾರೆ
..................... ಸಹಿಸಲಾರೆ
6.............. ಎಲ್ಲಿದೆ
.............. ಕೊನೆಯಿದೆ
.............. ಕಾಣುವೆ
...............ನಿಧಾನಿಸು
ಚಿತ್ರಗೀತೆಯಾಗಿರುವ ಕವಿಗಳ ಕವನ ಸುತ್ತು:-
1.ಕುವೆಂಪು ರವರು ಬರೆದ "ಹೊಸಬೆಳಕು" ಚಿತ್ರದ ಗೀತೆಯನ್ನು ಹೇಳಿ.
2."ಶರಪಂಜರ" ಚಿತ್ರದ ದ ರಾ ಬೇಂದ್ರೆ ವಿರಚಿತ ಗೀತೆ ಹೇಳಿ.
3.ಕುವೆಂಪು ವಿರಚಿತ ನಮ್ಮ ನಾಡಗೀತೆಯೂ ಚಲನಚಿತ್ರ ಗೀತೆಯಾಗಿದೆ. ಅದನ್ನು ಹೇಳಿ.
4.ದ ರಾ ಬೇಂದ್ರೆಯವರ ಜನಪ್ರಿಯ ಯುಗಾದಿಯ ಹಾಡನ್ನು ಹೇಳಿ.
5.ಗೌರಿ ಚಿತ್ರದಲ್ಲಿ ಕೆ ಎಸ್ ನರಸಿಂಹಸ್ವಾಮಿಯವರು ಬರೆದ ಕವನವನ್ನು ಹೇಳಿ.
6.ಕುವೆಂಪು ರವರು ಬರೆದ ಮನ್ನಾಡೆ ಹಾಡಿದ ಚಲನಚಿತ್ರ ಗೀತೆಯನ್ನು ಹೇಳಿ.
ಚರಣ - ಪಲ್ಲವಿ ಸುತ್ತು:-
ಚಿತ್ರಗೀತೆಯ ಚರಣದ ಸಾಹಿತ್ಯವನ್ನು ನೋಡಿ ಪಲ್ಲವಿಯನ್ನು ಹೇಳಿ
1.ಆಭರಣದ ಅಂಗಡಿಗೆ ಹೋಗೋಣ ಗಿಳಿಮರಿಯೆ
ಮುದ್ದಾದ ಮೂಗಿಗೆ ಮೂಗುತಿ ಹಾಕುವೆ
ಸೀರೆಗಳ ಅಂಗಡಿಗೆ ಹೋಗೋಣ ಬಾ ನವಿಲೆ
ಸಿಂಗಾರ ಮಾಡಲು ನಿನ್ನಂತೆ ನನ್ನನು
ಮುಗಿಲೆ ಓ ಮುಗಿಲೆ ಕೆನ್ನೆ ಕೆಂಪು ಏಕೆ
ನಿನ್ನಾ ನೋಡೋಕೆ ನಲ್ಲ ಬರುವನೇನೆ
ಗಾಳಿಯೇ ಕಂಪನು ಕದ್ದೊಯ್ವೆ ಎಲ್ಲಿಗೆ
2.ಕಾಶಿಲೀ ಸ್ನಾನ ಮಾಡು
ಕಾಶ್ಮೀರ ಸುತ್ತಿ ನೋಡು
ಜೋಗಾದ ಗುಂಡಿ ಒಡೆಯ ನಾನೆಂದು ಕೂಗಿ ಹಾಡು
ಅಜಂತಾ ಎಲ್ಲೋರನ ಬಾಳಲಿ ಒಮ್ಮೆ ನೋಡು
ಬಾದಾಮಿ ಐಹೊಳೆಯ ಚಂದಾನ ತೂಕ ಮಾಡು
ಕಲಿಯೋಕೆ ಕೋಟಿ ಭಾಷೆ
ಹಾಡೋಕೆ ಒಂದೇ ಭಾಷೆ ಕನ್ನಡ... ಕನ್ನಡ..ಕಸ್ತೂರಿ ಕನ್ನಡ
3.ಇರುಳಲ್ಲಿ ಜ್ವರದಂತೆ ಕಾಡಿ ಈಗ
ಹಾಯಾಗಿ ನಿಂತಿರುವೆ ಸರಿಯೇನು
ಬೇಕಂತಲೇ ಮಾಡಿ ಏನೋ ಮೋಡಿ
ಇನ್ನೆಲ್ಲೊ ನೋಡುವ ಪರಿಯೇನು
ಈ ಮಾಯೆಗೆ ಈ ಮರುಳಿಗೆ
ನಿನ್ನಿಂದ ಕರೆ ಬಂದಿದೆ.
