Bye…. Bye…. Telegram…!!!!!!

ನಾನು ಶಾಲೆಗೆ ಹೋಗುತ್ತಿದ್ದ ದಿನಗಳಲ್ಲಿ ,ನಮ್ಮ ಶಾಲೆಯ ಎದುರುಗಡೆಯೇ ಪೋಸ್ಟಾಫೀಸ್ ಇತ್ತು. ಶಾಲೆಗೆ ಹೋಗುವಾಗ ಮತ್ತು ಬರುವಾಗಲೆಲ್ಲಾ  ಪೋಸ್ಟಾಫೀಸಿನಿಂದ ಕಟ್ಟ.. ಕಡ..ಕಡ... ಎಂಬ ಶಬ್ದ ನಿರಂತರವಾಗಿ ಕಿವಿಗೆ ಬೀಳುತ್ತಿತ್ತು. ಇದೇನು ಎಂಬ ಕುತೂಹಲ ನನ್ನದಾಗಿತ್ತು....??!!!.ಸ್ವಲ್ಪ ಬೆಳೆದ ನಂತರ Post card ತರಲು ಪೋಸ್ಟಾಫೀಸಿಗೆ ಹೋದಾಗ ಈ ಶಬ್ದ ಏನು ಅಂತ ಕೇಳಿಯೇ ಬಿಟ್ಟೆ....!! ಆಗ ನನಗೆ ತಿಳಿದು ಬಂತು,  ಇದು ಟೆಲಿಗ್ರಾಂ ಕಳುಹಿಸುವ ಯಂತ್ರದ ಶಬ್ದವೆಂದು...!! ಕೇವಲ ಕಟ್ಟ.. ಕಡ..ಕಡ... ಸದ್ದಿನೊಂದಿಗೆ ಸಂದೇಶಗಳನ್ನು ತಿಳಿಯಲು ಸಾಧ್ಯವೇ ಎಂಬ ಅಚ್ಚರಿ ನನಗಾಯಿತು....!!
ಇಂದು ರಾತ್ರಿ ಹನ್ನೆರಡು ಗಂಟೆಯಿಂದ ದೇಶಾದ್ಯಂತ ಈ ಸದ್ದು ಶಾಶ್ವತವಾಗಿ ನಿಂತುಹೋಗುತ್ತಿದೆ. ಅತಿ ಕಡಿಮೆ ದರದಲ್ಲಿ ದೇಶದ ಮೂಲೆಮೂಲೆಗಳಿಗೂ ಸಿಹಿ-ಕಹಿ ಸಂದೇಶಗಳನ್ನು ಹೊತ್ತು ತರುತ್ತಿದ್ದ ತಂತಿ ಸಂದೇಶ (Telegram), ನಾಳೆಯಿಂದ ಬರೀ ನೆನಪು ಮಾತ್ರ. ಜನಸಾಮಾನ್ಯರೊಂದಿಗೆ ಭಾವನಾತ್ಮಕವಾಗಿ ಬೆರೆತಿದ್ದ ಈ ಸೇವೆಗೊಂದು ನಮನ ಸಲ್ಲಿಸಲೋಸುಗವೇ ಈ ನನ್ನ ಲೇಖನ.

