ಪದ ವಿನ್ಯಾಸವನ್ನು ವೀಕ್ಷಿಸಲು ಕೆಳಗಿನ ಲಿಂಕ್ ಒತ್ತಿ. ನಂತರ ಓಪನ್ ಬಟನ್ ಕ್ಲಿಕ್ ಮಾಡಿ.
ಪದ ವಿನ್ಯಾಸ -೨
ಹೀಗೂ ವಾಕ್ಯ ರಚನೆ ಸಾಧ್ಯವೇ....?!
"ನೀ ನನ್ನನೇನನ್ನು ನಾ ನಿನ್ನನೇನನ್ನೆ"
ಈ ವಾಕ್ಯವನ್ನು ಮತ್ತೊಮ್ಮೆ ಮಗದೊಮ್ಮೆ ಓದಿನೋಡಿದಿರಾ - ಇದನ್ನು ಓದಿದಾಗ ವಾಹ್...ಎನ್ನಿಸುತ್ತದೆ. ಹೀಗೂ ವಾಕ್ಯ ರಚನೆ ಸಾಧ್ಯವೇ ಎಂಬ ಕುತೂಹಲ ಮೂಡುತ್ತದೆ. ಎಷ್ಟು ಚೆನ್ನಾಗಿದೆ ನೋಡಿ. ನನ್ನ ಸಹೋದ್ಯೋಗಿಯೊಬ್ಬರು ತಾವು ಎಲ್ಲೋ ಓದಿದ ಈ ಸಾಲುಗಳನ್ನ ನನಗೆ ಹೇಳಿದರು. ನಾನೂ ಇದೇ ರೀತಿಯ ಒಂದಾದರೂ ಸಾಲನ್ನು ರಚಿಸಿ ನನ್ನ ಬೆನ್ನನ್ನು ನಾನೇ ತಟ್ಟಿಕೊಳ್ಳೋಣ ಎಂದು ಪ್ರಯತ್ನಿಸಿದೆ. ಸಾಧ್ಯವಾಗಲಿಲ್ಲ.
ಇದೇ ರೀತಿಯ ವಾಕ್ಯಗಳನ್ನು ರಚಿಸಲು ನಿಮ್ಮಿಂದ ಆಗುವುದೇ.... ಪ್ರಯತ್ನಿಸಬಾರದೇಕೆ?
ಒಂದೇ ಅಕ್ಷರದ ಗುಣಿತಾಕ್ಷರಗಳನ್ನು ಮತ್ತು ಅದರ ಒತ್ತಕ್ಷರವನ್ನು ಮಾತ್ರ ಬಳಸಬೇಕು. ಅಲ್ಲದೆ ವಾಕ್ಯ ಅರ್ಥವತ್ತಾಗಿರಬೇಕು.
ಸಂಪದದಲ್ಲಿ ಇದೇ ರೀತಿಯ ವಾಕ್ಯ ರಚನೆಗೆ ಸಂಪದಿಗರು ಪ್ರಯತ್ನಿಸಿದ್ದು ನೋಡಲು ಇಲ್ಲಿ ಕ್ಲಿಕ್ಕಿಸಿ .
ಪದವಿನ್ಯಾಸ -೧- ಉತ್ತರಗಳು
ಎಡದಿಂದ ಬಲಕ್ಕೆ:-
೧.ಕನ್ನಡರಾಜ್ಯೋತ್ಸವ
೫.ನವೋದಯ
೬.ಪದಕ
೮.ಶಾಪಸತಿ
೧೦.ಸಹ
೧೨.ರಾಗರಂಗು
೧೫.ನವರಸ
೧೭.ಹಿಮ
೧೯.ಕರವೀರಾ
೨೧.ರಭಸ
೨೨.ಕಹೋದಿಬೀ
೨೪.ಚಿಕವೀರರಾಜೇಂದ್ರ
ಮೇಲಿನಿಂದ ಕೆಳಕ್ಕೆ:-
೧.ಕಲ್ಲಿನಬರಹ
೨.ರಾಷ್ಟ್ರಪತಿ
೩.ವನ
೪.ಪಾಯಸ
೭.ಕಸ
೯.ಸಸಾರ
೧೧.ಹರಾ
೧೩.ಗಮಾರ
೧೪.ಗುರುರಾಘವೇಂದ್ರ
೧೬.ಸಹಿ
೧೮.ಮರ
೧೯.ಕಸವರ
೨೦.ನಕಲಿ
೨೩.ಬೀಚಿ
೧.ಕನ್ನಡರಾಜ್ಯೋತ್ಸವ
೫.ನವೋದಯ
೬.ಪದಕ
೮.ಶಾಪಸತಿ
೧೦.ಸಹ
೧೨.ರಾಗರಂಗು
೧೫.ನವರಸ
೧೭.ಹಿಮ
೧೯.ಕರವೀರಾ
೨೧.ರಭಸ
