ಚೈತ್ರ ಸಂಭ್ರಮ


ಚೈತ್ರನೊಂದಿಗೆ ವಸಂತ ಬಂದನು
ಶಿಶಿರನಾರ್ಭಟಕಂತ್ಯ ತಂದನು.
ಪ್ರಕೃತಿ ತಳೆದಳು ನವಚೇತನ
ಹೊಸತು ತಳಿರಿನ ತೋರಣ.

ಚಳಿಗೆ ಮೌನದೆ ಕುಳಿತ ಕೋಗಿಲೆ
ಸ್ಫೂರ್ತಿಗೊಂಡಿತು ಚೈತ್ರನಿಂದಲೆ.
ತುಂಬಿತೆಲ್ಲೆಡೆ ಮಧುರ ಗಾಯನ
ತಂದಿತೆಲ್ಲೆಡೆ ಪ್ರೇಮ ಸಿಂಚನ.

ತರುಲತೆಗೆ ಹಿಗ್ಗಿನ ಪಲ್ಲವ
ಎಲ್ಲೆಲ್ಲು ಚಿಲಿಪಿಲಿ ಕಲರವ.
ಅಳಿಸಿ ಹೋಯಿತು ಬರಡಾದ ನೋವು
ಅಂಕುರಾಯಿತು ಹೊಸತು ಮಾವು.

ಪ್ರಕೃತಿಯಂತೆಯೆ ನಮ್ಮ ಬದುಕು
ಚೈತ್ರದಾಗಮ ಬಯಸಿದೆ.
ಹಳೆಯ ನೋವಿನ ಕೊಳೆಯ ನೀಗಿಸಿ
ಸಂತಸದ ಚಿಗುರಿಗೆ ಕಾದಿದೆ.

6 ಕಾಮೆಂಟ್‌ಗಳು:

  1. ಸರಳ ಸು0ದರ ಕವನ ಮ0ಜುಳಾ ರವರೆ, ನನ್ನ ಬ್ಲಾಗ್‌ ಗೆ ಸ್ವಾಗತ.

    ಪ್ರತ್ಯುತ್ತರಅಳಿಸಿ
  2. ಕವಿತೆ ಪುಳಕಗೊಳಿಸಲು ಆರಂಭಿಸುವುದು ಅದರ ಹೂರಣದಲ್ಲಿ ಮತ್ತು ಕಚ್ಚನಾ ಕೌಶಲ್ಯಯದಲ್ಲಿ. ಈ ಕವಿತೆ ನನಗೆ ಅಮಿತ ಖುಷ್ ಕೊಟ್ಟಿತು.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ನಿಮಗೆ ನನ್ನ ಕವನ ಖುಷಿ ಕೊಟ್ಟಿದೆ ಎಂದರೆ ನನಗೂ ಸಂತೋಷ. ಧನ್ಯವಾದಗಳು ಬದರಿಯವರೆ.

      ಅಳಿಸಿ
  3. ಚೈತ್ರದ ಸ್ಫೂರ್ತಿ ನಿಮ್ಮ ಕವನದಲ್ಲಿಯೂ ಹೊರಹೊಮ್ಮಿದೆ. ಓದುಗರಿಗೂ ಸಹ ಸ್ಫೂರ್ತಿಯನ್ನು ನೀಡುವ ಕವನವಿದು!

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಸಾಹಿತ್ಯದ ಬಗ್ಗೆ ಚೆನ್ನಾಗಿ ತಿಳಿದಂತಹ ನಿಮ್ಮಂಥವರು ನಮ್ಮ ಬರಹಗಳನ್ನು ಓದಿ, ಪ್ರತಿಕ್ರಿಯೆ ನೀಡುವಿರಿ ಎನ್ನುವುದೇ ನನ್ನ ಬರವಣಿಗೆಗೆ ಸ್ಫೂರ್ತಿ...!! ಧನ್ಯವಾದಗಳು ಸಾರ್.

      ಅಳಿಸಿ

ನಿಮ್ಮ ಅಮೂಲ್ಯವಾದ ಸಲಹೆ ಮತ್ತು ಅಭಿಪ್ರಾಯಗಳಿಗೆ ಸದಾ ಸ್ವಾಗತವಿದೆ.