1982 ರಲ್ಲಿ ನನ್ನ ಮದುವೆಯ ಸಂದರ್ಭದಲ್ಲಿ, ಕಾರಣಾಂತರದಿಂದ ವಿವಾಹಕ್ಕೆ ಬರಲಾಗದವರು ತಮ್ಮ ಶುಭಾಶಯಗಳನ್ನು ಹಂಚಿಕೊಂಡಿದ್ದು ಈ Telegram ಮೂಲಕ...!!!
ಇನ್ನು 1996 ರಲ್ಲಿ ನಾನು ಮೈಸೂರಿಗೆ ಟ್ರೈನಿಂಗಿಗೆ ಹೋಗಿದ್ದೆ. ಆಗ ನನ್ನ ಹುಟ್ಟುಹಬ್ಬ ಬಂದಿತ್ತು. ಮದುವೆಯಾದಾಗಿನಿಂದ ನನ್ನವರೊಂದಿಗೆ ಆಚರಿಸಿಕೊಳ್ಳುತ್ತಿದ್ದ ನನ್ನ ಹುಟ್ಟುಹಬ್ಬ ಈ ಸಾರಿ ಅನಿವಾರ್ಯವಾಗಿ ತಪ್ಪಿಹೋಗಿತ್ತು. ಆಗ ನನ್ನವರ ಮತ್ತು ನನ್ನ ಮಗಳ ಶುಭಾಶಯಗಳನ್ನು ಹೊತ್ತು ತಂದಿದ್ದು ಸಹ ಈ ತಂತಿ ಸಂದೇಶವೇ...!!! ಈ ಎಲ್ಲಾ Telegramಗಳು , ನನ್ನ ಜೀವನದ ಸಿಹಿ ಸಂಕೇತಗಳಾಗಿ ಇಂದಿಗೂ ನನ್ನ ಬಳಿ ಜೋಪಾನವಾಗಿವೆ.
ನಾನು ಈಗ ಕೆಲಸ ಮಾಡುತ್ತಿರುವ  B S N L  ಸಂಸ್ಥೆ ,ಮೊದಲಿಗೆ P&T ಎಂದು ಹೆಸರಾಗಿತ್ತು. ಕಾಲಕ್ರಮೇಣ ವಿಶ್ವದಲ್ಲುಂಟಾದ ಸಂಪರ್ಕ ಕ್ರಾಂತಿಯಿಂದಾಗಿ  Telecommunication ಶಾಖೆ Postal ನಿಂದ ಬೇರ್ಪಟ್ಟಿತು. ಜಾಗತೀಕರಣದ ಕಾರಣದಿಂದಾಗಿ Telecommunication Department , Bharath Sanchar Nigam Limited (B S N L) ಆಗಿ ಬದಲಾಯಿತು. ವರ್ಷದಿಂದ ವರ್ಷಕ್ಕೆ ನೂತನ ಆವಿಷ್ಕಾರಗಳಿಗೆ ತನ್ನನ್ನು ತೆರೆದುಕೊಂಡಿತು.ನಮ್ಮ ಕೆಲಸದ ವೈಖರಿಯೂ ಬದಲಾಯಿತು. STD,ISD ಗಳ ಸೇವೆಗಳಿಂದಾಗಿ Trunk call ಸೇವೆ ತನ್ನ ಅಸ್ತಿತ್ವವನ್ನು ಕಳೆದುಕೊಂಡಿತು.  ಜಗತ್ತಿನ ಇತರ ರಾಷ್ಟ್ರಗಳೊಂದಿಗೆ ಪೈಪೋಟಿಯಾಗಿ ನಿಲ್ಲಬೇಕಾದ ಪರಿಸ್ಥಿತಿ...! ಹಾಗಾಗಿ ನಿಧಾನಗತಿಯ ಯಂತ್ರಗಳಿಗೆ ವಿದಾಯ ಹೇಳಲೇಬೇಕಾದ ಅನಿವಾರ್ಯತೆ ನಮ್ಮದಾಯಿತು.
Mobile, Computer, Internet ಸೇವೆಗಳು ವ್ಯಾಪಕವಾಗಿ ಬಳಕೆಗೆ ಬಂದಂತೆ ಸಂಪರ್ಕ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯೇ ಉಂಟಾಯಿತು. ಈಗ ಮನೆಯಲ್ಲಿಯೇ ಕುಳಿತು, ಚಿಟಿಕೆ ಹೊಡೆಯುವುದರಲ್ಲಿ ನಮ್ಮ ಸಂದೇಶಗಳನ್ನು ವಿಶ್ವದಾದ್ಯಂತ ಹಂಚಿಕೊಳ್ಳಬಹುದು. ಇಂತಹ email ಯುಗದಲ್ಲಿ Telegram ಇಷ್ಟು ದಿನ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದ್ದೇ ಹೆಚ್ಚು. ದೇಶದಲ್ಲಿ ದಿನವೊಂದಕ್ಕೆ ಲಕ್ಷಾಂತರದಲ್ಲಿದ್ದ ತಂತಿ ಸೇವೆ ಕೇವಲ ಸಾವಿರಕ್ಕಿಳಿದಾಗ ಸಂಸ್ಥೆಗೆ ನಷ್ಟವೂ ಹೆಚ್ಚು. ಈ ನಿಮಿತ್ತ B S N L  ಸಂಸ್ಥೆ  ಇಂದು ರಾತ್ರಿ ಹನ್ನೆರಡು ಘಂಟೆಯಿಂದ ಟೆಲಿಗ್ರಾಂ ಸೇವೆಯನ್ನು ಸ್ಥಗಿತಗೊಳಿಸುತ್ತಿದೆ. ಹೊಸನೀರು ಬಂದಾಗ ಹಳೆನೀರು ಕೊಚ್ಚಿ ಹೋಗಲೇಬೇಕು. ನಾವೆಲ್ಲರೂ email ಯುಗಕ್ಕೆ ಸಂತಸದಿಂದ ಕಾಲಿರಿಸಬೇಕು. ಸುಮಾರು ನೂರ ಅರವತ್ತು ವರ್ಷಗಳಿಂದಲೂ ನಮ್ಮ ಬದುಕಿನ ಸಿಹಿ-ಕಹಿ ಕ್ಷಣವನ್ನು ಹೊತ್ತು ತರುತ್ತಿದ್ದ ತಂತಿಸಂದೇಶ (Telegram)ಕ್ಕೆ ಸಂತಸದಿಂದಲೇ ವಿದಾಯ ಹೇಳೋಣ.