೨೨.ಕಹೋದಿಬೀ
೨೪.ಚಿಕವೀರರಾಜೇಂದ್ರ
ಮೇಲಿನಿಂದ ಕೆಳಕ್ಕೆ:-
೧.ಕಲ್ಲಿನಬರಹ
೨.ರಾಷ್ಟ್ರಪತಿ
೩.ವನ
೪.ಪಾಯಸ
೭.ಕಸ
೯.ಸಸಾರ
೧೧.ಹರಾ
೧೩.ಗಮಾರ
೧೪.ಗುರುರಾಘವೇಂದ್ರ
೧೬.ಸಹಿ
೧೮.ಮರ
೧೯.ಕಸವರ
೨೦.ನಕಲಿ
೨೩.ಬೀಚಿ
ನೆನಪುಗಳ ಮಾತು ಮಧುರ...೪
ನೆನಪುಗಳ ಮಾತು ಮಧುರ...೪
ಡಾ|| ಗಿರೀಶ್. ಅವರು ಅಲ್ಲಿಗೆ ಹೋಗಿ ಒಂದೆರಡು ವರ್ಷವಾಗಿತ್ತು. ಗಿರೀಶ್ ರವರ ಇಂಡಿಯಾದ ಸ್ನೇಹಿತರೇ ಅಲ್ಲದೇ, ಇಬ್ಬರು ಆಸ್ಟ್ರೇಲಿಯಾದ ಸ್ನೇಹಿತರು ಕೂಡ ಮದುವೆಗೆಂದು ಆಗಮಿಸಿದ್ದು ವಿಶೇಷವೆನ್ನಿಸಿತ್ತು.ಅವರಿಬ್ಬರೂ ಮದುವೆಯ ನೆಪದಲ್ಲಿ ಹದಿನೈದು ದಿನ ಮೊದಲೇ ಬಂದು, ಭಾರತದ ಕೆಲವು ಪ್ರೇಕ್ಷಣೀಯ ಸ್ಥಳಗಳನ್ನುಸಂದರ್ಶಿಸಿದರು.
ಮದುವೆಗೆ ಎರಡು ದಿನ ಮುಂಚೆ ಶಿವಮೊಗ್ಗಕ್ಕೆ ಬಂದರು.ಇವರಿಬ್ಬರು ಮದುವೆಗಾಗಿ ನಡೆಯುತ್ತಿದ್ದ ಸಿದ್ಧತೆಗಳನ್ನು ಆಸಕ್ತಿಯಿಂದ ವೀಕ್ಷಿಸುವುದೇ ಅಲ್ಲದೆ ಎಲ್ಲಾ ಕಾರ್ಯಕ್ರಮದಲ್ಲೂ ಭಾಗವಹಿಸುತ್ತಿದ್ದುದು ನಮಗೆ ಅಚ್ಚರಿ ಉಂಟುಮಾಡಿತು.ಚಪ್ಪರ ಹಾಕುವಾಗ ತಾವೂ ತೆಂಗಿನಗರಿ, ಮಾವಿನತೋರಣ ಹಿಡಿದು ಉತ್ಸಾಹದಿಂದ ಭಾಗಿಯಾದರು . ವಿವಾಹದ ಶಾಸ್ತ್ರಗಳನ್ನೆಲ್ಲ ಕುತೂಹಲದಿಂದ ವೀಕ್ಷಿಸಿದರು. ಛತ್ರದಲ್ಲಿ ಒಳ ಹೊರಗೆ ಓಡಾಡಿ, ಬಂದಿದ್ದ ನಮ್ಮ ಬಂಧು-ಮಿತ್ರರನ್ನೆಲ್ಲ ತಮ್ಮದೇ ಶೈಲಿಯಲ್ಲಿ ಸ್ವಾಗತಿಸಿ, ನಗುನಗುತ್ತಾ ಮಾತನಾಡಿಸಿ ಖುಷಿಪಡಿಸಿದರು.
ಸಂಜೆಯ ಆರತಕ್ಷತೆಗೆ ಈ ಆಸ್ಟ್ರೇಲಿಯನ್ಸ್, ಕೋಟು-ಟೈ ಧರಿಸಿದರೆ ಮಹೂರ್ತದ ವೇಳೆಗೆ ನಮ್ಮ ಪರಂಪರೆಯಂತೆ ಶೇರ್ವಾನಿ ಹಾಕಿಕೊಂಡು ನಮ್ಮ ಮೆಚ್ಚುಗೆಗೆ ಪಾತ್ರರಾದರು. ನಮ್ಮ ಊಟ-ತಿಂಡಿಯ ರುಚಿಯನ್ನು ಸವಿದರು.ಖಾರವಾದ ಉಪ್ಪಿನಕಾಯಿಯನ್ನಂತೂ ಚಪ್ಪರಿಸಿ ತಿಂದರು.