4.ನಿನ್ನ ಈ ಮಕ್ಕಳನು ಪ್ರೇಮದಲಿ ನೀ ನೋಡು
ಈ ಮನೆಯು ಎಂದೆಂದು ನಗುವಂತೆ ನೀ ಮಾಡು
ನಂಬಿದರೆ ಭಯವಿಲ್ಲ ನಂಬದಿರೆ ಬಾಳಿಲ್ಲ
ಅಂಬಿಗನೆ ನೀ ನಡೆಸು ಈ ಬಾಳ ನೌಕೆ
ಯಾವ ನೋವೇ ಬರಲಿ ಎದೆಗುಂದದಿರಲಿ
ಸತ್ಯ ಮಾರ್ಗದೆ ನಡೆವ ಶಕ್ತಿ ಕೊಡು ತಂದೆ
1. ನಾನಿರುವುದೇ ನಿಮಗಾಗಿ (ಮಯೂರ)
ಪ್ರತ್ಯುತ್ತರಅಳಿಸಿ2. ಮೂಡಲ ಮನೆಯ ಮುತ್ತಿನ ನೀರಿನ
3. ದೊಡ್ಡವರೆಲ್ಲ ಜಾಣರಲ್ಲ
4. ಮಾನವನಾಗಿ ಹುಟ್ಟಿದ ಮೇಲೆ
5. ಬಣ್ಣ ನನ್ನ ಒಲವಿನ ಬಣ್ಣ (ಛಾಯಾಗ್ರಾಗಣ : ಡಿ.ವಿ. ರಾಜಾರಾಂ)
6. ---
1. ಸ್ನೇಹದ ಕಡಲಲ್ಲಿ (ಛಾಯಾಗ್ರಾಗಣ : ಎನ್.ಜಿ.ರಾವ್)
2. ಕನ್ನಡ ನಾಡಿನ ವೀರರಮಣಿಯ (ಛಾಯಾಗ್ರಾಗಣ :ಚಿಟ್ಟಿ ಬಾಬು)
3. ಒಲವೇ ಜೀವನ ಸಾಕ್ಷಾತ್ಕಾರ ಛಾಯಾಗ್ರಾಗಣ : ಡಿ.ವಿ. ರಾಜಾರಾಂ)
4. ----
5.
6. ಬಾಳಿಗೊಂದು ಎಲ್ಲೆ
1. ತೆರೆದಿದೆ ಮನೆ (ಛಾಯಾಗ್ರಾಗಣ : ಬಿ.ಸಿ.ಗೌರಿಶಂಕರ್)
2. ---
3.
4.
5.
1. ಕೋಗಿಲೆ ಓ ಕೋಗಿಲೆ (ಛಾಯಾಗ್ರಾಗಣ : ಮಾಪಾಕ್ಷಿ)
2. ಹುಟ್ಟಿದರೇ (ಛಾಯಾಗ್ರಾಗಣ : ಬಿ.ಸಿ.ಗೌರಿಶಂಕರ್)
3.
4.
(ಕ್ಷಮಿಸಿ full ಮಾಡಿಲ್ಲ!)
ಬದರಿ ಸಾರ್, ಪರವಾಗಿಲ್ಲರೀ...!! .ಸನ್ನಿವೇಶ ಸುತ್ತಿಗೆ ನೀವು ನೀಡಿರುವ ಎಲ್ಲಾ ಉತ್ತರಗಳೂ ಸರಿಯಾಗಿವೆ. ಕೆಲವು ಛಾಯಾಗ್ರಾಹಕರನ್ನು ನೆನೆಪಿಸಿಕೊಂಡು ನಿಮ್ಮ ವೃತ್ತಿಪ್ರೇಮವನ್ನು ಮೆರೆದಿರುವಿರಿ....!!ಧನ್ಯವಾದಗಳು...ನನಗೆ ಛಾಯಾಗ್ರಾಹಕರ ಬಗ್ಗೆ ಅಷ್ಟೊಂದು ತಿಳಿದಿಲ್ಲ... ಕ್ಷಮೆ ಇರಲಿ ಸಾರ್...