Bye…. Bye…. Telegram…!!!!!!

ಕೆಳಗಿನ ಲಿಂಕಿಗೂ ದಯವಿಟ್ಟು ಭೇಟಿ ಕೊಡಿ

https://www.facebook.com/photo.php?fbid=600128216698298&set=gm.481868878564334&type=1&theater

4 ಕಾಮೆಂಟ್‌ಗಳು:

  1. ಒಂದು ಕಾಲದಲ್ಲಿ ಭಯ ಹುಟ್ಟಿಸುತ್ತಿದ್ದ ತಂತಿ ಸಂದೇಶ ಅಸ್ತಂಗತವಾಗುತ್ತಿರುವುದು ಬಹಳ ನೋವು ತಂದಿದೆ.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಧನ್ಯವಾದಗಳು ಬದರಿನಾಥ್.
      ಹಣ್ಣೆಲೆಗಳು ಉದುರಿ ಚಿಗುರೆಲೆಗಳಿಗೆ ದಾರಿ ಮಾಡಿಕೊಡುವುದೇ ಪ್ರಕೃತಿ ನಿಯಮವಲ್ಲವೇ....??!!! ಬದಲಾವಣೆಗೆ ಹೊಂದಿಕೊಳ್ಳುವುದು ಜಾಣತನ....!!!ಸಕಾರಾತ್ಮಕ ಬದಲಾವಣೆಗಳನ್ನು ಸಂತೋಷದಿಂದ ಸ್ವಾಗತಿಸೋಣ...!
      ನನ್ನ ಬ್ಲಾಗಿನ ಈ ಬರಹಕ್ಕೆ The best blog post of the day ಗೌರವ ನೀಡಿರುವುದಕ್ಕೆ ಧನ್ಯವಾದಗಳು..!!

      ಅಳಿಸಿ
  2. ತಂತಿ ಸಂದೇಶ ಇನ್ನು ಮುಂದೆ ಒಂದು ನೆನಪು ಮಾತ್ರ. Nostalgiaವನ್ನು ಮಧುರವಾಗಿ ಕಟ್ಟಿ ಕೊಟ್ಟಿದ್ದೀರಿ.

    ಪ್ರತ್ಯುತ್ತರಅಳಿಸಿ
  3. ಹಳೆಯ ನೆನಪುಗಳು ಮಾಸುವುದಿಲ್ಲ....!!ಅವೆಲ್ಲವೂ ಮಧುರವೇ..!!
    ಧನ್ಯವಾದಗಳು ಸಾರ್...

    ಪ್ರತ್ಯುತ್ತರಅಳಿಸಿ

ನಿಮ್ಮ ಅಮೂಲ್ಯವಾದ ಸಲಹೆ ಮತ್ತು ಅಭಿಪ್ರಾಯಗಳಿಗೆ ಸದಾ ಸ್ವಾಗತವಿದೆ.