ಒಟ್ಟಿನಲ್ಲಿ ನಾವೆಲ್ಲರೂ ಇವರಿಬ್ಬರನ್ನು ಸದಾ ಕಾಲವೂ ನೆನಪಿಟ್ಟುಕೊಳ್ಳುವಂತೆ ನಡೆದುಕೊಂಡರು. ಇವರಿಬ್ಬರಿಗೂ ನಮ್ಮ ಧನ್ಯವಾದಗಳು.
ಬಾಲ್ಯದ ನೆನಪುಗಳು-೨
ನಾನು ಚಿಕ್ಕವಳಾಗಿದ್ದಾಗ ರೇಡಿಯೊ ಒಂದೇ ನಮಗೆ ಮನರಂಜನೆ ಒದಗಿಸುವ ಸಾಧನವಾಗಿತ್ತು... ಮಧ್ಯಮ ವರ್ಗದವರಾದ ನಮ್ಮ ಮನೆಯಲ್ಲಿ ಈಗಿನಂತೆ ಟೇಪ್ ರೆಕಾರ್ಡರ್ ಇರಲಿಲ್ಲ, ಟಿವಿ ಆಗಿನ್ನು ಬಂದಿರಲಿಲ್ಲ......... ಶಾಲೆಗೆ ಹೊರಡುವ ಮುಂಚೆ, ಶಾಲೆಯಿಂದ ಬಂದ ನಂತರ ರೇಡಿಯೊಗೆ ಕಿವಿಹಚ್ಚಿ ಕೂರುವುದು ನನ್ನ ನೆಚ್ಚಿನ ಹವ್ಯಾಸವಾಗಿತ್ತು.....
ಬೆಂಗಳೂರು ಆಕಾಶವಾಣಿಯಲ್ಲಿ ಮೂಡಿಬರುತ್ತಿದ್ದ ಎಂ.ಎಸ್.ಸುಬ್ಬಲಕ್ಷಿಯವರ ಇಂಪಾದ ಸುಪ್ರಭಾತದೊಂದಿಗೆ ನನಗೆ ಬೆಳಗಾಗುತ್ತಿತ್ತು. "ವಂದೇ ಮಾತರಂ"ನೊಂದಿಗೇ ಬೆಳಗಾಗುತ್ತಿದ್ದ ದಿನಗಳೂ ಇದ್ದವು........ ! ಆದರೆ ಅಂತಹ ದಿನಗಳು ತುಂಬಾ ಕಡಿಮೆ ಅನ್ನುವುದನ್ನು ತಿಳಿಸಲು ಸಂಕೋಚವೆನ್ನಿಸುತ್ತೆ.
ಚಿಂತನ, ಬಾಲಜಗತ್,ಚಿತ್ರಗೀತೆಗಳ ಕಾರ್ಯಕ್ರಮಗಳು ನನ್ನ ಅಚ್ಚುಮೆಚ್ಚಿನ ಕಾರ್ಯಕ್ರಮಗಳಾಗಿದ್ದವು. ...........
ಚಿಂತನದಲ್ಲಿ ಬಿತ್ತರವಾಗುತ್ತಿದ್ದ ಪ್ರಸಿದ್ಧ ಕವಿಗಳ ನುಡಿಮುತ್ತುಗಳ ಬರಹ ಈಗಲೂ ನನ್ನ ಬಳಿ ಇದೆ. .....ರೇಡಿಯೋ ಅಂದ ಮೇಲೆ ಎ.ಎಸ್,ಮೂರ್ತಿಯವರನ್ನ ನೆನಪಿಸಿಕೊಳ್ಳದಿದ್ದರೆ ನನ್ನ ಈ ಬರಹ ಅಪೂರ್ಣ ಅಂತ ನನಗನ್ನಿಸುತ್ತೆ.............. ಎ.ಎಸ್,ಮೂರ್ತಿಯವರು ಆಕಾಶವಾಣಿಯಲ್ಲಿ ನೆಡೆಸಿಕೊಡುತ್ತಿದ್ದ ಎಲ್ಲಾ ಕಾರ್ಯಕ್ರಮಗಳಿಗೆ ,ಅದರಲ್ಲೂ ’ರೇಡಿಯೊ ಈರಣ್ಣ’ನ ಮಾತಿನ ಮೋಡಿಗೆ ಮನಸೋತವಳಲ್ಲಿ ನಾನೂ ಒಬ್ಬಳಾಗಿದ್ದೆ............’ನಾವು-ನಮ್ಮವರು’ - ಕೇಳುಗರ ಪತ್ರಗಳಿಗೆ ಉತ್ತರ
- ಈ ವಿಭಾಗಕ್ಕೆ ಪತ್ರ ಬರೆಯುವುದು ನನ್ನ ಹವ್ಯಾಸವಾಗಿತ್ತು..... ಅದನ್ನು ಎ.ಎಸ್,ಮೂರ್ತಿಯವರು ಓದಿದರೆ ಸಾಕು ಸಂತಸದಿಂದ ಕುಣಿದಾಡುತ್ತಿದ್ದ ದಿನಗಳವು................