ಅಳಿಸಿಅಂತ್ಯಪದ ಸುತ್ತಿನಲ್ಲೂ ನೀವು ಕೊಟ್ಟಿರುವ ಉತ್ತರಗಳು ಮತ್ತು ಚರಣ ಪಲ್ಲವಿ ಸುತ್ತಿನ ಎರಡನೆ ಉತ್ತರ ಸರಿಯಾಗಿದೆ....!!!
ಮಿಕ್ಕವುಗಳನ್ನು ಮತ್ತೊಮ್ಮೆ try ಮಾಡಿ ನೋಡಿ...ನಿಮಗೆ ಖಂಡಿತಾ ಉತ್ತರ ಹೊಳೆಯುತ್ತದೆ...!!
ಅಂತ್ಯಾಕ್ಷರಿಯನ್ನು try ಮಾಡಿ ,ಪ್ರತಿಕ್ರಿಯೆ ಕೊಟ್ಟಿದ್ದಕ್ಕೆ ಧನ್ಯವಾದಗಳು..
ಉತ್ತರಕ್ಕೆ ಇನ್ನೆರಡು ದಿನ ಕಾಯಬಹುದಲ್ವಾ...?
ಬದರಿನಾಥರು ಮೊದಲೇ ಸಾಕಷ್ಟು ಉತ್ತರ ನೀಡಿದ್ದಾರೆ. ಅವುಗಳಲ್ಲಿ ಕೆಲವು ಮಾತ್ರ ನನಗೆ ಗೊತ್ತಾಗಿತ್ತು. ಇನ್ನು ಅವರು ಬಿಟ್ಟ ಕೆಲವುಗಳಿಗೆ ಉತ್ತರ ನೀಡುತ್ತಿದ್ದೇನೆ:
ಪ್ರತ್ಯುತ್ತರಅಳಿಸಿಅಂತ್ಯಪದ ಸುತ್ತು:
(೬)ಎಂದೆಂದೂ ನಿನ್ನನು ಬಿಟ್ಟು ನಾನಿರಲಾರೆ....
ಚಿತ್ರಗೀತೆಯಾಗಿರುವ ಕವಿಗಳ ಕವನ:
(೨)ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ.....
(೪)ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ...
(೫)ಇವಳು ಯಾರು ಬಲ್ಲೆ ಏನು?
ಇಷ್ಟಕ್ಕೆ ನನ್ನ ಬಂಡವಾಳ ಮುಗಿಯಿತು.
ಒಂದು ಸ್ವಾರಸ್ಯಕರವಾದ postingಗಾಗಿ ಧನ್ಯವಾದಗಳು.
ಸರಿಯುತ್ತರಗಳನ್ನು ಎದುರು ನೊಡುತ್ತಿರುವೆ.
ಸುನಾಥ್ ಸಾರ್..... ನೀವು ನೀಡಿರುವ ಎಲ್ಲಾ ಉತ್ತರಗಳೂ ಸರಿಯಾಗಿವೆ..!!ಧನ್ಯವಾದಗಳು...
ಅಳಿಸಿನೀವು ಕವಿ – ಕವನ ಸುತ್ತಿನ ಪ್ರಶ್ನೆಗಳಿಗೆ ಸರಿ ಉತ್ತರ ಕೊಡುವಿರಿ ಎಂದು ನನಗೆ ತಿಳಿದಿತ್ತು...!!!
ಅಂತ್ಯಾಕ್ಷರಿಯನ್ನು try ಮಾಡಿ ,ಪ್ರತಿಕ್ರಿಯೆ ಕೊಟ್ಟಿದ್ದಕ್ಕೆ ಧನ್ಯವಾದಗಳು..
ಉತ್ತರಕ್ಕೆ ಇನ್ನೆರಡು ದಿನ ಕಾಯಬಹುದಲ್ವಾ...?
ಅಂತ್ಯಪದ ಸುತ್ತಿನ 5ನೇ ಪ್ರಶ್ನೆಗೆ(6 ನೆಯದಕ್ಕಲ್ಲ)ನಿಮ್ಮ ಉತ್ತರ ಸರಿ ಇದೆ ಸುನಾಥ್ ಸಾರ್..
ಅಳಿಸಿ