ನನ್ನ ಬಾಲ್ಯದ ದಿನಗಳಲ್ಲಿ ನನ್ನ ಜೊತೆಗಿದ್ದ ಆಕಾಶವಾಣಿಗೆ ನಾನು ಚಿರಋಣಿಯಾಗಿದ್ದೇನೆ.......
" ಓ ನೆನಪೆ, ನೀನೆಷ್ಟು ಮಧುರ
ಓ ಬಾಲ್ಯವೆ, ನೀನೆಷ್ಟು ಸುಂದರ"
ಅಂದಿನ ದಿನಗಳಲ್ಲಿ ಚಿಕ್ಕಚಿಕ್ಕ ವಿಷಯಗಳೂ ತರುತ್ತಿದ್ದ ತೃಪ್ತಿ- ಸಂತಸಗಳು ಇಂದಿನ ದಿನಗಳಲ್ಲಿ ನಮ್ಮಲ್ಲಾಗಲಿ ಅಥವ ನಮ್ಮ ಮಕ್ಕಳಲ್ಲಾಗಲಿ ಏಕಿಲ್ಲ ...............? ಇದು ನನ್ನನ್ನು ಇತ್ತೀಚಿನ ದಿನಗಳಲ್ಲಿ ಕಾಡುವ ಪ್ರಶ್ನೆ...... ನಿಮಗೂ ಹೀಗನ್ನಿಸುತ್ತಿದೆಯೆ ........?

ನೆನಪುಗಳ ಮಾತು ಮಧುರ...೩
ಒಂದು ವರ್ಷದ ಹಿಂದೆ ನಡೆದ ಮಗಳ ಮದುವೆಯ ಆಲ್ಬಂನ್ನೊಮ್ಮೆ ತಿರುವಿ ಹಾಕುತ್ತಿದ್ದಾಗ ಮೂಡಿದ ಭಾವ ಈ ಬರಹಕ್ಕೆ ಹಿನ್ನೆಲೆ. ನನ್ನ ಅನುಭವಗಳನ್ನು ದಾಖಲಿಸುವುದರೊಂದಿಗೆ ವಿವಾಹ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಕೈ ಜೋಡಿಸಿದವರೆಲ್ಲರನ್ನೂ ಮತ್ತೊಮ್ಮೆ ಕೃತಙ್ಞತೆಯಿಂದ ಸ್ಮರಿಸುವುದು ಈ ಲೇಖನದ ಉದ್ದೇಶ.
ನೆನಪುಗಳ ಮಾತು ಮಧುರ...೩
"ಏರ್ ಇಂಡಿಯಾ" ಸಿಂಬಲ್ ನೋಡಿದ್ರೆ ಏನ್ ರಾಯಲ್ಲಾಗಿದೆ ಅನ್ಸುತ್ತೆ ಅಲ್ವಾ? ಇದೇ ರೀತಿಯ ಸ್ವಾಗತಕಾರನೊಬ್ಬ ಮದುವೆ ಛತ್ರದ ಬಾಗಿಲಲ್ಲಿ ಕಾಣುವಂತಾದರೆ ಹೇಗನ್ನಿಸಬಹುದು.....? ಹುಬ್ಬಳ್ಳಿಯವರಾದ ಶ್ರೀ ಚನ್ನಬಸಪ್ಪನವರು ಕುಳ್ಳನಾದರೂ ತನ್ನ ವೇಷಭೂಷಣದಿಂದ, ಹಾವಭಾವಗಳಿಂದ ಮದುವೆ ಮನೆಯಲ್ಲಿ ಎಲ್ಲರ ಗಮನವನ್ನ ತನ್ನೆಡೆಗೆ ಸೆಳೆದುಕೊಳ್ಳುವಲ್ಲಿ ಸಫಲರಾದರು. ಇವರು ವಧೂವರರನ್ನು ವೇದಿಕೆಗೆ ಕರೆದು ತಂದದ್ದು ವಿಶೇಷ.
ಚೈತನ್ಯದ ನುಡಿಗಳು..... ಅಲ್ಲಿ ಇಲ್ಲಿ ಹೆಕ್ಕಿದ್ದು - ೨
೧. ಕಾದ ಹೆಂಚಿನ ಮೇಲೆ ಹನಿ ನೀರು ಬಿದ್ದರೆ ಆರಿ ಹೋಗುತ್ತದೆ.
ಎಲೆಯ ಮೇಲೆ ಬಿದ್ದರೆ ಹೊಳೆಯುತ್ತದೆ.
ಚಿಪ್ಪಿನೊಳಗೆ ಬಿದ್ದರೆ ಮುತ್ತಾಗುತ್ತದೆ.
ನಾವು ಯಾರ ಸಂಗ ಮಾಡುತ್ತೇವೆಯೊ ಅದರಂತೆ ನಾವಾಗುತ್ತೇವೆ.
೨. ಎರಡು ಒಳ್ಳೆಯ ಮಾತು, ಮುಖದಲ್ಲಿ ಮಂದಹಾಸ ಇವಿಷ್ಟು ಸಾಕು ಇಡೀ ಪರಿಸರವನ್ನು ಸುಂದರವಾಗಿಡಲು.
೩. ಕೋಪ, ಮಾತಿನಲ್ಲಿ ಮತ್ತು ಕೃತಿಯಲ್ಲಿ ವ್ಯಕ್ತವಾಗುವುದು ಬೇಡ. ಅದರಿಂದ ವೃಥಾ ತೊಂದರೆ.
೪. ಅವಶ್ಯಕತೆ ಇದ್ದಾಗ ಅವಶ್ಯಕವಾದುದನ್ನು ಮಾತ್ರ ಮಾತನಾಡಿ.ಅನಾವಶ್ಯಕವಾಗಿ ಮಾತನಾಡಬೇಡಿ.
೫. ನಿಮ್ಮ ಜೀವನ ಮಧುರವಾಗಿರಬೇಕೇ?
ಮಧುರವಾಗಿರುವುದೆಲ್ಲ ಬೇಕೆಂಬ ಬಯಕೆಯಿಂದ ದೂರವಿರಿ.
೬. ಕೀರ್ತಿಯನ್ನು ಎಂದೂ ಹಿಂಬಾಲಿಸದಿರು. ಏಕೆಂದರೆ ಅದು ಎಲ್ಲಾ ದುರ್ಗುಣಗಳಿಗೆ ದಾರಿ.
ಅದು ನಿನ್ನನ್ನೇ ಹಿಂಬಾಲಿಸುವಂತೆ ಸಾಧಿಸು.
೭. ನಮ್ಮಲ್ಲಿ ವಿವೇಕ ಜಾಗೃತವಾದಾಗ ಮಾತ್ರ ನಮ್ಮಿಂದ ಒಂದಷ್ಟು ಒಳ್ಳೆಯ ಕೆಲಸವಾಗುತ್ತದೆ.
೮. ಅಪಾತ್ರರಿಗೆ ಮಾಡಿದ ದಾನ ಒಳ್ಳೆಯ ಫಲವನ್ನು ಕೊಡುವುದಿಲ್ಲ ಬದಲಿಗೆ ನಮ್ಮನ್ನೇ ಸುಡುತ್ತದೆ.
೯. ಸಾಧ್ಯಾಸಾಧ್ಯತೆಗಳನ್ನು ದೇವರಿಗೆ ಬಿಡಿ ಆದರೆ ನಿಮ್ಮ ಪ್ರಯತ್ನ ಮಾತ್ರ ಗಟ್ಟಿಯಾಗಿರಲಿ.
೧೦. ನಾವು ಮಾಡುವ ಎಲ್ಲ ಒಳ್ಳೆಯ ಕೆಲಸಕ್ಕೆ ಆರಂಭದಲ್ಲಿ ವಿಘ್ನ ಕಟ್ಟಿಟ್ಟ ಬುತ್ತಿ. ಇದು ದೇವರು ಹೂಡುವ ಪರೀಕ್ಷೆಯಾಟ.

ನೆನಪುಗಳ ಮಾತು ಮಧುರ....೨
ಒಂದು ವರ್ಷದ ಹಿಂದೆ ನಡೆದ ಮಗಳ ಮದುವೆಯ ಆಲ್ಬಂನ್ನೊಮ್ಮೆ ತಿರುವಿ ಹಾಕುತ್ತಿದ್ದಾಗ ಮೂಡಿದ ಭಾವ ಈ ಬರಹಕ್ಕೆ ಹಿನ್ನೆಲೆ. ನನ್ನ ಅನುಭವಗಳನ್ನು ದಾಖಲಿಸುವುದರೊಂದಿಗೆ ವಿವಾಹ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಕೈ ಜೋಡಿಸಿದವರೆಲ್ಲರನ್ನೂ ಮತ್ತೊಮ್ಮೆ ಕೃತಙ್ಞತೆಯಿಂದ ಸ್ಮರಿಸುವುದು ಈ ಲೇಖನದ ಉದ್ದೇಶ.
ನೆನಪುಗಳ ಮಾತು ಮಧುರ....೨
ಮದುವೆಯ ಸಿದ್ಧತೆಗಳು ನೆಡೆಯುತ್ತಿದ್ದಂತೆ, ನನ್ನ ಮೈದುನರು ಮದುವೆಯಲ್ಲಿ ಪಟಾಕಿ ಹೊಡೆಯೋಣ ಎಂದಾಗ ನನಗೆ ಸ್ವಲ್ಪ ಹೆದರಿಕೆಯಾಗಿತ್ತು. ಸಂಜೆ ಆರತಕ್ಷತೆಗೆ ಬರುವ ಜನ ಜಾಸ್ತಿ. ಮಕ್ಕಳು ಮರಿ ಸಂಭ್ರಮದಿಂದ ಓಡಾಡುವ ಜಾಗ. ಛತ್ರದ ಹೊರಗೆ ಮದುವೆಗೆ ಬಂದವರ ವಾಹನಗಳು ನಿಂತಿರುತ್ತವೆ. ಶಾಮಿಯಾನ ಮತ್ತು ಲೈಟಿಂಗ್ ಇರುವೆಡೆ ಪಟಾಕಿಯಿಂದಾಗಿ ಏನಾದ್ರು ಅನಾಹುತವಾದರೆ ಎಂಬ ಸಹಜವಾದ ಆತಂಕ ನನ್ನಲ್ಲಿ ಮನೆಮಾಡಿತ್ತು.
ಮದುಮಕ್ಕಳಿಂದ ಪಟಾಕಿ ಹಚ್ಚುವ ಕಾರ್ಯ ಚಾಲನೆಯಾಯಿತು. ಹಚ್ಚಿದೊಡನೆ ಮೇಲೆ ಚಿಮ್ಮಿ, ಬಣ್ಣ ಬಣ್ಣದ ನಕ್ಷತ್ರಗಳಂತೆ ಕಂಗೊಳಿಸಿ, ಹೂಮಳೆ ಸುರಿಸಿದ ದೃಶ್ಯ ನಯನ ಮನೋಹರವಾಗಿತ್ತು. ಆಗಮಿಸಿದವರೆಲ್ಲಾ ನಿಂತು ನೋಡಿ ಆನಂದಿಸಿದರು. ಮಕ್ಕಳ ಸಂಭ್ರಮವಂತೂ ಮೇರೆ ಮೀರಿತ್ತು. ಆತಂಕ ಮರೆಯಾಗಿ ಆನಂದ ತಂದಿತು.

ನೆನಪುಗಳ ಮಾತು ಮಧುರ....೧
ಒಂದು ವರ್ಷದ ಹಿಂದೆ ನಡೆದ ಮಗಳ ಮದುವೆಯ ಆಲ್ಬಂನ್ನೊಮ್ಮೆ ತಿರುವಿ ಹಾಕುತ್ತಿದ್ದಾಗ ಮೂಡಿದ ಭಾವ ಈ ಬರಹಕ್ಕೆ ಹಿನ್ನೆಲೆ. ನನ್ನ ಅನುಭವಗಳನ್ನು ದಾಖಲಿಸುವುದರೊಂದಿಗೆ ವಿವಾಹ ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ಕೈ ಜೋಡಿಸಿದವರೆಲ್ಲರನ್ನೂ ಮತ್ತೊಮ್ಮೆ ಕೃತಙ್ಞತೆಯಿಂದ ಸ್ಮರಿಸುವುದು ಈ ಲೇಖನದ ಉದ್ದೇಶ.
ಶ್ರೀಯುತ ಕುಮಾರ ಸ್ವಾಮಿಯವರು ಶಿವಮೊಗ್ಗದ ಹೆಮ್ಮೆಯ ಕಲಾವಿದರಲ್ಲೊಬ್ಬರು. ಇವರು ರಾಜ್ಯಪ್ರಶಸ್ತಿ ವಿಜೇತ ಸ್ಯಾಕ್ಸೋಫೋನ್ ವಾದಕರು.ಇವರ ಸ್ಯಾಕ್ಸೋಫೋನ್ ವಾದನ ಕರ್ಣಾನಂದಕರವಾದುದು. ಇವರು ಸ್ಯಾಕ್ಸೋಫೋನ್ ನುಡಿಸುತ್ತಿದ್ದರೆ, ನಾವೆಷ್ಟೇ ಮದುವೆ ಮನೆಯ ಗದ್ದಲದಲ್ಲಿದ್ದರೂ ನಮ್ಮ ಕಿವಿ ನಮಗರಿವಿಲ್ಲದೆ ಅತ್ತ ಹೋಗುವುದು ಖಂಡಿತ..... ನನ್ನ ಮಗಳ ಮದುವೆಯ ಆರತಕ್ಷತೆಯಲ್ಲಿ ಇವರ ಸ್ಯಾಕ್ಸೋಫೋನ್ ವಾದನವು ಅಲೆ ಅಲೆಯಾಗಿ ತೇಲಿ ಬರುತ್ತಿತ್ತು.....ಭಕ್ತಿಗೀತೆಗಳು, ವಿವಾಹದ ಸಂದರ್ಭದಲ್ಲಿ
ನುಡಿಸಬಹುದಾದ ಚಲನಚಿತ್ರ ಗೀತೆಗಳನ್ನು ಒಂದಾದ ಮೇಲೆ ಒಂದರಂತೆ ನುಡಿಸಿ, ಆ ಸಂಜೆಯ ಆರತಕ್ಷತೆಗೆ ಮೆರಗನ್ನು ನೀಡಿದರು.... ಮದುವೆಗೆ ವಿಶಿಷ್ಟವಾದ ಕಳೆಯನ್ನು ತಂದುಕೊಟ್ಟರು.....ಬಾಲ್ಯದ ನೆನಪುಗಳು - ೧
ಸವಿ ಸವಿ ನೆನಪು-೧
ಬಾಲ್ಯದ ದಿನಗಳೆಂದರೆ ನಮ್ಮ ಜೀವನದ ಅತ್ಯಮೂಲ್ಯ ಕ್ಷಣಗಳು.ಆಗಿನ ಮುಗ್ಧತೆ, ಬೆಳೆದಂತೆ ಮಾಯವಾಗುತ್ತದೆ.ಈ ಮಾಲಿಕೆಯಲ್ಲಿ ನಾನು ನನ್ನ ಬಾಲ್ಯದ ಕೆಲವು ಕ್ಷಣಗಳನ್ನು ಮೆಲುಕು ಹಾಕಲು ಮತ್ತು ನಿಮ್ಮೊಂದಿಗೆ ಹಂಚಿಕೊಳ್ಳಲು ಇಚ್ಛಿಸುತ್ತೇನೆ. ಜೊತೆಜೊತೆಗೆ ಅಂದಿನ ದಿನಗಳಲ್ಲಿ ನನಗೆ ತುಂಬಾ ಅಚ್ಚುಮೆಚ್ಚಾದ ಮತ್ತು ನನ್ನ ಚಿಕ್ಕಂದಿನ ದಿನಗಳ ಮೇಲೆ ಪ್ರಭಾವ ಬೀರಿದ ಕೆಲವು ಚಲನಚಿತ್ರ ಗೀತೆಗಳನ್ನ ನೆನಪು ಮಾಡಿಕೊಳ್ಳುತ್ತಿದ್ದೇನೆ.
ನಾನು ನನ್ನ ಬಾಲ್ಯವನ್ನೆಲ್ಲ ಮಲೆನಾಡಿನ ಮಡಿಲಲ್ಲಿ, ಭದ್ರೆಯ ತಟದಲ್ಲಿ ಕಳೆದಿದ್ದೇನೆ.ನನ್ನ ಅಜ್ಜ,ಅಜ್ಜಿ,ಅಪ್ಪ,ಅಮ್ಮ ಮತ್ತು ನನ್ನ ಒಡಹುಟ್ಟಿದವರೊಂದಿಗೆ ಕಳೆದ ಆ ದಿನಗಳು ನನ್ನ ಪಾಲಿಗೆ ಅವಿಸ್ಮರಣೀಯ.ನನ್ನ ಎಳೆತನದ ದಿನಗಳು ಎಂದೊಡನೆ "ನಮ್ಮ ಮಕ್ಕಳು" ಸಿನಿಮಾ ನನ್ನ ಸ್ಮೃತಿಪಟಲದ ಮೇಲೆ ಮೂಡಿಬರುತ್ತದೆ.ದೃಶ್ಯ ಮಾಧ್ಯಮ ಒಂದು ಪರಿಣಾಮಕಾರಿಯಾದ ಮಾಧ್ಯಮ ಎಂಬುದರಲ್ಲಿ ಎರಡು ಮಾತಿಲ್ಲ.
ಆ ದಿನಗಳಲ್ಲಿ ಬಿಡುಗಡೆಯಾದ "ನಮ್ಮ ಮಕ್ಕಳು" ಮಧ್ಯಮವರ್ಗದ ಬಹುತೇಕ ಸಂಸಾರಗಳಲ್ಲಿ ತುಂಬಾ ಪ್ರಭಾವ ಬೀರಿದ ಅತ್ಯುತ್ತಮ ಚಿತ್ರವಾಗಿತ್ತು.ಈ ಚಿತ್ರ ನಮ್ಮ ಮನೆಯಲ್ಲೂ ಕೂಡ ಬದಲಾವಣೆಯ ಗಾಳಿಯನ್ನ ಬೀಸಿತ್ತು.ಪ್ರತಿದಿನ ಸ್ನಾನ ಮುಗಿಸಿ ದೇವರಿಗೊಂದು ನಮಸ್ಕಾರ ಹಾಕುವುದರೊಂದಿಗೆ ಮುಗಿಯುತ್ತಿದ್ದ ನಮ್ಮ ಪೂಜೆ ಸಿನಿಮಾದ ಪ್ರಭಾವದಿಂದಾಗಿ ಮನೆಯವರೆಲ್ಲಾ ಒಟ್ಟಾಗಿ ಸೇರಿ ಶ್ಲೋಕ, ಹಾಡುಗಳನ್ನ ಹೇಳಿಕೊಳ್ಳುತ್ತಾ ಭಕ್ತಿಪೂರ್ವಕವಾಗಿ ಮುಗಿಸುವಂತಾಯ್ತು. ಇದರಿಂದ ಒಳ್ಳೆಯ ಸಂಸ್ಕಾರ ಪಡೆಯುವುದರ ಜೊತೆಗೆ ಕುಟುಂಬದಲ್ಲಿ ಸ್ನೇಹ, ಪ್ರೀತಿ ಹೆಚ್ಚಾಗಲು ದಾರಿಯಾಯಿತು.
ಪ್ರತಿ ಮಂಗಳವಾರ, ಶುಕ್ರವಾರಗಳಂದು ನಮ್ಮ ಮನೆಯಲ್ಲಿ ದೇವರಿಗೆ ವಿಶೇಷವಾದ ಪೂಜೆ.ಅಂದು ನಮ್ಮ ತಂದೆಯವರು ಪೂಜೆ ಪ್ರಾರಂಭಿಸುವ ವೇಳೆಗೆ ನಾನು,ನನ್ನ ತಮ್ಮ-ತಂಗಿಯರು ದೇವರ ಮನೆಯಲ್ಲಿ ಪೂಜೆಗೆ ಸಹಕರಿಸುತ್ತಿದ್ದೆವು. ಮಂಗಳಾರತಿಯ ಹೊತ್ತಿಗೆ ನಮ್ಮ ತಾಯಿಯವರೂ ಬೆಳಗಿನ ತಿಂಡಿ ಮಾಡುವುದನ್ನು ಮುಗಿಸಿ ನಮ್ಮೊಡನೆ ಸೇರುತ್ತಿದ್ದರು.ತೀರ್ಥ-ಪ್ರಸಾದದ ನಂತರ ತಿಂಡಿ ಮುಗಿಸಿ ಶಾಲೆಗೆ ಹೋಗುವ ಪದ್ಧತಿ ಬೆಳೆದು ಬಂತು.ಮೊದಲೆಲ್ಲಾ ಯಾಂತ್ರಿಕವಾಗಿ ಮುಗಿಯುತ್ತಿದ್ದ ಪೂಜೆ ದೃಶ್ಯ ಮಾಧ್ಯಮದ ಪ್ರಭಾವದಿಂದಾಗಿ ಮನೆಯಲ್ಲಿ ಆತ್ಮೀಯ ವಾತಾವರಣವನ್ನುಂಟು ಮಾಡಿತ್ತು. ಚಿಕ್ಕವರಾದ ನಮಗೆ ಹಿರಿಯರಿಗೆ ಗೌರವಿಸುವ ,ಕಿರಿಯರಿಗೆ ಪ್ರೀತಿ ತೋರಿಸುವ ಮಾರ್ಗದರ್ಶನ ನೀಡಿತು.ಈ ಘಟನೆ ನನ್ನ ಮನಸ್ಸಿನಿಂದ ಅಳಿಸಲು ಎಂದಿಗೂ ಸಾಧ್ಯವಿಲ್ಲ.’
’ನಿನ್ನೊಲುಮೆ ನಮಗಿರಲಿ ತಂದೆ
ಕೈ ಹಿಡಿದು ನೀ ನೆಡೆಸು ಮುಂದೆ’ ಪ್ರತಿದಿನ ದೇವರ ಮುಂದೆ ಭಕ್ತಿಪೂರ್ವಕವಾಗಿ ಹೇಳುತ್ತಿದ್ದೆವು. ಈಗಲೂ ಈ ಹಾಡಿನ ಸಾಲುಗಳನ್ನು ಆಗಾಗ್ಗೆ ಗುಣುಗುಣಿಸುತ್ತಿರುತ್ತೇನೆ.
’ ನಂಬಿದರೆ ಭಯವಿಲ್ಲ ನಂಬದಿರೆ ಬಾಳಿಲ್ಲ
ಅಂಬಿಗನೆ ನೀ ನೆಡೆಸು ಈ ಬಾಳನೌಕೆ
ಯಾವ ನೋವೇ ಬರಲಿ ಎದೆಗುಂದದಿರಲಿ
ಸತ್ಯ ಮಾರ್ಗದೆ ನೆಡೆವ ಶಕ್ತಿ ಕೊಡು ತಂದೆ’
ಎಷ್ಟೊಂದು ಅರ್ಥವತ್ತಾದ ಸಾಲುಗಳು ಅಲ್ಲವೆ? ಇಂತಹ ಹಾಡುಗಳು ಎಲ್ಲ ಕಾಲಕ್ಕೂ ಪ್ರಸ್ತುತವಲ್ಲವೇ? ಇಂತಹ ಉತ್ತಮ ಅಭಿರುಚಿಯ ಸಿನಿಮಾವನ್ನ ಈಗಿನ ಮಕ್ಕಳೂ ನೋಡಿ ಕಲಿಯುವುದಿದೆ ಎಂದು ನಿಮಗನ್ನಿಸುವುದಿಲ್ಲವೆ?
ಈ ಹಾಡಿನ ಸಾಹಿತ್ಯವನ್ನೊಮ್ಮೆ ನೋಡಲು ಇಲ್ಲಿ ಕ್ಲಿಕ್ಕಿಸಿ.
"ನಿನ್ನೊಲುಮೆ ನಮಗಿರಲಿ ತಂದೆ"

ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)